ತೋಂಟದಾರ್ಯ ಜಾತ್ರಾಮಹೋತ್ಸವ: ಪ್ರಸಕ್ತ ಸಾಲಿಗೆ ನೂತನ ತೇರು ನಿರ್ಮಾಣ: ಎಸ್​. ಎಸ್​. ಪಟ್ಟಣಶೆಟ್ಟಿ

04GDG01
Published on

ವಿಜಯವಾಣಿ ಸುದ್ದಿಜಾಲ ಗದಗ

ನಗರದ ತೋಂಟದಾರ್ಯ ಮಠದ ಪ್ರಸಕ್ತ ಸಾಲಿನ ಜಾತ್ರಾ ಮಹೋತ್ಸವವು ಏ.5 ರಂದು ಏ.11 ರ ವರೆಗೆ ಏರ್ಪಡಿಸಲಾಗಿದೆ ಎಂದು  ಎಸ್​.ಎಸ್​. ಪಟ್ಟಣಶೆಟ್ಟಿ ಹೇಳಿದರು.

ನಗರದ ಪತ್ರಿಕಾಭವನದಲ್ಲಿ ಶುಕ್ರವಾರ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಯಡಿಯೂರು ಸಿದ್ಧಲಿಂಗೇಶ್ವರ ಮಠದಲ್ಲಿ ರಥೋತ್ಸವ ನಡೆಯುವ ದಿನದಂದೇ ಪ್ರತಿವರ್ಷ ಗದಗ ತೋಂಟದಾರ್ಯ ಮಠದಲ್ಲಿಯೂ ರಥೋತ್ಸವ ನಡೆಯಲಿದೆ. ಪ್ರತಿದಿನ ಸಂಜೆ 7.30 ಕ್ಕೆ ಶೇಗುಣಸಿ ವಿರಕ್ತಮಠದ ಮಹಾಂತಪ್ರಭು ಶ್ರೀಗಳಿಂದ ಪ್ರವಚನ ನಡೆಯಲಿದೆ ಎಂದು ತಿಳಿಸಿದರು.

ಏ. 5 ರಂದು ಶನಿವಾರ ಬೆಳಗ್ಗೆ 8.30 ಕ್ಕೆ ಷಟಸ್ಥಲ ಧ್ವಜಾರೋಹಣ, ಏ. 9 ರಂದು ರಾತ್ರಿ 8 ಗಂಟೆಗೆ ಕಳಸಾರೋಹಣ ಜರುಗಲಿದೆ. ಏ. 12 ರಂದು ಸಂಜೆ 6.30ಕ್ಕೆ ಜಾತ್ರಾ ಮಹೋತ್ಸವ ಜಾತ್ರಾ ಮಹೋತ್ಸವ ಪ್ರಾರಂಬೋತ್ಸವ ಕಾರ್ಯಕ್ರಮ ಜರುಗಲಿದೆ. ಸಾನ್ನಿಧ್ಯವನ್ನು ತೋಂಟದ ಸಿದ್ದರಾಮ ಶ್ರೀಗಳು ಮತ್ತು ಗುಳೇದಗುಡ್ಡದ ಗುರುಬಸವ ಶ್ರೀಗಳು ವಹಿಸಲಿದ್ದಾರೆ. ಶಾಸಕ ಬಸವರಾಜ ರಾಯರೆಡ್ಡಿ ಕಾರ್ಯಕ್ರಮ ಉದ್ಘಾಟಿಸುವರು.ಆದಿಚುಂಚನಗಿರಿ ಶಾಖಾಮಠದ ಕಾರ್ಯದಶಿರ್ ಜೆ.ಎನ್​. ರಾಮಕೃಷ್ಣಗೌಡರನ್ನು ಸನ್ಮಾನಿಸಲಾಗುವುದು. ಎಸ್​.ವಿ. ಸಂಕನೂರು ಗ್ರಂಥಲೋಕಾರ್ಪಣೆ ಮಾಡುವರು ಎಂದು ತಿಳಿಸಿದರು.

ಏ.13 ರಂದು ಸಂಜೆ 6.30 ಗಂಟೆಗೆ ಮಹಾರಥೋತ್ಸವ ಜರುಗಲಿದೆ. ನಂತರ ನಡೆಯುವ ವೇದಿಕೆ ಕಾರ್ಯಕ್ರಮದಲ್ಲಿ ನಾಡಿನ ವಿವಿಧ ಮಠಾಧೀಶರು, ಎಚ್​.ಕೆ. ಪಾಟೀಲ, ಸಿ.ಸಿ. ಪಾಟೀಲ, ಎಸ್​.ಎಸ್​. ಪಾಟೀಲ, ಡಿ.ಆರ್​. ಪಾಟೀಲ ಸೇರಿದಂತೆ ವಿವಿಧ ರಾಜಕೀಯ ಮುಖಂಡರು ಭಾಗವಹಿಸುವರು. ಸಾಹಿತಿ ಡಾ. ರಾಜಶೇಖರ ಮಠಪತಿ ಉಪನ್ಯಾಸ ನೀಡುವರು ಆಕಾಶವಾಣಿ ಕಲಾವಿದ ಸದಾಶಿವ ಐಹೊಳೆ ಅವರಿಂದ ವಚನ ಸಂಗೀತ ನಡೆಯಲಿದೆ ಎಂದು ತಿಳಿಸಿದರು.

ಏ. 14 ಸಂಜೆ 6.30ಕ್ಕೆ ಲು ರಥೋತ್ಸವ ನಂತರ ವೇದಿಕೆ ಕಾರ್ಯಕ್ರಮ ಜರುಗಲಿದ್ದು, ಸಭಾಪತಿ ಬಸವರಾಜ ಹೊರಟ್ಟಿ ಸೇರಿದಂತೆ ವಿವಿಧ ಗಣ್ಯರು ಮಠಾಧೀಶರು ಪಸ್ಥಿತಿ ಇರುವರು. ಹಿಮದೂಸ್ಥಾನಿ ಹಾಯಯಕಿ ಅರ್ಚನಾ ಸುತಾರ ಅವರಿಂದ ವಚನ ಸಂಗೀತ ನೆರವೇರಲಿದೆ. ಏ.15 ರಂದು ಮಂಗಲೋತ್ಸವ ಕಾರ್ಯಕ್ರಮ ನಡೆಯಲಿದೆ. ಸಂಸದ ಬಸವರಾಜ ಬೊಮ್ಮಾಯಿ ಸೇರಿದಂತೆ ವಿವಿಧ ರಾಜಕೀಯ ಮುಖಂಡರು ಮತ್ತು ನಾಡಿನ ವಿವಿಧ ಮಠಾಧೀಶರು ಉಪಸ್ಥಿತಿ ಇರುವರು ಎಂದು ಎಸ್​.ಎಸ್​. ಪಟ್ಟಣಶೆಟ್ಟಿ ತಿಳಿಸಿದರು. ಜಾತ್ರಾ ಮಹೋತ್ಸವ ನಿಮಿತ್ಯ ತೋಂಟದಾರ್ಯ ಕಲ್ಯಾಣ ಮಂಠಪದಲ್ಲಿ ಕೃಷಿ ಮೇಳ, ಅರಣ್ಯ, ತೋಟಗಾರಿಕೆ, ಕೃಷಿ ಹಾಗೂ ಮೀನುಗಾರಿಕೆ, ಪಶ ಸಂಗೋಪನೆ, ರೇಷ್ಮೆ ಕೃಷಿ ಸಂಬಂಧಿಸಿದ ವಿಷಯಗಳ ಕುರಿತು ವಿಚಾರ ಗೋಷ್ಠಿಗಳು ಜರುಗಲಿವೆ ಎಂದು ಪಟ್ಟಣಶೆಟ್ಟಿ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಜಾತಾ ಮಹೋತ್ಸವ ಸಮಿತಿ ಅಧ್ಯಕ್ಷ ದನೇಶ ದೇಸಾಯಿ, ಉಪಾಧ್ಯಕ್ಷ ಕರವೀರಯ್ಯ ಕೋರಿಮಠ, ಕಾರ್ಯದಶಿರ್ ಶಿವಪ್ಪ ಕತ್ತಿ, ಸಂಟನಾ ಕಾರ್ಯದಶಿರ್ ನಾಗಪ್ಪ ಗೋಜನೂರು, ಕೋಶಾಧ್ಯಕ್ಷ ವೀರಣ್ಣ ಗೊಡಚಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net