ಪಂಡಿತ ಪುಟ್ಟರಾಜರು ನಾಡು ಕಂಡ ವಿಸ್ಮಯ: ತೋಂಟದ ಸಿದ್ಧರಾಮ ಶ್ರೀಗಳು

08GDG02
Published on

ವಿಜಯವಾಣಿ ಸುದ್ದಿಜಾಲ ಗದಗ

ಪಂಡಿತ ಡಾ. ಪುಟ್ಟರಾಜ ಗವಾಯಿಗಳು ಅಂಧರ ಅನಾಥರ ಬಾಳಿನ ನಂದಾದೀಪ, ಆಶ್ರಯದಾತರು. ಅವರು ಅಂಧರಾದರೂ ಏನನ್ನಾದರೂ ಸಾಧಿಸಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಈ ನಾಡು ಕಂಡ ವಿಸ್ಮಯ ಎಂದು ಡಾ. ತೋಂಟದ ಸಿದ್ಧರಾಮ ಶ್ರೀಗಳು ಹೇಳಿದರು.

ತೋಂಟದಾರ್ಯ ಮಠದಲ್ಲಿ ಇತ್ತೀಚೆಗೆ ಜರುಗಿದ ಶಿವಾನುಭವ ಕಾಯಕ್ರಮದಲ್ಲಿ ಸಾನ್ನಿಧ್ಯವಹಿಸಿ ಮಾತನಾಡಿದ ಅವರು, ಪಂಡಿತ ಡಾ. ಪುಟ್ಟರಾಜ ಕವಿ ಗವಾಯಿಗಳವರು ಶ್ರೇಷ್ಠ ಸಾಧಕರು ಮತ್ತು ಪಂಡಿತರು ಹೌದು. ಅನೇಕ ಪುರಾಣ, ಸಾಹಿತ್ಯ ಕೃತಿಗಳನ್ನು ಬರೆದಿದ್ದಾರೆ. ಅವರು ಕನ್ನಡ, ಸಂಸತ, ಹಿಂದಿ ಬಲ್ಲವರಾಗಿದ್ದರು. ಅಂತೆಯೇ ಅವರನ್ನು ತ್ರಿಭಾಷಾ ಕವಿ ಎಂದು ಕರೆಯುತ್ತಾರೆ. ಚಂಪೂ ಕೃತಿಗಳನ್ನು ರಚಿಸಿದ್ದಾರೆ. ಪುಟ್ಟರಾಜರು ಉಭಯಗಾನ ವಿಶಾರದರು. ಅವರು ಕಂಠ, ಸಂಗೀತ ಹಾಗೂ ವಾದ್ಯ ಸಂಗೀತದಲ್ಲಿ ಪರಿಣತಿಯನ್ನು ಪಡೆದಿದ್ದರಿಂದ ಅವರನ್ನು ಉಭಯಗಾನ ವಿಶಾರದರು ಎಂದು ಕರೆಯುತ್ತಿದ್ದರು. ನಾಟಕಗಳ ಮೂಲಕ ಜನರಲ್ಲಿ ಧಾಮಿರ್ಕ ಆಧ್ಯಾತ್ಮಿಕ, ಜಾಗೃತಿ ಮೂಡಿಸಿದರು. ಲೋಕದಂತೆ ಬಾರದು ಲೋಕದಂತೆ ಇರರು, ಪುಟ್ಟರಾಜರಿಗೆ ಪುಟ್ಟರಾಜರೇ ಹೋಲಿಕೆ. ಅವರ ಈ ವೈಶಿಷ್ಟ$್ಯ ಸಾಧನೆಗೆ ಪ್ರಶಸ್ತಿ ಪುರಸ್ಕಾರಗಳು ಲಭಿಸಿವೆ ಎಂದು ಶ್ರೀಗಳು ಹೇಳಿದರು.

ಪಿಪಿಜಿ ಸಂಗೀತ ಮಹಾವಿದ್ಯಾಲಯದ ಪ್ರಾಚಾರ್ಯ ವಿ. ಎಂ. ಗುರುಮಠ ಉಪನ್ಯಾಸ ನೀಡಿ ಮಾತನಾಡಿ, ಪುಟ್ಟರಾಜರು 75 ಗ್ರಂಥಗಳನ್ನು ಬರೆದಿದ್ದಾರೆ. ಅಂಧತೆ ಇದ್ದರೂ ವಿಶೇಷ ಕಣ್ಣುಗಳಿಂದ ಸಮಾಜವನ್ನು ನೋಡಿ, ಜನರಲ್ಲಿ ಧಾಮಿರ್ಕ ಆಧ್ಯಾತ್ಮಿಕ ಜಾಗೃತಿ ಮೂಡಿಸಿದರು. ಅವರು ಪೀಠಾಧಿಪತಿಯಾದ ನಂತರ ವಿರೇಶ್ವರ ಪುಣ್ಯಾಶ್ರಮವನ್ನು ತುಂಬಾ ಎತ್ತರಕ್ಕೆ ಬೆಳೆಸಿದರು. ಪಂಚಾರಿ ನಾಟ್ಯ ಸಂವನ್ನು ಸ್ಥಾಪಿಸಿದರು. ಅವರಲ್ಲಿ ಸಂಗೀತ ಅಭ್ಯಾಸ ಮಾಡಿದವರು ಅನೇಕರು, ದೊಡ್ಡ ದೊಡ್ಡ ಸಂಗೀತ ಸಾಧನೆ ಮಾಡಿದ್ದಾರೆ. ಅಂಧರಿಗೆ ಅನಾಥರಿಗೆ ಆಶ್ರಯ ಕೊಡದೆ ಹೋಗಿದ್ದರೆ ಭಿೆ ಬೇಡಿ ಬದುಕು ಕಟ್ಟಿಕೊಳ್ಳಬೇಕಾಗುತ್ತಿತ್ತು. ಆದರೆ ಪುಟ್ಟರಾಜರು ಅವರಿಗೆ ಸಂಗೀತ ವಿದ್ಯೆ ಕಲಿಸಿ ಸಮಾಜದಲ್ಲಿ ಉತ್ತಮ ಬದುಕು ಕಟ್ಟಿಕೊಟ್ಟರು ಎಂದರು.

ಪುಟ್ಟರಾಜ ಕವಿ ಗವಾಯಿಗಳ ಜಯಂತಿ ಪ್ರಯುಕ್ತ ಗದುಗಿನ ಸಿದ್ದಲಿಂಗನಗರದ ಸಂಗೀತ ಪ್ರೌಢಶಾಲೆಯ ಅಂಧ ಸಂಗೀತ ಶಿಕ ನಾಗಪ್ಪ ಶಿರೋಳ ಅವರನ್ನು ಸನ್ಮಾನಿಸಲಾಯಿತು. ಪಿ. ಎಸ್​. ಸಂಶಿಮಠ, ರಾಜು ಕುರಡಗಿ, ರಾಜಣ್ಣ ಗುಡಿಮನಿ, ಮೃತ್ಯುಂಜಯ ಹಿರೇಮಠ, ಬಾಲಚಂದ್ರ ಭರಮಗೌಡ್ರ, ಉಮೇಶ ಪುರದ, ಪ್ರಭು ಗಂಜಿಹಾಳ, ವೀರಣ್ಣ ಗೋಟಡಕಿ ಹಲವರು ಇದ್ದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net