ತೋಂಟದ ಸಿದ್ಧಲಿಂಗಶ್ರೀ ಕೃಷಿ ಮೇಳ, ಕೃಷಿ ಗೋಷ್ಠಿಗಳು

07GDG05
Published on
ಗದಗ: ಜಗದ್ಗುರು ತೋಂಟದಾರ್ಯ ಜಾತ್ರಾ ಮಹೋತ್ಸವದ ಅಂಗವಾಗಿ ನಗರದ ತೋಂಟದ ಸಿದ್ಧಲಿಂಗೇಶ್ವರ ಕಲ್ಯಾಣ ಮಂಟಪದಲ್ಲಿ ಏ.೯ ಮತ್ತು ೧೦ ರಂದು ಬೆಳಗ್ಗೆ ೧೦ ರಿಂದ ರಾತ್ರಿ ೯ರವರಿಗೆ ತೋಂಟದ ಸಿದ್ಧಲಿಂಗಶ್ರೀ ಕೃಷಿ ಮೇಳ ಹಾಗೂ ಕೃಷಿಗೆ ಸಂಬಧಿಸಿದ ಉಪಕಸುಬುಗಳ ವಿವಿಧ ಗೋಷ್ಠಿಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ನಿವೃತ್ತ ಕೃಷಿ ಅಧಿಕಾರಿ ಸುರೇಶ ಕುಂಬಾರ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ,  ಏ.೯ರಂದು ಮಧ್ಯಾಹ್ನ ೩ಕ್ಕೆ ನಗರದ ತೋಂಟದ ಸಿದ್ಧಲಿಂಗೇಶ್ವರ ಕಲ್ಯಾಣ ಮಂಟಪದಲ್ಲಿ ಕೃಷಿ ಮೇಳದ ಉದ್ಘಾಟನಾ ಸಮಾರಂಭ ಹಮ್ಮಿಕೊಳ್ಳಲಾಗಿದೆ. ಸಾನ್ನಿಧ್ಯ ಜಗದ್ಗುರು ಡಾ.ತೋಂಟದ ಸಿದ್ಧರಾಮ ಸ್ವಾಮೀಜಿ ವಹಿಸುವರು. ಜಗದ್ಗುರು ತೋಂಟದಾರ್ಯ ಮಠದ ಆಡಳಿತಾಧಿಕಾರಿ ಶಿವಾನಂದ ಪಟ್ಟಣಶೆಟ್ಟರ ಕಾರ್ಯಕ್ರಮ ಉದ್ಘಾಟಿಸುವರು. ಕರ್ನಾಟಕ ಕೋ-ಆಪರೇಟಿವ್ ಕ್ರೆಡಿಟ್ ಬ್ಯಾಂಕ್ ಅಧ್ಯಕ್ಷ ಶಿವಕುಮಾರಗೌಡ ಪಾಟೀಲ ಅಧ್ಯಕ್ಷತೆ ವಹಿಸುವರು. ಮಲ್ಲಣ್ಣ ಕಲಗೂಡಿ, ಎಂ.ಎಸ್.ಪಾಟೀಲ, ಅರವಿಂದ ರಾಜಪುರೋಹಿತ, ಮಲ್ಲಯ್ಯ ಗುರುಬಸಪ್ಪನಮಠ, ಗೊಣಿಬಸಪ್ಪ ಕೊರ್ಲಹಳ್ಳಿ, ಶಿವಾನಂದ ಕತ್ತಿ, ವೀರಣ್ಣ ಗೊಡಜಿ, ರುದ್ರಣ್ಣ ಗುಳಗುಳಿ ಭಾಗವಹಿಸುವರು ಎಂದರು.
ಏ.೧೦ ರಂದು ಬೆಳಗ್ಗೆ ೧೦.೩೦ರಿಂದ ೧೧.೩೦ರವರಿಗೆ ಕೃಷಿಗೆ ಸಂಬAಧಿಸಿದ ವಿವಿಧ ಕೃಷಿ ಗೋಷ್ಠಿಯನ್ನು ಹಮ್ಮಿಕೊಳ್ಳಲಾಗಿದೆ. ಜಗದ್ಗುರು ಡಾ.ತೋಂಟದ ಸಿದ್ಧರಾಮ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಧಾರವಾಡ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಡಾ.ಪಿ.ಎಲ್.ಪಾಟೀಲ ಕಾರ್ಯಕ್ರಮ ಉದ್ಘಾಟಿಸುವರು. ಅಧ್ಯಕ್ಷತೆ ತೋಂಟದಾರ್ಯ ಜಾತ್ರಾಮಹೋತ್ಸವ ಸಮಿತಿ ಅಧ್ಯಕ್ಷ ಡಾ.ಧನೇಶ ದೇಸಾಯಿ ವಹಿಸುವರು. ಕೃಷಿ ಜಂಟಿ ನಿರ್ದೇಶಕಿ ಡಾ.ತಾರಾಮಣಿ ಜಿ.ಎಚ್., ಡಾ.ಗುರುನಾಥಗೌಡ ಓದುಗೌಡರ, ಡಾ.ಎಸ್.ಎಲ್.ಪಾಟೀಲ, ಚನ್ನಪ್ಪ ಷಣ್ಮುಖಿ, ವೆಂಕಟೇಶ ಧೊಂಗಡೆ, ಗೋಣಿಬಸಪ್ಪ ಕೊರ್ಲಹಳ್ಳಿ, ಕೆ.ಎಸ್.ಪಾಟೀಲ ಭಾಗವಹಿಸುವರು ಎಂದರು.
ಜಾನುವಾರ ಮೇಳ:
ಜಗದ್ಗುರು ತೋಂಟದಾರ್ಯ ಜಾತ್ರಾ ಮಹೋತ್ಸವ ಸಮಿತಿಯಿಂದ ಏ.೯ ರಂದು ಬೆಳಗ್ಗೆ ೧೦ರಿಂದ ಸಾಯಂಕಾಲ ೫ವರಿಗೆ ಜಾನುವಾರ ಮೇಳ ಹಮ್ಮಿಕೊಳ್ಳಲಾಗಿದೆ. ಜಿಲ್ಲೆಯ ವಿವಿಧ ಭಾಗಗಳಿಂದ ಜಾನುವಾರಗಳು ಈ ಮೇಳದಲ್ಲಿ ಭಾಗವಹಿಸುತ್ತದೆ. ಸ್ಥಳೀಯ ಜಾನುವಾರ ಸೇರಿದಂತೆ ೫೦೦ಕ್ಕೂ ಅಧಿಕ ಜಾನುವಾರ ಸೇರುವ ಭರವಸೆ ಇದೆ. ಹೀಗಾಗಿ ಜಾನುವಾರ ಮೇಳದಲ್ಲಿ ಜಿಲ್ಲೆಯ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು. ಹಾಗೆ ಜಾನುವಾರ ಮೇಳದಲ್ಲಿ ಭಾಗವಹಿಸಬೇಕು ಎಂದು ಸಲಹೆ ನೀಡಿದರು.
೭ ವಿವಿಧ ವಿಷಯಗಳ ಕುರಿತು ಕೃಷಿ  ಗೋಷ್ಠಿ:
ಏ.೯ರಿಂದ ೧೦ರವರಿಗೆ ನಗರದ ತೋಂಟದಾರ್ಯ ಕಲ್ಯಾಣ ಕೇಂದ್ರದಲ್ಲಿ ಕೃಷಿ ಹಾಗೂ ಕೃಷಿ ಸಂಬAಧಿತ ವಸ್ತುಗಳ ಪ್ರದರ್ಶನ ಹಾಗೂ ಮಾರಾಟ ಮೇಳವನ್ನು ಹಮ್ಮಿಕೊಳ್ಳಲಾಗಿದೆ. ಕೃಷಿ ಗೋಷ್ಠಿಯಲ್ಲಿ ಗೋಷ್ಠಿ-೧ರಲ್ಲಿ ಕೃಷಿ ಆದಾಯವನ್ನು ದ್ವಿಗುಣಗೊಳಿಸಲು ಅನುಸರಿಸುವ ವೈಜ್ಞಾನಿಕ ಕ್ರಮಗಳು ಕುರಿತು ಗೋಷ್ಠಿ, ಗೋಷ್ಠಿ-೨ ಕೃಷಿ ಮತ್ತು ಪರಿಸರ ಸರಂಕ್ಷಣೆಯಲ್ಲಿ ಅರಣ್ಯಗಳ ಪಾತ್ರ, ಗೋಷ್ಠಿ-೩ ಮೀನುಗಾರಿಕೆಯಲ್ಲಿ ಆಧುನಿಕ ಪದ್ಧತಿಗಳು, ಗೋಷ್ಠಿ-೪ ತೋಟಗಾರಿಕೆಯಲ್ಲಿ ಇತ್ತೀಚಿನ ಸಂಶೋಧನೆಗಳು ಹಾಗೂ ಆಧುನಿಕ ತಂತ್ರಜ್ಞಾನಗಳ ಅಳವಡಿಕೆ, ಗೋಷ್ಠಿ-೫ ಗ್ರಾಮೀಣಾಭಿವೃದ್ಧಿಯಲ್ಲಿ ಪಶುಸಂಗೋಪನೆ ಕುರಿತು  ಆಧುನಿಕ ತಂತ್ರಜ್ಞಾನಗಳ ಅಳವಡಿಕೆ, ಗೋಷ್ಠಿ-೬ ರೇಷ್ಮ ಕೃಷಿಯಲ್ಲಿ ಆಧುನಿಕ ತಂತ್ರಜ್ಞಾನಗಳ ಅಳವಡಿಕೆ, ಗೋಷ್ಠಿ-೭ ಕೃಷಿ ಉತ್ಪಗಳ ಮೌಲ್ಯವರ್ಧನೆ ಮಾರಾಟ ಮತ್ತು ರೈತ ಉತ್ಪಾಸಕ ಕಂಪನಿಗಳ ಪುನಶ್ಚೇತನ ಕುರಿತು ಕೃಷಿ ಗೋಷ್ಠಿಯನ್ನು ಹಮ್ಮಿಕೊಳ್ಳಲಾಗಿದೆ.
ಪತ್ರಿಕಾಗೋಷ್ಠಿಯಲ್ಲಿ ರುದ್ರಣ್ಣ ಗುಳಗುಳಿ, ಸಿದ್ದಣ್ಣ ಹನುಮಸಾಗರ, ವೀರಣ್ಣ ಗೊಡಚಿ ಸೇರಿದಂತೆ ಇತತರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net