

ಲಿಂ.ತೋಂಟದ ಸಿದ್ಧಲಿಂಗ ಶ್ರೀಗಳು ಸ್ವಾಮಿತ್ವಕ್ಕೆ ನತೆ ತಂದ ಶ್ರೇಷ್ಠ ಸಂತರು: ಡಾ. ಗೊ.ರು ಚನ್ನಬಸಪ್ಪ
ವಿಜಯವಾಣಿ ಸುದ್ದಿಜಾಲ, ಗದಗ
ಲಿಂ.ತೋಂಟದ ಸಿದ್ಧಲಿಂಗ ಶ್ರೀಗಳ ನಡೆ ಮತ್ತು ನುಡಿಗಳಲ್ಲಿ ಒಂದಾಗಿದ್ದರು. ಧರ್ಮಗುರು ಎಂಬ ಸ್ಥಾನಕ್ಕೆ ಅಥವಾ ಸ್ವಾಮಿತ್ವಕ್ಕೆ ನತೆ ತಂದುಕೊಟ್ಟ ಅವರು ಶ್ರೇಷ್ಠ ಸಂತರಾಗಿದ್ದರು ಎಂದು ನಾಡೋಜ ಡಾ. ಗೊ.ರು. ಚನ್ನಬಸಪ್ಪ ಹೇಳಿದರು.
ನಗರದ ತೋಂಟದಾರ್ಯ ಮಠದಲ್ಲಿ ಸೋಮವಾರ ಜರುಗಿದ ಲಿಂ. ತೋಂಟದ ಸಿದ್ಧಲಿಂಗ ಶ್ರೀಗಳ 6ನೇ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿ ಅವರು, ಸದ್ಭಕ್ತಿ, ಸದಾಚಾರ, ಸದುವಿನಯದ ಸಾಕಾರಮೂತಿರ್ಗಳು ಆಗಿದ್ದ ಸಿದ್ಧಲಿಂಗ ಶ್ರೀಗಳು ಶ್ರಮಿಕರ, ದಲಿತರ ತಲ್ಲಣಗಳಿಗೆ ನಿರಂತರ ಸ್ಪಂದಿಸುತ್ತಿದ್ದರು. ಅಂಥ ಮಹಾಚೇತನದ ಸಂಪರ್ಕ ನನಗೆ ಇತ್ತು ಎಂಬುದೇ ವಿಶೇಷ ಎಂದರು.
ಸಚಿವ ಎಚ್. ಕೆ. ಪಾಟೀಲ ಮಾತನಾಡಿ, ಗೊ.ರು. ಚೆನ್ನಬಸಪ್ಪ ಅವರಿಗೆ ಡಾ. ತೋಂಟದ ಸಿದ್ಧಲಿಂಗ ಶ್ರೀಗಳ ಹೆಸರಿನ ಈ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಮಾಡಲು ಹೆಮ್ಮೆ ಎನಿಸುತ್ತದೆ. ಶರಣ ಸಾಹಿತ್ಯವನ್ನು ಮನೆಮನೆಗೆ ಹಾಗೂ ಮನಮನಕ್ಕೆ ತಲುಪಿಸಲು ಚನ್ನಬಸಪ್ಪನವರು ಶ್ರಮವಹಿಸಿದ್ದಾರೆ. ಈ ಹಿಂದೆ ಭಾಷಾ ಆಯೋಗದ ಮುಖ್ಯಸ್ಥರಾಗಿ ಕೇಂದ್ರದ ಕಾನೂನುಗಳನ್ನು ತನ್ನಡಕ್ಕೆ ತರ್ಜುಮೆ ಮಾಡುವಲ್ಲಿ ಬಹುದೊಡ್ಡ ಕೊಡುಗೆ ನೀಡಿದ್ದಾರೆ. ಗ್ರಾಮೀಣಾಭಿವೃದ್ಧಿ ಇಲಾಖೆ ಸಚಿವನಾಗಿದ್ದ ಸಂದರ್ಭದಲ್ಲಿ ಜಾನಪದ ವಿಶ್ವವಿದ್ಯಾಲಯದ ಮೂಲಕ ಕರ್ನಾಟಕದ ಎಲ್ಲಾ ಗ್ರಾಮಗಳ ಇತಿಹಾಸವುಳ್ಳ "ಗ್ರಾಮ ಚರಿತೆ' ಗ್ರಂಥಗಳನ್ನು ಪ್ರಕಟಿಸಬೇಕೆಂದು ಚನ್ನಬಸಪ್ಪನವರು ನನಗೆ ಸಲಹೆ ನೀಡಿದ್ದರು. ಆ ಪ್ರಕಾರ ಅಂದು ನಮ್ಮ ಸರ್ಕಾರ 10 ಕೋಟಿ ರೂ. ಬಿಡುಗಡೆ ಮಾಡಿ ಗ್ರಾಮಚರಿತೆ ಗ್ರಂಥಗಳನ್ನು ಪ್ರಕಟಿಸಿತು. ಸಾಮಾಜಿಕ ಚಿಂತನೆಯುಳ್ಳವರಾಗಿದ್ದ ಡಾ.ತೋಂಟದ ಸಿದ್ಧಲಿಂಗ ಶ್ರೀಗಳ ರಾಷ್ಟ್ರೀಯ ಪ್ರಶಸ್ತಿಗೆ ಗೊ.ರು ಚನ್ನಬಸಪ್ಪ ಸೂಕ್ತ ಆಯ್ಕೆ ಆಗಿದ್ದಾರೆ ಎಂದರು.
ವಿಧಾನ ಪರಿಷತ್ ಸದಸ್ಯ ಎಸ್. ವಿ. ಸಂಕನೂರ ಮಾತನಾಡಿ, ತೋಂಟದ ಸಿದ್ಧಲಿಂಗ ಶ್ರೀಗಳು ಭೌತಿಕವಾಗಿ ನಮ್ಮನ್ನು ಅಗಲಿದರೂ ಅವರ ಶ್ರೇಷ್ಠ ಸಂದೇಶಗಳು ಹಾಗೂ ಸತ್ಕಾರ್ಯಗಳ ಮೂಲಕ ಅಜರಾಮರ ಆಗಿದ್ದಾರೆ. ಗಂಧದ ಕೊರಡಿನಂತೆ, ದೀಪದ ಬೆಳಕಿನಂತೆ ಜನಕಲ್ಯಾಣಕ್ಕಾಗಿ ಶ್ರಿಗಳು ಶ್ರಮಿಸುತ್ತಿದ್ದರು. ಪುಸ್ತಕ ಪ್ರಕಟಣೆ, ನಿರಂತರ ಶಿವಾನುಭವ ಕಾರ್ಯಕ್ರಮಗಳು, ಕಪ್ಪತಗುಡ್ಡ ರಣೆ ಹೀಗೆ ಶ್ರೀಗಳ ಸಾಧನೆಯ ಮಜಲುಗಳು ಹಲವು. ಅವರ ಅಗಲಿಕೆ ನಂತರ ತೋಂಟದಾರ್ಯ ವಿದ್ಯಾಪಿಠದ ಕೆಲವು ನೌಕರರು ಹಾಗೂ ಪತ್ತಿನ ಸಂದ ಆದಾಯದಲ್ಲಿ ಸಿದ್ಧಲಿಂಗ ಶ್ರೀಗಳ ಸ್ಮಾರಕ ರಾಷ್ಟ್ರೀಯ ಪ್ರಶಸ್ತಿ ನೀಡುತ್ತಿರುವುದು ಹೆಮ್ಮೆಯ ವಿಷಯ ಎಂದರು.
ಕಾರ್ಯಕ್ರಮದಲ್ಲಿ ಗೂ.ರು. ಚೆನ್ನಬಸಪ್ಪನವರಿಗೆ 5 ಲ ರೂಪಾಯಿ ಮೊತ್ತದ ಡಾ.ತೋಂಟದ ಸಿದ್ಧಲಿಂಗ ಶ್ರೀಗಳ ಸ್ಮಾರಕ ರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಪ್ರೊ. ಶಿವಾನಂದ ಪಟ್ಟಣಶೆಟ್ಟಿ ರಚಿಸಿದ "ಶ್ರೀ ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳ ದುಬೈ ಭೇಟಿಯ ನೆನಪುಗಳು' ಹಾಗೂ ಡಾ. ಲಕ್ಷ$್ಮಣ ಕೌಂಠೆ ರಚಿಸಿದ "ಶ್ರೀ ಚನ್ನಬಸವ ಸ್ವಾಮಿಗಳು' ಗ್ರಂಥಗಳು ಲೋಕಾರ್ಪಣೆಗೊಂಡವು. ಮರೇಗುದ್ದಿ ಅಡವಿಸಿದ್ಧೇಶ್ವರಮಠದ ನಿರುಪಾ-ಶ್ವರ ಶ್ರೀಗಳನ್ನು ಸನ್ಮಾನಿಸಲಾಯಿತು. ತೋಂಟದ ಸಿದ್ಧರಾಮ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು. ಆಳಂದದ ಕೋರಣೇಶ್ವರ ಶ್ರೀಗಳು, ಬೈರನಟ್ಟಿಯ ಶಾಂತಲಿಂಗ ಶ್ರೀಗಳು, ಸಂಡೂರಿನ ಪ್ರಭು ಶ್ರೀಗಳು, ಅರಸಿಕೇರಿ ಮಠದ ಶಾಂತಲಿಂಗ ದೇಶಿಕೇಂದ್ರ ಶ್ರಿಗಳು, ಶಾಸಕ ಜಿ.ಎಸ್. ಪಾಟೀಲ, ಎಸ್. ಎಸ್. ಪಾಟೀಲ, ಡಿ. ಆರ್. ಪಾಟೀಲ, ಕೊಟ್ರೇಶ ಮೆಣಸಿನಕಾಯಿ ಹಲವರು ಇದ್ದರು.
ಕೋಟ್:
ತೋಂಟದ ಸಿದ್ಧಲಿಂಗ ಶ್ರೀಗಳು ಕಪ್ಪತಗುಡ್ಡ ಹೋರಾಟವನ್ನು ಕೈಗೆತ್ತಿಕೊಳ್ಳದಿದ್ದರೆ ಇಂದು ಕಪ್ಪತಗುಡ್ಡ ಉಳಿಯುತ್ತಿರಲಿಲ್ಲ. ಅವರ ಹೋರಾಟದ ಲದಿಂದ ಏಷ್ಯಾ ಖಂಡದಲ್ಲೇ ಶುದ್ಧ ಗಾಳಿ ನೀಡುವ ತಾಣಗಳಲ್ಲಿ ಕಪ್ಪತಗುಡ್ಡವು ಒಮದಾಗಿದೆ. ನಾನು ಶಾಸಕನಾಗಿದ್ದ ಸಂದರ್ಭದಲ್ಲಿ ಕೆರೆ ತುಂಬಿಸುವ ಕಾರ್ಯಗಳನ್ನು ಶ್ಲಾಘಿಸುತ್ತಿದ್ದರು.
- ರಾಮಕೃಷ್ಣ ದೊಡ್ಡಮನಿ, ಮಾಜಿ ಶಾಸಕ
ಕೋಟ್:
ನಾನು ಕಲಿತ ದಿಂಡೂರ ಶಾಲೆಯನ್ನು ಆ ಕಾಲದಲ್ಲೇ ಒಂದು ಲ ರೂ. ಖರ್ಚು ಮಾಡಿ ಶಾಲೆಯನ್ನು ಶ್ರೀಗಳು ಅಭಿವೃದ್ಧಿಪಡಿಸಿದರು ನಮ್ಮ ಜನಾಂಗದ ಬಗ್ಗೆ ಸಿದ್ಧಲಿಂಗ ಶ್ರಿಗಳು ಅಪಾರ ಪ್ರೀತಿ ಹೊಂದಿದ್ದರು.
- ಚಂದ್ರು ಲಮಾಣಿ, ಶಾಸಕ
ಕೋಟ್:
ಗೋಕಾಕ್ ವರದಿ ಜಾರಿಗಾಗಿ ನಡೆದ ಹೋರಾಟಕ್ಕೆ ಮುನ್ನುಡಿ ಬರೆದಿದ್ದ ಸಿದ್ಧಲಿಂಗ ಶ್ರೀಗಳು ನಾಡು&ನುಡಿಗಾಗಿ ಅನನ್ಯ ಸೇವೆ ಸಲ್ಲಿಸಿದ್ದಾರೆ. ತೋಂಟದಾರ್ಯ ಮಠದ ಭಕ್ತರು ಹೃದಯ ಶ್ರೀಮಂತಿಕೆಯಿಂದ ಕೂಡಿದ್ದಾರೆ.
- ಬಿ.ಡಿ. ಕುಂಬಾರ, ಕುಲಪತಿ ದಾವಣಗೆರೆ ವಿಶ್ವವಿದ್ಯಾಲಯದ