ತಂಬಾಕು ಮಾರಾಟ ಅಂಗಡಿಗಳ ಮೇಲೆ ತಂಬಾಕು ನಿಯಂತ್ರಣ ತನಿಖಾದಳ ದಾಳಿ

IMG-20240621-WA0019
Published on

ವಿಜಯವಾಣಿ ಸುದ್ದಿಜಾಲ ಗದಗ  

ಜಿಲ್ಲಾ ತಂಬಾಕು ನಿಯಂತ್ರಣ ತನಿಖಾದಳ ಶುಕ್ರವಾರ ನರಸಾಪೂರ, ಎಸ್.ಬಿ. ನಗರ ಬೆಟಗೇರಿ ಹಾಗೂ ಕನಗಿನಾಳ ಅಗಸಿ, ಸ್ಥಳಗಳಲ್ಲಿ ಕೋಟ್ಪಾ ದಾಳಿಮಾಡಿ ಒಟ್ಟು 12 ಪ್ರಕರಣ ದಾಖಲಿಸಿ ರೂ. 2200 ದಂಡ ಸಂಗ್ರಹಿಸಲಾಯಿತು.

ದಾಳಿವೇಳೆ ತಂಬಾಕು ಸೇವನೆಯಿಂದಾಗುವ ದುಷ್ಪರಿಣಾಮ ಹಾಗೂ ತಂಬಾಕು ನಿಯಂತ್ರಣ ಕಾಯ್ದೆ ಕೋಟ್ಪಾ-2003ರ ಕುರಿತು ಸಾರ್ವಜನಿಕರಲ್ಲಿ ಹಾಗೂ ಅಂಗಡಿಕಾರರಲ್ಲಿ ಜಾಗೃತಿ ಮೂಡಿಸಲಾಯಿತು. ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧದ ಕುರಿತು ಪ್ರತಿಯೊಂದು ಸಾರ್ವಜನಿಕ ಸ್ಥಳಗಳಲ್ಲಿ ನಾಮಫಲಕ ಬಿತ್ತರಿಸುವದು  ಸ್ಥಳದ ಮಾಲೀಕರ ಜವಾಬ್ದಾರಿ ಹಾಗೂ ಕೆಲವು ಅಂಗಡಿಗಳ ಹಿಂದೆ ಅನಧಿಕೃತ ಧೂಮಪಾನ ಅಡ್ಡಾಗಳನ್ನು ಮಾಡಿಕೊಂಡಿರುವವರ ವಿರುದ್ಧ ಕೂಡಾ ಕ್ರಮ ವಹಿಸಲಾಯಿತು.

ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವುದರಿಂದ ಅಮಾಯಕರ ಆರೋಗ್ಯದ ಮೇಲೆ ಪರಿಣಾಮಬೀರುತ್ತಿರುವದು ಕಂಡುಬಂದಿದ್ದರಿಂದ ಅಂಗಡಿಕಾರರು ತಂಬಾಕು ಉತ್ಪನ್ನಗಳ ಕಾಣುವಂತೆ ಪ್ರದರ್ಶೀಸುವದು,ಅವುಗಳ ಕುರಿತ ಜಾಹಿರಾತು ಸೇರಿದಂತೆ 18 ವರ್ಷದೊಳಗಿನವರಿಗೆ ತಂಬಾಕು ನಿಷೇಧ ,ತಂಬಾಕು ಉತ್ಪನ್ನಗಳ ಪ್ಯಾಕ್ ಮೇಲೆ ಶೇ 85% ರಷ್ಟು ಆರೋಗ್ಯ ಎಚ್ಚರಿಕೆ ಚಿನ್ಹೆ ಕಡ್ಡಾಯ,ಶಾಲಾಕಾಲೇಜು ಸುತ್ತ 100ಗಜದವರೆಗೆ ತಂಬಾಕು ನಿಷೇಧ, ಈ ಕುರಿತು ಮಾಹಿತಿ ಹಾಗೂ ಜಾಗೃತಿ ಮೂಡಿಸಿ ಉಲ್ಲಂಘನೆ ಮಾಡಿದವರ ವಿರುದ್ಧ ಎಚ್ಚರಿಕೆ ನೀಡಿದರು.

  ಗೋಪಾಲ ಸುರಪುರ, ಪೊಲೀಸ್ ಅಧಿಕಾರಿ ವಿ.ಆರ್. ಬರಮಗೌಡರ  ಹಾಗೂ ಸಾಮಾಜಿಕ ಕಾರ್ಯಕರ್ತೆ  ಬಸಮ್ಮ ಚಿತ್ತರಗಿ, ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಸದ್ಯಸರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net