ಮಳೆಯ ನಡುವೆಯೇ ತಿರಂಗಾ ಯಾತ್ರೆ ಮೆರವಣಿಗೆ

IMG-20250516-WA0035
Published on
ದೇಶ ಭಕ್ತಿಯನ್ನು ಇಮ್ಮಡಿಗೊಳಿಸಿದ ತಿರಂಗಾ ಯಾತ್ರೆ
ಗದಗ: ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ನಡೆದ ಉಗ್ರರ ದಾಳಿ ಬಳಿಕ ಶತ್ರು ರಾಷ್ಟç ಪಾಕಿಸ್ತಾನಕ್ಕೆ ಪಾಠ ಕಲಿಸಲು ಕೇಂದ್ರ ಸರ್ಕಾರ ಪಾಕಿಸ್ತಾನ ಮೇಲೆ ನಡೆಸಿದ ಆಪರೇಷನ್ ಸಿಂದೂರಕ್ಕೆ ಬೆಂಬಲಿಸುವ ಹಾಗೂ ಸೈನಿಕರ ಕಾರ್ಯ ಶ್ಲಾಘಿಸುವ ಉದ್ದೇಶದಿಂದ ರಾಷ್ಟç ರಕ್ಷಣೆಗಾಗಿ ನಾಗರಿಕರ ವೇದಿಕೆ ವತಿಯಿಂದ ಶುಕ್ರವಾರ ನಗರದಲ್ಲಿ ತಿರಂಗಾ ಯಾತ್ರೆ ಜರುಗಿತು.
ಶುಕ್ರವಾರ ಸಂಜೆ ಸುರಿಯುತ್ತಿರುವ ಮಳೆಯಲ್ಲಿಯೇ ನಗರದ ಜೋಡು ಮಾರುತಿ ದೇವಸ್ಥಾನದಿಂದ ಪ್ರಾರಂಭಗೊAಡ ತಿರಂಗಾ ಯಾತ್ರೆಯು ಮಹಾತ್ಮ ಗಾಂಧಿ ವೃತ್ತದವರೆಗೆ ಸಾಗಿತು. ದಾರಿಯುದ್ದಕ್ಕೂ ದೇಶಭಕ್ತಿಯ ಘೋಷಣೆಗಳು ಮೊಳಗಿದವು. ಸಂಜೆ ಸುರಿದ ಮಳೆಯಲ್ಲೂ ನೆನೆಯುತ್ತಲೇ ಮಾಜಿ ಸಚಿವ ಹಾಗೂ ನರಗುಂದ ಶಾಸಕ ಸಿ.ಸಿ. ಪಾಟೀಲ ಅವರು ಚಾಲನೆ ನೀಡಿ, ಹೆಜ್ಜೆ ಹಾಕಿದ್ದು, ನೆರೆದಿದ್ದವರಲ್ಲಿ ದೇಶಾಭಿಮಾನ ಇಮ್ಮಡಿಗೊಳಿಸಿತ್ತು.
ಕಾಶ್ಮೀರದ ಪಹಲ್ಗಾಮ್‌ನಲ್ಲಿ ಇತ್ತೀಚೆಗೆ ಪಾಕಿಸ್ತಾನದ ಪ್ರಚೋದಿತ ಉಗ್ರರಿಂದ ನಡೆದ ಹತ್ಯಾಖಂಡವು ಸಮಗ್ರ ಭಾರತೀಯರ ಸ್ವಾಭಿಮಾನಕ್ಕೆ ಮಾಡಿದ ಅವಮಾನ. ದೇಶದಲ್ಲಿ ಅಶಾಂತಿ ಅಸ್ಥಿರತೆಯ ಸೃಷ್ಟಿಗೆ ಪಾಕಿಸ್ತಾನ ಸದಾ ಪ್ರಯತ್ನಿಸುತ್ತಲೇ ಇರುತ್ತದೆ. ಆದರೆ, ಆ ಪೈಶಾಚಿಕ ಕೃತ್ಯ ಹಿತಾಸಕ್ತಿಯು ಯಶಸ್ಸು ಸಾಧಿಸದಂತೆ ನಾವೆಲ್ಲರು ಒಗ್ಗೂಡಿ ಜಾಗೃತರಾಗಬೇಕಿದೆ ಎಂದು ಸಿ.ಸಿ. ಪಾಟೀಲ ಹೇಳಿದರು.
ಆಪರೇಷನ್ ಸಿಂದೂರ ಮೂಲಕ ನಮ್ಮ ಸೇನಾಪಡೆಗಳು ಮತ್ತು ಕೇಂದ್ರ ಸರ್ಕಾರ ಉಗ್ರರ ಹಾಗೂ ಅದರ ಪೋಷಕ ಪಾತ್ರ ನಿರ್ವಹಿಸುತ್ತಿರುವ ಪಾಕಿಸ್ತಾನಕ್ಕೆ ನಿಖರ ಹಾಗು ಗರಿಷ್ಠ ಪ್ರಮಾಣದ ಶಿಕ್ಷೆಯನ್ನ ಈಗಾಗಲೇ ನೀಡಿವೆ. ದೇಶದ ಹಿತಕ್ಕಾಗಿ ಗಡಿಯಲ್ಲಿ ಸದಾ ಸನ್ನದ್ದ ಸ್ಥಿತಿಯಲ್ಲಿರುವ ಭಾರತೀಯ ಸೈನಿಕರ ಜೊತೆ ಜವಾಬ್ದಾರಿ ನಾಗರಿಕರಾದ ನಾವೆಲ್ಲರೂ ನಿಲ್ಲಬೇಕಿದೆ. ಆ ಮೂಲಕ ರಾಷ್ಟçದ ಏಕತೆ ಮತ್ತು ಅಖಂಡತೆಯನ್ನ ಸಾಕ್ಷೀಕರಿಸೋಣ ಎಂದು ಹೇಳಿದರು.
ತಿರಂಗಾ ಯಾತ್ರೆ ಮಾಜಿ ಸೈನಿಕರ ಸಾಥ್: ರಾಷ್ಟç ರಕ್ಷಣೆಗಾಗಿ ನಾಗರಿಕರ ವೇದಿಕೆ ವತಿಯಿಂದ ಶುಕ್ರವಾರ ನಗರದಲ್ಲಿ ಹಮ್ಮಿಕೊಂಡಿದ್ದ ತಿರಂಗಾ ಯಾತ್ರೆಯಲ್ಲಿ ಅಖಿಲ ಕರ್ನಾಟಕ ಮಾಜಿ ಸೈನಿಕರ ಕ್ಷೇಮಾಭಿವೃದ್ಧಿ ಸಂಘದ ಗದಗ ಜಿಲ್ಲಾಧಕ್ಷ ಬಸಲಿಂಗಪ್ಪ ಮುಂಡರಗಿ ಅವರ ನೇತೃತ್ವದಲ್ಲಿ ನೂರಾರು ಮಾಜಿ ಸೈನಿಕರು ರಾಷ್ಟç ಧ್ವಜ ಹಿಡಿದು ಹೆಜ್ಜೆ ಹಾಕಿ ಗಮನ ಸೆಳೆದರು.
ಈ ಸಂದರ್ಭದಲ್ಲಿ ಮುಕ್ಕಣ್ಣೇಶ್ವರ ಮಠದ ಶಂಕರಾನAದ ಸ್ವಾಮೀಜಿ, ಯುವ ಮುಖಂಡ ಉಮೇಶಗೌಡ ಸಿ. ಪಾಟೀಲ, ನಗರಸಭೆ ಸದಸ್ಯ ಚಂದ್ರು ತಡಸದ, ಮುಖಂಡರಾದ ಪ್ರಶಾಂತ ನಾಯ್ಕರ, ಮಹಾಂತೇಶ ಬಾತಾಖಾನಿ, ವಸಂತ ಮೇಟಿ, ಆರ್.ಬಿ. ದಾನಪ್ಪಗೌಡ್ರ, ಶಿವರಾಜಗೌಡ ಹಿರೇಮನಿಪಾಟೀಲ, ನಗರಸಭೆ ಮಾಜಿ ಅ`À್ಯಕ್ಷೆ ಉಷಾ ದಾಸರ ಸೇರಿ ಅನೇಕರು ಇದ್ದರು.
ಸಾರ್ವಜನಿಕರು, ಮಾಜಿ ಸೈನಿಕರು, ವಿದ್ಯಾರ್ಥಿಗಳು, ವಕೀಲರು, ವೈದ್ಯರು, ರೈತರು, ಶಿಕ್ಷಕರು, ಕೂಲಿ ಕಾರ್ಮಿಕರು, ಆಟೋ ಚಾಲಕರು, ವ್ಯಾಪಾರಸ್ಥರು, ವಿವಿಧ ಕ್ಷೇತ್ರದ ವೃತ್ತಿಪರರು ಹೆಮ್ಮೆಯ ತಿರಂಗಾ ಯಾತ್ರೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net