

ಶಿವಾನಂದ ಹಿರೇಮಠ, ಗದಗ
ನಗರದ ಸುಗಮ ಸಂಚಾರ ವ್ಯವಸ್ಥೆಗೆ ಜಾರಿಯಾದ "ಥರ್ಡ ಐ' ಯೋಜನೆ ಪರಿಣಾಮಕಾರಿ ಕಾರ್ಯ ನಿರ್ವಹಿಸುತ್ತಿದೆ. ನಿನ್ನೆವರೆಗೂ ಸಂಚಾರ ನಿಯಮ ಪಾಲಿಸದೇ ಇರುವ ಜನರು ಇಂದು ಸಂಚಾರ ನಿಯಮಗಳ ಜತೆ ಬೆಸೆಯುತ್ತಿದ್ದಾರೆ. ಹೆಲ್ಮೆಟ್, ಸೀಟ್ ಬೆಲ್ಟ್ ಸೇರಿದಂತೆ ಹಲವು ನಿಯಮಗಳನ್ನು ಪಾಲಿಸುತ್ತಿದ್ದಾರೆ. ಅ.23 ರಿಂದ ಆನ್ಲೈನ್ ದಂಡ ರಸೀದಿ ನೀಡುವ ಪ್ರಕ್ರಿಯೆ ಜಾರಿ ಆದಾಗಿನಿಂದಲೂ ನಗರದಲ್ಲಿ 4100 ಪ್ರಕರಣ ದಾಖಲಾಗಿದೆ. 7 ಲಕ್ಷ ರೂ. ದಂಡ ವಸೂಲಾಗಿದೆ. ಗ್ಯಾರಂಟಿ ಯೋಜನೆಗಳಿಂದ ಸಂಪನ್ಮೂಲ ಕೊರತೆ ಅನುಭವಿಸುತ್ತಿರುವ ಸರ್ಕಾರಕ್ಕೆ ಇಂತಹ ಯೋಜನೆಗಳು ವರದಾನ ಆಗಲಿವೆ.
ಏನಿದು ಯೋಜನೆ:
ಮೂರು ಕೋಟಿ ರೂ ವೆಚ್ಚದಲ್ಲಿ ನಗರದ ಪ್ರಮುಖ ವೃತ್ತಗಳಲ್ಲಿ 15 ಎಎಂಪಿಆರ್ ಸಿಸಿ ಕೆಮೆರಾ ಅಳವಡಿಸಲಾಗಿದೆ. ಈ ಕೆಮೆರಾಗಳು 360 ಡಿಗ್ರಿ ಕಾರ್ಯ ನಿರ್ವಹಿಸುತ್ತವೆ. 44 ಸ್ಥಳಗಳಲ್ಲಿ ಬುಲೆಟ್ ಕ್ಯಾಮರಾ ಸೇರಿ 110 ಸಿಸಿ ಕೆಮಾರಾ ಅಳವಡಿಸಲಾಗಿದೆ. ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಸ್ಥಾಪಿಸಲಾದ ಕಮಾಂಡ್ ಸೆಂಟರ್ನಲ್ಲಿ ಸಿಸಿ ಕೆಮಾರಗಳ ಮೂಲಕ ಸಂಚಾರ ನಿಯಮ ಉಲ್ಲಂಘಿಸಿದ ಪ್ರಕರಣಗಳನ್ನು ಪತ್ತೆ ಹಚ್ಚಲಾಗುತ್ತಿದೆ. ಆರ್ಟಿಓ ಕಚೇರಿ ಸಹಾಯದೊಂದಿಗೆ ವಾಹನಗಳ ದಾಖಲೆ ಪಡೆದು ದಾಖಲೆಗಳಲ್ಲಿ ವಿಳಾಸಕ್ಕೆ ದಂಡದ ರಸೀದಿಗಳನ್ನು ಅಂಚೆ ಮೂಲಕ ಕಳಿಸಲಾಗುತ್ತದೆ. 48 ಗಂಟೆಗಳಲ್ಲಿ ಮನೆಗೆ ನೋಟಿಸ್ ಬರುತ್ತದೆ. ವಾರದೊಳಗೆ ದಂಡವನ್ನು ಕಟ್ಟಬೇಕಾಗುತ್ತದೆ. ಜಿಲ್ಲೆಯ 12 ಪೊಲೀಸ್ ಠಾಣೆಯಲ್ಲಿ ದಂಡ ಪಾವತಿ ಕೌಂಟರ್ ತೆರೆಯಲಾಗಿದ್ದು. ಹತ್ತಿರದ ಪೊಲೀಸ್ ಠಾಣೆಗೆ ತೆರಳಿ ದಂಡ ಪಾವತಿಸಬಹುದು. ನಗರದ ಒಟ್ಟಾರೆ 45 ಸ್ಥಳಗಳನ್ನು ಪೊಲೀಸ್ ಸಿಬ್ಬಂದಿ ಜಿಲ್ಲಾ ಕಚೇರಿಯಿಂದಲೇ ನಿಗಾ ವಹಿಸುತ್ತಿದ್ದಾರೆ. ಈ ಪ್ರಕ್ರಿಯೆಗಳಿಂದ ನಗರದ ಟ್ರಾಫಿಕ್ ನಿರ್ವಹಣೆ ಮತ್ತು ದಂಡ ಪಾವತಿ ಪ್ರಕ್ರಿಯೆ ಸುಲಭವಾಗಿದೆ. ಸಿಸಿ ಕೆಮೆರಾ ಅಳವಡಿಕೆಯಿಂದ ಕೆ ಪ್ರಕರಣಗಳನ್ನು ಸುಲಭವಾಗಿ ಪತ್ತೆ ಹಚ್ಚಬಹುದು. ಯೋಜನೆ ಮೂಲಕ ಪೊಲೀಸ್ ವ್ಯವಸ್ಥೆ ಮೇಲೆ ಜನರಲ್ಲಿ ವಿಶ್ವಾಸ ಮೂಡುತ್ತಿದೆ.
ಬಾಕ್ಸ್:
ಕಮಾಂಡ್ ಸೆಂಟರ್ ನಿಂದ ಕೇವಲ ಟ್ರಾಫಿಕ್ ಮೇಲ್ವಿಚಾರಣೆ ಅಲ್ಲದೇ ಪೊಲೀಸ್ ಠಾಣೆಗಳ ಮೇಲೂ ನಿಗಾ ವಹಿಸಲಾಗಿದೆ. ಅನಗತ್ಯ ಕಾಯುವಿಕೆಯಿಂದ ದೂರುದಾರರನ್ನು ಮುಕ್ತರನ್ನಾಗಿಸಲು ಕ ಮತ್ತು ನೋಂದವರಿಗೆ ತುರ್ತು ಸೇವೆ ಸಲ್ಲಿಸಲು ಜಿಲ್ಲೆಯ ಪೊಲೀಸ್ ಠಾಣೆಗಳಲ್ಲಿ ಸಿಸಿ ಕೆಮಾರಾ ಅಳವಡಿಸಲಾಗಿದೆ. ನೋಂದ ಕುಟುಂಬಸ್ಥರು ಕೇವಲ 30 ನಿಮಿಷದಲ್ಲಿ ದೂರು ಸಲ್ಲಿಸಿ ಠಾಣೆಯಿಂದ ಹೊರಬರಬಹುದು. ಠಾಣೆಗಳಲ್ಲಿ ದೂರು ದಾರರನ್ನು ಅನಗತ್ಯ ಕಾಯಿಸಿದರೇ ಸಂಬಂಧಿಸಿದ ಪೊಲೀಸ್ ಅಧಿಕಾರಿಗೆ ಅಮಾನತು ಶಿೆ ಕಟ್ಟಿಟ್ಟ ಬುತ್ತಿ. ಬಿ.ಎಸ್. ನೇಮಗೌಡ ಅವರು ಜಿಲ್ಲೆಯ ಎಲ್ಲ ಠಾಣೆಗಳಲ್ಲಿ ಈ ವ್ಯವಸ್ಥೆ ಕಡ್ಡಾಯ ಜಾರಿ ಮಾಡಿದ್ದಾರೆ. ನೋಂದ ವ್ಯಕ್ತಿ ಅಥವಾ ಕುಟುಂಬ ದೂರು ಸಲ್ಲಿಸಲು ಠಾಣೆಗೆ ತೆರಳಿದ ಸಂದರ್ಭದಲ್ಲಿ ಕೇವಲ ಮೂವತ್ತು ನಿಮಿಷದಲ್ಲಿ ಅವರ ಅಜಿರ್ ಸ್ವೀಕರಿಸಿ ಎೈಆರ್ ದಾಖಲಿಸಬೇಕು. ಈ ವ್ಯವಸ್ಥೆ ಕಡ್ಡಾಯ ಪಾಲನೆ ಆಗುತ್ತಿರುವುದನ್ನು ಗಮನಿಸಲು ವಿಶೇಷ ಸಿಬ್ಬಂದಿ ನೇಮಿಸಲಾಗಿದೆ.
ಬಾಕ್ಸ್:(ನ.16ರ ವರೆಗೂ)
ಥರ್ಡ್ ಐ ಮೂಲಕ ದಾಖಲಾದ ಒಟ್ಟಾರೆ ಪ್ರಕರಣ - 4100
ದಂಡ ಕಟ್ಟಿದವರು - 1300 ಕ್ಕೂ ಹೆಚ್ಚು
ಹೆಲ್ಮೆಟ್ ಧರಿಸದ ಪ್ರಕರಣ - 3433
ತ್ರಿಬಲ್ ರೈಡಿಂಗ್ - 560
ಚಾಲನೆ ಸಂದರ್ಭದಲ್ಲಿ ಪೋನ್ ಬಳಕೆ - 66
ಕಾರಿನಲ್ಲಿ ಸೀಟ್ ಬೆಲ್ಟ್ ಹಾಕದಿರುವ ಪ್ರಕರಣ - 50
ಪಾಕಿರ್ಂಗ್ ನಿಯಮ ಉಲ್ಲಂನೆ - 05
ಆಟೋಗಳಲ್ಲಿ ಸಮವಸ್ತ್ರ ಧರಿಸದ ಪ್ರಕರಣ - 177
ಕೋಟ್:
ಪಾರದರ್ಶಕ ಆಡಳಿತ ವ್ಯವಸ್ಥೆಗೆ ಥರ್ಡ್ ಐ ಯೋಜನೆ ಉಪಯುಕ್ತ. ಆಡಳಿತ ವ್ಯವಸ್ಥೆ ಸುಧಾರಣೆಗೆ ಸಾರ್ವಜನಿಕರು ಇಲಅಖೆಯೊಂದಿಗೆ ಕೈ ಜೋಡಿಸಬೇಕು. ಸಂಚಾರ ನಿಯಮ ಪಾಲಿಸಿ ದಂಡ ಕಟ್ಟುವುದರಿಂದ ವಿಮುಕ್ತರಾಗಬೇಕು. - ಬಿ.ಎಸ್. ನೇಮಗೌಡ, ಎಸ್ಪಿ, ಗದಗ