ಸ್ವಾಮಿ ವಿವೇಕಾನಂದ ಸಾಂಸ್ಕೃತಿಕ ಸಮಿತಿಯ ರಜತ ಮಹೋತ್ಸವ ಸಮಾರಂಭ

30GDG09
Published on
ಗದಗ: ಇಲ್ಲಿನ ವಿವೇಕಾನಂದ ನಗರದಲ್ಲಿರುವ ಸ್ವಾಮಿ ವಿವೇಕಾನಂದ ಸಾಂಸ್ಕೃತಿಕ ಸಮಿತಿಯ ರಜತ ಮಹೋತ್ಸವ ಸಮಾರಂಭ ಆಗಸ್ಟ್‌ 2 ಮತ್ತು 3ರಂದು ನಡೆಯಲಿದೆ ಎಂದು ಸಮಿತಿ ಅಧ್ಯಕ್ಷ ಪ್ರೊ. ಎಂ.ಎನ್‌.ಕಾಮನಹಳ್ಳಿ ತಿಳಿಸಿದರು.
‘ಆಗಸ್ಟ್‌ 2ರಂದು ಬೆಳಿಗ್ಗೆ 6ಕ್ಕೆ ರುದ್ರಾಭಿಷೇಕ, 7ಕ್ಕೆ ರುದ್ರಹೋಮ, ಬೆಳಿಗ್ಗೆ 11ಕ್ಕೆ ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ, ಮಧ್ಯಾಹ್ನ 3ಕ್ಕೆ ರಂಗೋಲಿ ಸ್ಪರ್ಧೆ, ಸಂಜೆ 4ಕ್ಕೆ ಅಡುಗೆ ಸ್ಪರ್ಧೆ ಆಯೋಜಿಸಲಾಗಿದೆ. ಸಂಜೆ 6.30ಕ್ಕೆ ಸ್ಥಳೀಯ ಕಲಾವಿದರಿಂದ ಸಂಗೀತ ಸಂಜೆ ನಡೆಯಲಿದೆ’ ಎಂದು ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಆಗಸ್ಟ್‌ 3ರಂದು ಬೆಳಿಗ್ಗೆ 10.30ಕ್ಕೆ ರಜತ ಮಹೋತ್ಸವ ಸಮಾರಂಭ ಹಾಗೂ ಸ್ಮರಣ ಸಂಚಿಕೆ ಬಿಡುಗಡೆ ಕಾರ್ಯಕ್ರಮ ನಡೆಯಲಿದ್ದು, ಧಾರವಾಡ ಮುರುಘಾಮಠದ ಮಲ್ಲಿಕಾರ್ಜುನ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಜಿಲ್ಲಾ ಉಸ್ತುವಾರಿ ಸಚಿವ ಎಚ್‌.ಕೆ.ಪಾಟೀಲ ಕಾರ್ಯಕ್ರಮ ಉದ್ಘಾಟಿಸುವರು. ವಿಧಾನ ಪರಿಷತ್‌ ಸದಸ್ಯ ಎಸ್‌.ವಿ.ಸಂಕನೂರ ಸ್ಮರಣ ಸಂಚಿಕೆ ಲೋಕಾರ್ಪಣೆಗೊಳಿಸುವರು. ಸ್ವಾಮಿ ವಿವೇಕಾನಂದ ಸಾಂಸ್ಕೃತಿಕ ಸಮಿತಿಯ ಅಧ್ಯಕ್ಷ ಪ್ರೊ. ಎಂ.ಎನ್‌.ಕಾಮನಹಳ್ಳಿ ಅಧ್ಯಕ್ಷತೆ ವಹಿಸುವರು ಎಂದು ತಿಳಿಸಿದರು.
ಇಳಕಲ್‌ನ ಜಾನಪದ ವಿದ್ವಾಂಸ ಶಂಭು ಬಳಿಗಾರ, ಮಾಜಿ ಶಾಸಕ ಡಿ.ಆರ್‌.ಪಾಟೀಲ, ನಗರಸಭೆ ಸದಸ್ಯ ಎಲ್‌.ಡಿ.ಚಂದಾವರಿ, ಧಾರವಾಡದ ದ.ರಾ.ಬೇಂದ್ರೆ ಟ್ರಸ್ಟ್‌ನ ಅಧ್ಯಕ್ಷ ಡಿ.ಎಂ.ಹಿರೇಮಠ, ನಗರಸಭೆ ಸದಸ್ಯೆ ಶ್ವೇತಾ ಬೆನಕನವಾರಿ, ಸಮಿತಿಯ ಗೌರವಾಧ್ಯಕ್ಷ ಜಿ.ಜಿ.ಕುಲಕರ್ಣಿ ಅತಿಥಿಗಳಾಗಿ ಭಾಗವಹಿಸುವರು ಎಂದು ತಿಳಿಸಿದರು.
ಸಮಿತಿಯ ಪದಾಧಿಕಾರಿ ಬಿ.ಎಚ್‌.ಗರಡಿಮನಿ ಮಾತನಾಡಿ, ‘ಸ್ವಾಮಿ ವಿವೇಕಾನಂದ ಸಾಂಸ್ಕೃತಿಕ ಟ್ರಸ್ಟ್‌ 25 ವರ್ಷಗಳ ಅವಧಿಯಲ್ಲಿ ಸಾಕಷ್ಟು ಸಮಾಜಮುಖಿ ಕಾರ್ಯಕ್ರಮ ನಡೆಸಿದೆ. ದೇವಸ್ಥಾನ ಕೇವಲ ಪೂಜೆ ಪುನಸ್ಕಾರಕ್ಕಷ್ಟೇ ಸೀಮಿತವಲ್ಲ; ಸಾಮಾಜಿಕ ಕಳಕಳಿಯ ಕೇಂದ್ರವೂ ಹೌದು ಎಂಬದುನ್ನು ಜನತೆಗೆ ಅರಿವು ಮಾಡಿಕೊಟ್ಟಿದೆ’ ಎಂದರು.
‘ರಜತ ಮಹೋತ್ಸವದ ನೆನಪಿನಲ್ಲಿ ‘ವಿಶ್ವಪ್ರಭ’ ಎಂಬ ಸ್ಮರಣ ಸಂಚಿಕೆ ಹೊರತರುತ್ತಿದ್ದು, ಇದೊಂದು ಸಂಗ್ರಹ ಯೋಗ್ಯ ಉಪಯುಕ್ತ ಗ್ರಂಥವಾಗಲಿದೆ’ ಎಂದರು.
ಮುಖಂಡ ಎಂ.ಬಿ.ಚನ್ನ್ಪಗೌಡರ ಮಾತನಾಡಿ, ‘ಸ್ವಾಮಿ ವಿವೇಕಾನಂದ ಸಾಂಸ್ಕೃತಿಕ ಸಮಿತಿಯು ಪ್ರತಿ ತಿಂಗಳು ಜೀವನ ದರ್ಶನ ಕಾರ್ಯಕ್ರಮ ನಡೆಸುತ್ತಿದೆ. ಸಮಿತಿಯ ರಜತ ಮಹೋತ್ಸವದ ಸಮಾರಂಭದಲ್ಲಿ ಪದಾಧಿಕಾರಿಗಳು ಹಾಗೂ ಪೌರಕಾರ್ಮಿಕರನ್ನು ಸನ್ಮಾನಿಸಲಾಗುವುದು’ ಎಂದು ತಿಳಿಸಿದರು.
ಸಮಿತಿಯ ಪದಾಧಿಕಾರಿಗಳಾದ ಕೆ.ಐ.ಕುರಗೋಡ, ಆರ್‌.ಬಿ.ಒಡೆಯರ್‌ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net