ಇನ್ನರ್​ ವ್ಹೀಲ್​ ಹಾಗೂ ಕೆಎಲ್​ಇ ವಿದ್ಯಾಥಿರ್ಗಳಿಂದ ಜಿಲ್ಲಾ ಆಸ್ಪತ್ರೆಯಲ್ಲಿ ಸ್ವಚ್ಛತಾ ಕಾರ್ಯಕ್ರಮ

03GDG03
ಗದಗ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಇನ್ನರ್​ ವ್ಹೀಲ್​ ಮತ್ತು ಕೆಎಲ್​ಇ ಸಂಸ್ಥೆ ವತಿಯಿಂದ ಸ್ವಚ್ಚತಾ ಕಾರ್ಯಕ್ರಮ ಜರುಗಿತು. ಬಸವರಾಜ ಬೊಮ್ಮನಹಳ್ಳಿ, ನಾಗರತ್ನ ಮಾರನಬಸರಿ, ವೀಣಾ ತಿರ್ಲಾಪೂರ, ಪುಷ್ಪಾ ಭಂಡಾರಿ, ಪ್ರೋ. ವಾಗೇಶ ರೇಶ್ಮೆ ಇತರರು ಇದ್ದರು.
Published on

ವಿಜಯವಾಣಿ ಸುದ್ದಿಜಾಲ ಗದಗ
ಇನ್ನರ್​ ವ್ಹೀಲ್​ ಸಂಸ್ಥೆ ವತಿಯಿಂದ ನಗರದ ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿ ಗುರುವಾರ ಸ್ವಚ್ಛತಾ ಕಾರ್ಯಕ್ರಮ ಜರುಗಿತು.
ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಜಿಲ್ಲಾ ಆಸ್ಪತ್ರೆಯ ಮುಖ್ಯಸ್ಥ ಡಾ. ಬಸವರಾಜ ಬೊಮ್ಮನಹಳ್ಳಿ, ಪ್ರತಿಯೊಬ್ಬರು ತಮ್ಮ ಮನೆಯನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವಂತೆ ತಮ್ಮ ಸುತ್ತಮುತ್ತಲಿನ ಆವರಣವನ್ನು ಸ್ವಚ್ಛವಾಗಿಟ್ಟು ಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯ ಆಗಿದೆ. ಸುತ್ತಮುತ್ತಲಿನ ಪರಿಸರವನ್ನು ಸರ್ಕಾರದ ಕರ್ಮಚಾರಿಗಳು ಮಾತ್ರ ಸ್ವಚ್ಛವಾಗಿಡಬೇಕೆಂಬ ಭಾವನೆಯನ್ನು ತೊರೆದು ಅದನ್ನು ಸ್ವಚ್ಛವಾಗಿಡುವುದು ನಮ್ಮೆಲ್ಲರ ಜವಾಬ್ದಾರಿ ಆಗಿದೆ ಎಂದರು.
ಕೆಎಲ್​ಇ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯ 40 ಜನ ವಿದ್ಯಾಥಿರ್ಗಳು ಜಿಲ್ಲಾ ಆಸ್ಪತ್ರೆಯ ಆವರಣವನ್ನು ಸ್ವಚ್ಛಗೊಳಿಸುವುದರ ಜೊತೆಗೆ ಸ್ವಚ್ಛತೆಯ ಅನಿವಾರ್ಯತೆ ಹಾಗೂ ಅದರಿಂದಾಗುವ ತೊಂದರೆಗಳನ್ನು ಸಾರ್ವಜನಿಕರಿಗೆ ತಿಳಿಸಿದ್ದಾರೆ. ಕಸ ಹಾಗೂ ತ್ಯಾಜ್ಯಗಳನ್ನು ನಿಗದಿತ ಸ್ಥಳಗಳಲ್ಲಿ ವಿಲೇವಾರಿ ಮಾಡಿದ್ದಾರೆ ಎಂದರು.
ನಾಗರತ್ನ ಮಾರನಬಸರಿ ಮಾತನಾಡಿ, ಜನರು ಕಸ ಹಾಗೂ ಬೇಡವಾದ ವಸ್ತುಗಳನ್ನು ಕಂಡ ಕಂಡಲ್ಲಿ ಚಲ್ಲುವದರಿಂದ ಪರಿಸರ ಹಾಳಾಗುವುದರ ಜೊತೆಗೆ ಅನೇಕ ರೋಗಗಳು ಉದ್ಭವವಾಗಿ ಜನರಿಗೆ ತೊಂದರೆ ಆಗುತ್ತದೆ. ಕಸವನ್ನು ಕಸದ ಗುಂಡಿ ಅಥವಾ ತೊಟ್ಟಿಯಲ್ಲಿ ಹಾಕಬೇಕು ಎಂದರು.
ಎನ್​ಎಸ್​ಎಸ್​ ಅಧಿಕಾರಿ ವಿಠಲ್​ ಕೋಳಿ ಮಾತನಾಡಿ, ಶುಚಿತ್ವದ ಕಡೆಗೆ ಹೆಚ್ಚಿನ ಗಮನ ನೀಡಿ ಕಲುಷಿತ ಹಾಗೂ ಕಸಯುಕ್ತ ಭಾರತವನ್ನು "ಕಸ ಮುಕ್ತ ಭಾರತ'ವನ್ನಾಗಿ ಪರಿವತಿರ್ಸುವುದು ಪ್ರತಿಯೊಬ್ಬ ನಾಗರಿಕರ ಕರ್ತವ್ಯವಾಗಿದೆ. ಸಾರ್ವಜನಿಕರು ಬಸ್​ ನಿಲ್ದಾಣಗಳು, ರೈಲು ನಿಲ್ದಾಣಗಳು, ಆಸ್ಪತ್ರೆಗಳು, ಕಂಟೋನ್ಮೆಂಟ್​ ಬೋರ್ಡ್​ಗಳು, ಕಡಲತೀರಗಳು, ಪ್ರವಾಸಿ ಸ್ಥಳಗಳು, ಮೃಗಾಲಯಗಳು, ರಾಷ್ಟ್ರೀಯ ಉದ್ಯಾನವನಗಳು ಮತ್ತು ಅಭಯಾರಣ್ಯಗಳು, ಐತಿಹಾಸಿಕ ಸ್ಮಾರಕಗಳು, ಪಾರಂಪರಿಕ ತಾಣಗಳು, ನದಿ ಮುಂಭಾಗಗಳು, ಘಾಟ್​ಗಳು ಮತ್ತು ಚರಂಡಿಗಳಂತಹ ಹೆಚ್ಚಿನ ಸಾರ್ವಜನಿಕ ಸ್ಥಳಗಳನ್ನು ಸ್ವಚ್ಛವಾಗಿಡಲು ಹೆಚ್ಚಿನ ಗಮನಹರಿಸಬೇಕು ಎಂದರು.
ಸಂಸ್ಥೆ ಕಾರ್ಯದಶಿರ್ ವೀಣಾ ತಿರ್ಲಾಪೂರ, ಪುಷ್ಪಾ ಭಂಡಾರಿ, ಪ್ರೋ. ವಾಗೇಶ ರೇಶ್ಮೆ ಹಾಗೂ ಜಿಲ್ಲಾ ಆಸ್ಪತ್ರೆಯ ಸಿಬ್ಬಂದಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net