ಖಾಸಗಿ ಅನುದಾನಿತ ಶಿಕ್ಷಣ ಸಂಸ್ಥೆಗಳ ನೇಮಕಾತಿ ವಿಷಯ

04GDG01
Published on

ಆದೇಶ ತಿದ್ದುಪಡಿಗೆ ಎಸ್​.ವಿ. ಸಂಕನೂರು ಆಗ್ರಹ

1986 ರಿಂದ 1995ರ ಶೈಕ್ಷಣಿಕ ವರ್ಷದಲ್ಲಿ ಆರಂಭಗೊಂಡ ಸಂಸ್ಥೆಗಳಿಗೆ ಮಾತ್ರ ಆದೇಶ

ವಿಜಯವಾಣಿ ಸುದ್ದಿಜಾಲ ಗದಗ
ಖಾಸಗಿ ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ಖಾಲಿ ಇರುವ ಹುದ್ದೆಗಳ ಭತಿರ್ಗೆ ಸರ್ಕಾರ ಅನುಮತಿ ನಿಡಿದ್ದನ್ನು ಸ್ವಾಗತಿಸುತ್ತೇನೆ. ಆದರೆ, ನೇಮಕಾತಿ ವಿಷಯದಲ್ಲಿ ಇರುವ ಲೋಪದೋಷಗಳನ್ನು ಸರಿಪಡಿಸಬೇಕು ಎಂದು ವಿಧಾನಪರಿಷತ್​ ಸದಸ್ಯ ಎಸ್​.ವಿ. ಸಂಕನೂರು ಆಗ್ರಹಿಸಿದರು.
ನಗರದ ಪತ್ರಿಕಾ ಭವನದಲ್ಲಿ ಭಾನುವಾರ ಸುದ್ದಿಗೊಷ್ಟಿ ನಡೆಸಿ ಮಾತನಾಡಿದ ಅವರು, ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿನ ನೇಮಕಾತಿ ಸಂಬಂಧ ಸರ್ಕಾರದ ಹಲವು ಲೋಪದೋಷಗಳನ್ನು ಮತ್ತು ನ್ಯೂನ್ಯತೆಗಳನ್ನು ವಿವರಿಸಿದರು. ಕಳೆದ 9 ವರ್ಷಗಳಿಂದ ನಿವೃತ್ತಿ, ಪದೋನ್ನತಿ, ನಿಧನ, ರಾಜೀನಾಮೆಯಿಂದ ತೆರವಾಗಿದ್ದ ಖಾಲಿಯಾಗಿರುವ ಹುದ್ದೆಗಳ ನೇಮಕಾತಿಗೆ ಅವಕಾಶ ನೀಡಿರಲಿಲ್ಲ. ಕಳೆದ ಹಲವು ವರ್ಷಗಳಿಂದ ಈ ವಿಷಯವಾಗಿ ಸದನದ ಒಳಗೆ ಮತ್ತು ಹೊರಗೆ ಹೋರಾಟ ನಡೆಸಲಾಗಿತ್ತು. ಸರ್ಕಾರ ಹೋರಾಟಕ್ಕೆ ಸ್ಪಂಧಿಸಿದೆ. ಆದರೆ, ಆತುರದಲ್ಲಿ ಆದೇಶ ಹೊರಡಿಸಿದ್ದು, 1986 ರಿಂದ 1995ರ ಶೈಕ್ಷಣಿಕ ವರ್ಷದಲ್ಲಿ ಆರಂಭಗೊಂಡಿರುವ ಖಾಸಗಿ ಅನುದಾನಿತ ಶಿಕ್ಷಣ ಸಂಸ್ಥೆಗಳಿಗೆ ಮಾತ್ರ ಅನ್ವಯ ಆಗುವಂತೆ ಆದೇಶ ಹೊರಡಿಸಿದೆ. ಈ ಆದೇಶವನ್ನು ತಿದ್ದುಪಡಿ ಮಾಡುವ ಮೂಲಕ ಒಟ್ಟಾರೆ ಶತಮಾನಗಳಿಂದಲೂ ಆರಂಭಗೊಂಡಿರುವ ಖಾಸಗಿ ಅನುದಾನಿತ ಶಿಕ್ಷಣ ಸಂಸ್ಥೆಗಳ ಖಾಲಿ ಹುದ್ದೆಗಳ ನೇಮಕಾತಿಗೆ ಅವಕಾಶ ಕಲ್ಪಿಸಬೇಕು ಎಂದು ಆಗ್ರಹಿಸಿದರು.
ಪ್ರಮುಖ ವಿರೋಧಗಳೇನು?
ಶತಮಾನಗಳಿಂದಲೂ ಖಾಲಿ ಇರುವ ಹುದ್ದೆಗಳ ನೇಮಕಾತಿ ಜತೆಗೆ 2016 ರಿಂದ 2020ರ ವರೆಗೆ ವಿದ್ಯಾಥಿರ್ಗಳ ಸಂಖ್ಯೆ, ಫಲಿತಾಂಶವನ್ನು ಆಧರಿಸಿ ಅನುಮತಿಸಬೇಕು ಎಂಬ ಷರತ್ತನ್ನು ಸರ್ಕಾರ ಸಡಿಲಿಸಬೇಕು. ಶಿಕ್ಷಕರಿಲ್ಲದೇ ಕೆಲ ಸಂಸ್ಥೆಗಳು ತೊಂದರೆ ಅನುಭವಿಸಿವೆ. ಅಂತಹ ಸಂಸ್ಥೆಗಳಿಗೆ ಈ ಷರತ್ತು ಮಾರಕ ಆಗಲಿದೆ ಮತ್ತು ಖಾಸಗಿ ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ನೇಮಕಾತಿ ಹೊಂದಿದ ಹುದ್ದೆಗಳ ಅನುಮೋದನೆಗಾಗಿ ಆಥಿರ್ಕ ಇಲಾಖೆ ಪ್ರಸ್ತಾವನೆ ಕಳುಹಿಸಬೇಕು ಎಂದುನ್ನು ಮಾರ್ಪಡಿಸಿ ಅಪರ ಆಯುಕ್ತರಿಗೆ ಪ್ರಸ್ತಾವನೆ ಸಲ್ಲಿಸುವ ರೀತಿಯಲ್ಲಿ ಆದೇಶ ತಿದ್ದುಪಡಿ ಮಾಡಬೇಕು ಎಂದರು.
ಖಾಸಗಿ ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ 2023ರ ವರೆಗೆ ಪ್ರೌಢಶಾಲೆಯಲ್ಲಿ 8084 ಹುದ್ದೆ, ಪಿಯುಸಿಯಲ್ಲಿ 2671, ಪದವಿ 4000 ಸೇರಿ 14,761 ಹುದ್ದೆಗಳು ನಿವೃತ್ತಿ, ನಿಧನ, ಪದೋನ್ನತಿ ಹೊಂದಿದ ಕಾರಣಗಳಿಂದ ಹುದ್ದೆಗಳು ಖಾಲಿಯಿವೆ. ಪ್ರೌಢಶಾಲೆ, ಪದವಿಪೂರ್ವ ಹಾಗೂ ಪದವಿ ಕಾಲೇಜುಗಳ ಮಾದರಿಯಲ್ಲಿ ಪ್ರಾಥಮಿಕ ಶಾಲೆಗಳಲ್ಲೂ ಖಾಲಿ ಇರುವ ಹುದ್ದೆಗಳ ನೇಮಕಾತಿಗೆ ಅನುಕೂಲ ಆಗುವಂತೆ ಆದೇಶ ಹೊರಡಿಸಬೇಕು. ಪದವಿ ಕಾಲೇಜುಗಳಿಂದ ಬೇರ್ಪಟ್ಟ ಪದವಿಪೂರ್ವ ಕಾಲೇಜುಗಳಲ್ಲೂ ತೆರವಾಗಿರುವ ಹುದ್ದೆಗಳನ್ನು ಭತಿರ್ ಮಾಡುವಂತೆ ಆದೇಶಿಸಬೇಕು.

ಸುದ್ದಿಗೋಷ್ಠಿಯಲ್ಲಿ ಕೆಎಸ್​ಎಸ್​ ಪ್ರಧಾನ ಕಾರ್ಯದಶಿರ್ ರವಿ ದಂಡಿನ, ಶಶಿಧರ ಕುಲಕಣಿರ್, ಎಂ. ಕೆ. ಲಮಾಣಿ, ಎಸ್​. ಐ. ಮೇಟಿ, ಎಸ್​. ಎ. ಪಾಟೀಲ ಹಲವರು ಇದ್ದರು.

ಕಾಂಗ್ರೆಸ್​ ವಿರುದ್ಧ ವಾಗ್ದಾಳಿ:
ಯಾದಗಿರಿ ಪಿಎಸ್​ಐ ಮರಣ ಪ್ರಕರಣ ಹಿನ್ನೆಲೆ ಕಾಂಗ್ರೆಸ್​ ವಿರುದ್ಧ ವಾಗ್ದಾಳಿ ನಡೆಸಿದ ಎಸ್​.ವಿ. ಸಂಕನೂರು, ---------ಭ್ರಷ್ಟಾಚಾರ ಮತ್ತು ಕಾಂಗ್ರೆಸ್​ ಪಕ್ಷ ಒಂದೇ ನಾಣ್ಯದ ಎರಡು ಮುಖಗಳು ಇದ್ದಂತೆ. ಭ್ರಷ್ಟಾಚಾರದ ಪಿತಾಮಹ ಎಂದರೆ ಕಾಂಗ್ರೆಸ್​. ಆರಂಭದಿಂದಲೂ ವಾಲ್ಮೀಕಿ ನಿಗಮದ ಹಗರಣ, ಮುಡಾ ಹಗರಣ ಹಾಗೂ ಈಗ ವರ್ಗಾವಣೆ ದಂಧೆಯಲ್ಲಿ ಕಾಂಗ್ರೆಸ್​ ಮುಳಗಿದೆ.
ಯಾದಗಿರಿ ಪಿಎಸ್​ಐ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕರು ಹಾಗೂ ಶಾಸಕರ ಮಗ 30 ಲಕ್ಷ ಬೇಡಿಕೆ ಇಟ್ಟಿರುವುದು ಕೇವಲ ಉದಾಹರಣೆ. ಬಹುತೇಕ ಇಲಾಖೆಗಳಲ್ಲಿ ಇದೇ ಮಾದರಿಯಲ್ಲಿ ವರ್ಗಾವಣೆ ವಿಷಯವಾಗಿ ದರ ಪಟ್ಟಿ ಇರುವುದು ಸತ್ಯ ಎಂಬಂತೆ ಬಿಂಬಿತವಾಗಿದೆ. ನೈತಿಕ ಹೊಣೆ ಹೊತ್ತು ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net