ಕರ್ತವ್ಯಕ್ಕೆ ಅನಧಿಕೃತ ಗೈರು: ಚಿಂಚಲಿ ಗ್ರಾಪಂ ಪ್ರಭಾರ ಪಿಡಿಒ ಉಮೇಶ ಬಾರಕೇರ ಅಮಾನತ್ತು

06GDG03
Published on
ಗದಗ: ಕರ್ತವ್ಯಕ್ಕೆ ಪದೇ ಪದೆ ಅನಧಿಕೃತ ಗೈರು, ಸರಿಯಾಗಿ ಕೆಲಸ ನಿರ್ವಹಣೆ ಮಾಡದಿರುವುದು ಸೇರಿ ಸರಕಾರಿ ಯೋಜನೆಗಳ ಸಮರ್ಪಕ ಅನುಷ್ಠಾನದಲ್ಲಿ ಕುಂಠಿತ ಪರಿಣಾಮ ಚಿಂಚಲಿ ಗ್ರಾಪಂ ಪ್ರಭಾರ ಪಿಡಿಒ ಹಾಗೂ ಹರ್ಲಾಪೂರ ಗ್ರಾಪಂ ಗ್ರೇಡ್-1 ಕಾರ್ಯದರ್ಶಿ ಉಮೇಶ ಬಾರಕೇರ್ ಅವರನ್ನು ಅಮಾನತ್ತುಗೊಳಿಸಿ ಜಿಪಂ ಸಿಇಒ, ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಆದೇಶಿಸಿದ್ದಾರೆ.
ಜುಲೈ ಹಾಗೂ ಆಗಸ್ಟ್ ತಿಂಗಳಿನಲ್ಲಿ ಮೇಲಾಧಿಕಾರಿಗಳ ಅನುಮತಿಯಿಲ್ಲದೇ ಅನಧಿಕೃತ ಗೈರಾಗಿದ್ದು, ಸಾರ್ವಜನಿಕರು ಪಿಡಿಒ ವಿರುದ್ಧ ದೂರು ಸಲ್ಲಿಸಿದ್ದರಿಂದ ಜೊತೆಗೆ ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳು ಪಿಡಿಒ ವಿರುದ್ಧ ಶಿಸ್ತು ಕ್ರಮ ಜರುಗಿಸಲು ಶಿಫಾರಸು ಮಾಡಿದ ಹಿನ್ನೆಲೆಯಲ್ಲಿ ಪ್ರಭಾರ ಪಿಡಿಒ ಉಮೇಶ ಬಾರಕೇರ ಅವರ ಕರ್ತವ್ಯ ಲೋಪವನ್ನು ಗಂಭೀರವಾಗಿ ಪರಿಗಣಿಸಿ ಶಿಸ್ತು ಕ್ರಮ ಜರುಗಿಸಲು ಅವಶ್ಯವಿರುವುದರಿಂದ ಇಲಾಖಾ ವಿಚಾರಣೆ ಬಾಕಿ ಇರಿಸಿ ಸೇವೆಯಿದ ಅಮಾನತ್ತುಗೊಳಿಸಲಾಗಿದೆ.
ಈ ಹಿಂದೆ ಚಿಂಚಲಿ ಗ್ರಾಪಂ ಪಿಡಿಒ, ಕಾರ್ಯದರ್ಶಿಯನ್ನು ಹುಡುಕಿ ಕೊಡಿ, ಹುಡುಕಿ ಕೊಟ್ಟವರಿಗೆ ಆಕರ್ಷಕ ಬಹುಮಾನ ಕೊಡಲಾಗುವುದು ಎಂದು ಚಿಂಚಲಿ, ಕಲ್ಲೂರ, ನೀಲಗುಂದ ಗ್ರಾಮಸ್ಥರು ಗೋಡೆಗಳ ಮೇಲೆ ಪೋಸ್ಟರ್ ಗಳನ್ನು ಅಂಟಿಸಿದ್ದರು.  ವಿಶೇಷ ವರದಿ ಪ್ರಕಟವಾದ ಬೆನ್ನಲ್ಲೇ ಪಿಡಿಒ ಉಮೇಶ ಬಾರಕೇರ ಕರ್ತವ್ಯಕ್ಕೂ ಹಾಜರಾಗಿದ್ದರು. ಆದರೆ, ಕರ್ತವ್ಯ ಲೋಪದಡಿ ಜಿಪಂ ಸಿಇಒ ಅವರು ಪಿಡಿಒ ಉಮೇಶ ಬಾರಕೇರ ಅವರನ್ನು ಅಮಾನತ್ತುಗೊಳಿಸಿ ಆದೇಶಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net