ಪರಿಶಿಷ್ಟ ಜಾತಿಯಲ್ಲಿ ಕ್ರಿಶ್ಚಿಯನ್‌ ಟ್ಯಾಗ್ ಕೈಬಿಡಲು ಒತ್ತಾಯ

Published on
ಗದಗ: ಒಂದು ನಿಗದಿತ ಧರ್ಮ ಬೆಳೆಸುವ ಉದ್ದೇಶ ಸರ್ಕಾರಕ್ಕೆ ಇದೆಯೇ? ಈ ಸಮೀಕ್ಷೆಯಲ್ಲಿ ಆದಿ ಆಂಧ್ರ ಕ್ರಿಶ್ಚಿಯನ್, ಆದಿ ಕರ್ನಾಟಕ ಕ್ರಿಶ್ಚಿಯನ್, ಆದಿದ್ರಾವಿಡ ಕ್ರಿಶ್ಚಿಯನ್ ಸೇರಿ ಹತ್ತಾರು ಜಾತಿಗಳನ್ನು ಸೇರಿಸಲು ನಿಮಗೆ ಯಾರು ಪ್ರೇರೇಪಣೆ ಕೊಟ್ಟಿದ್ದಾರೆ? ಎಂದು ರಾಜ್ಯ ಎಸ್ಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಮಹೇಂದ್ರ ಕೌತಾಳ
 ನಗರದ ಪತ್ರಿಕಾ ಭವನದಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ,  ದಲಿತ ಜಾತಿಗಳ ಕ್ರಿಶ್ಚಿಯನ್ ಹೆಸರು ಇರುವ ಹೊಸ ಜಾತಿಗಳನ್ನೇಕೆ ಉಳಿಸಿಕೊಂಡಿದ್ದೀರಿ. ದಲಿತರನ್ನು ಕ್ರಿಶ್ಚಿಯನ್ ಮಾಡುವ ಉದ್ದೇಶವೇ?. ಒಂದು ಧರ್ಮವನ್ನು ಬೆಳೆಸುವ ಉದ್ದೇಶ ಸರ್ಕಾರಕ್ಕೆ ಇದೆಯಾ. ಜನ ಕ್ರಿಶ್ಚಿಯನ್ ಮತಾಂತರದ ವಿರುದ್ಧ ಬೀದಿಗೆ ಇಳಿದಿದ್ದಾರೆ. ಒಂದು ಕ್ರಿಶ್ಚಿಯನ್‌ ಅಂತಹ ಸಮೀಕ್ಷೆ ಮಾಡಿದರೆ ಮುಂಬರುವ ದಿನಗಳಲ್ಲಿ ಉಗ್ರವಾದ ಹೋರಾಟ ಮಾಡಲಾಗುತ್ತದೆ ಎಂದರು.
ಈ ಹಿಂದಿನ ವರದಿಯಲ್ಲಿ 14 ಸಾವಿರ ಜಾತಿಗಳ ಪಟ್ಟಿಯನ್ನು ಸಿದ್ದಗೊಳಿಸಿ, 48 ಹಿಂದು ಸಮುದಾಯದ ಜಾತಿಗಳಿಗೆ ಕ್ರಿಶ್ಚಿಯನ್ ಪಟ್ಟ ಕಟ್ಟಲಾಗಿದೆ. ದಲಿತ ಸಂಬಧಪಟ್ಟ ಜಾತಿಗಳಿಗೆ ಕ್ರಿಶ್ಚಿಯನ್ ಪಟ್ಟ ಕಟ್ಟಿ ದಲಿತ ಸಮುದಾಯವನ್ನು ಒಡೆಯುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ದಲಿತ ಸಮುದಾಯಗಳಿಗೆ ಸಂಬಧಪಟ್ಟ ಜಾತಿಗಳ ಹೆಸರಿಗೆ ಜೋಡಿಸಿರುವ ಕ್ರಿಶ್ಚಿಯನ್ ಪದವನ್ನು ತೆಗೆದು ಹಾಕಬೇಕು. ಮುಂಬರುವ ದಿನಗಳಲ್ಲಿ ಮತಬ್ಯಾಂಕ್ ಗೋಸ್ಕರ್ ಜಾತಿಗಳ ನಡುವೆ ಒಡಕು ಉಂಟು ಮಾಡುವ ಉದ್ದೇಶದಿಂದ ಜಾತಿ ಸಮೀಕ್ಷೆ ಮಾಡುತ್ತಾರೆ ಎಂದು ಹೇಳಿದರು.
15 ದಿನಗಳಲ್ಲಿ ಸಮೀಕ್ಷೆ ಸಾಧ್ಯವೇ?
 15 ದಿನಗಳಲ್ಲಿ ಸುಮಾರು 7 ಕೋಟಿ ಜನರ ಸಮೀಕ್ಷೆ ಮುಗಿಸುವುದಾಗಿ ಹೇಳಿದ್ದಾರೆ. ಪರಿಶಿಷ್ಟ ಜಾತಿಗಳದು ನೀವೇ ಹೇಳಿದಂತೆ 1 ಕೋಟಿ 7 ಲಕ್ಷ ಜನಸಂಖ್ಯೆ. ಇಷ್ಟು ಜನಸಂಖ್ಯೆಯ ಸಮೀಕ್ಷೆಗೆ 3-4 ಸಾರಿ ಮುಂದೂಡಿ 2 ರಿಂದ ಎರಡೂವರೆ ತಿಂಗಳ ಕಾಲ ಸಮೀಕ್ಷೆ ಮಾಡಿದ್ದೀರಿ ಎಂದರು.
ಜಯಪ್ರಕಾಶ್ ಹೆಗ್ಡೆಯವರ ಆಯೋಗದ ವರದಿ ತರಿಸಿಕೊಂಡರು. ಅದೂ ಆಯಿತು. ವರದಿ ಒಪ್ಪಿಗೆ ಪಡೆಯಲಿಲ್ಲ. ಈಗ 3ನೇ ಆಯೋಗದ ವರದಿಗೆ ಹೊರಟಿದ್ದಾರೆ. ಮೊದಲನೇ ಆಯೋಗದ ವರದಿಗೆ ಗೊಂದಲ ಇರಲಿಲ್ಲ. ಎರಡನೇ ವರದಿ ಬಂದಾಗ ಅಲ್ಪ ಗೊಂದಲ ಆರಂಭವಾಗಿತ್ತು. ಈಗ 3ನೇ ಆಯೋಗ ಮಾಡಿದ್ದು, ಸಂಪೂರ್ಣ ಗೊಂದಲ ಇದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಎಸ್ಸಿ ಮೋರ್ಚಾ ಜಿಲ್ಲಾಧ್ಯಕ್ಷ ಮಂಜುನಾಥ ಮುಳಗುಂದ ಮಾತನಾಡಿ, ಎಸ್ಸಿಎಸ್ಟಿ ಜಾತಿ ಜನಗಣತಿ ಎಸ್ಸಿಪಿ-ಟಿಎಸ್ಪಿ 150 ಕೋಟಿ ರೂ. ಹಣವನ್ನು ಬಳಸಿಕೊಂಡು ಮಾಡಿಕೊಂಡು ಮಾಡಿದ್ದಾರೆ. ಈಗ ಮತ್ತೆ ಜನಗಣತಿ ಮಾಡುವ ಮೂಲಕ ಸಾಕಷ್ಟು ಹಣ ಖರ್ಚು ಮಾಡುತ್ತಿದ್ದಾರೆ. ‌25 ಸಾವಿರ ಕೋಟಿ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಕೆ ಮಾಡಿಕೊಂಡಿದ್ದಾರೆ. ಈ ಕೂಡಲೇ ಸರಕಾರ ಕೈಬಿಡದೇ ಇದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ರಾಜು ಕುರಡಗಿ, ಎಂ.ಎಸ್. ಕರಿಗೌಡ್ರ, ಲಿಂಗರಾಜ ಪಾಟೀಲ, ಉಷಾ ದಾಸರ, ಶ್ರೀಕಾಂತ ದೊಡ್ಡಮನಿ, ಸುರೇಶ ಚಲವಾದಿ, ಉಡಚಪ್ಪ ಹಳ್ಳಿಕೇರಿ, ಅಶೋಕ ಕುಡತಿನಿ ಸೇರಿದಂತೆ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net