ಅಪ್ರತಿಮ  ಸ್ವಾತಂತ್ರ್ಯ ಹೋರಾಟಗಾರ ಸುಭಾಷ್ ಚಂದ್ರ ಬೋಸ್ - ಡಾ. ಗಂಗೂಬಾಯಿ ಪವಾರ.

IMG-20240801-WA0026
Published on

ಗದಗ: ನಗರದ ಶತಮಾನ ಪೂರೈಸಿದ ಹಾಗೂ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ವಿದ್ಯಾದಾನ ಸಮಿತಿಯ ಶ್ರೀಮತಿ ಎಂ. ಬಿ. ಹುಯಿಲಗೋಳ ಶಿಕ್ಷಣ ಮಹಾವಿದ್ಯಾಲಯದಲ್ಲಿ  78 ನೇ ಸ್ವಾತಂತ್ರೋತ್ಸವದ ಅಂಗವಾಗಿ  ನೇತಾಜಿ ಸುಭಾಷ್ ಚಂದ್ರ ಬೋಸ್ ರವರ ಕುರಿತು ಉಪನ್ಯಾಸ ಕಾರ್ಯಕ್ರಮ ಆಯೋಜನೆ ಮತ್ತು   ಪ್ರಶಿಕ್ಷಣಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ ಏರ್ಪಡಿಸಲಾಗಿತ್ತು.

ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ಗಂಗೂಬಾಯಿ ಪವಾರ ರವರು ನೇತಾಜಿ ಸುಭಾಷ್ ಚಂದ್ರ  ಬೋಸ್ ಅವರ ಜೀವನದ ಕುರಿತು ಹಾಗೂ ಬೋಸ್ ಅವರ ವಾಕ್ಯಗಳಾದ ನನಗೆ ರಕ್ತ ಕೊಡಿ, ನಾನು ನಿಮಗೆ ಸ್ವಾತಂತ್ರ್ಯವನ್ನು ನೀಡುತ್ತೇನೆ,  ಸ್ವಾತಂತ್ರ್ಯವನ್ನು ಯಾರೂ ಕೊಡುವುದಿಲ್ಲ. ಅದನ್ನು ನಾವೇ ಪಡೆದುಕೊಳ್ಳಬೇಕು ಎಂಬ ಪ್ರಸಿದ್ಧ ಉಲ್ಲೇಖವನ್ನು ಉಲ್ಲೇಖಿಸಿ,  ಸುಭಾಷ್ ಚಂದ್ರ ಬೋಸ್ ರವರು ಸ್ವಾತಂತ್ರ್ಯ ಚಳುವಳಿಯಲ್ಲಿ  ಭಾರತ ಕಂಡ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ, ಪ್ರಮುಖ ಕ್ರಾಂತಿಕಾರಿ ನಾಯಕ, ಮಹಾನ್ ದೇಶಭಕ್ತ, ರಾಷ್ಟ್ರೀಯತಾವಾದಿ, ಕೆಚ್ಚೆದೆಯ ಹೋರಾಟಗಾರ ಮತ್ತು ಧೈರ್ಯಶಾಲಿ ನಾಯಕರಾಗಿದ್ದರು ಎಂದು ತಿಳಿಸುವುದರ ಜೊತೆಗೆ ಭಾರತೀಯ ರಾಷ್ಟ್ರೀಯ ಸೇನೆಯ (INA) ಮಹತ್ವವನ್ನು ಪ್ರಶಿಕ್ಷಣಾರ್ಥಿಗಳಿಗೆ ತಿಳಿಸಿದರು.

ಈ ಸಂದರ್ಭದಲ್ಲಿ ಪ್ರಶಿಕ್ಷಣಾರ್ಥಿಗಳಾದ  ಬಸವರಾಜ, ರವಿಚಂದ್ರ, ವೀಣಾ, ದೀಪಕ್ ರವರು ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಕುರಿತು  ಭಾಷಣವನ್ನು ಮಾಡಿದರು. ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ಉಪನ್ಯಾಸಕರಾದ ಶ್ರೀ ವಿ. ಪಿ. ಪಾಟೀಲ, ಶ್ರೀ ಎನ್. ಜಿ. ಚನ್ನಪ್ಪಗೌಡ್ರ, ಶ್ರೀ ಬಸವರಾಜ ಕರಬಿಷ್ಠಿ, ಶ್ರೀ ಎಸ್. ವಾಯ್, ಕಠಾರಿ. ಶ್ರೀ ಶಶಿಧರ ಹೊಸಳ್ಳಿ ಮತ್ತು ವಿದ್ಯಾಲಯದ  ಎಲ್ಲಾ ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು. ಪ್ರಶಿಕ್ಷಣಾರ್ಥಿಯಾದ ವಿನೋದ ಕುಂಬಾರ ಕಾರ್ಯಕ್ರಮವನ್ನು ನಿರೂಪಿಸಿದರು, ದಿವ್ಯಾ ಎ. ಹೆಚ್ ಪ್ರಾರ್ಥನಾಗೀತೆ ಹಾಡಿದರು, ವಿಜಯ ಲಮಾಣಿ ಸ್ವಾಗತಿಸಿದರು ಮತ್ತು  ಅಕ್ಷತಾ ಬಡಿಗೇರ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net