ಬೀದಿ ದೀಪ ನಿರ್ವಹಣೆ ಟೆಂಡರ್​ ! ಕೆಪಿಪಿಪಿ ನಿಯಮ ಉಲ್ಲಂಘನೆ? ಅಧಿಕ ವೆಚ್ಚದ ದರಪಟ್ಟಿ ಬಿಡ್​ ಮಾಡಿದವರಿಗೆ ಟೆಂಡರ್​

IMG-20240102-WA0003 (1)
Published on

ಶಿವಾನಂದ ಹಿರೇಮಠ, ಗದಗ
ಬೀದಿದೀಪ ನಿರ್ವಹಣೆ ಗುತ್ತಿಗೆಯಲ್ಲಿ ಅಕ್ರಮ ಎಸಗಿ, ಹಲವು ನಿಯಮ ಉಲ್ಲಂಘಿಸಿರುವ ಗದಗ ನಗರ ಸಭೆಯಲ್ಲಿ ಜಿಲ್ಲಾಧಿಕಾರಿ ಅನುಮೋದನೆ ಇಲ್ಲದೇ ಕೋಟಿಗೂ ಅಧಿಕ ಮೊತ್ತಕ್ಕೆ ಗುತ್ತಿಗೆ ನೀಡಿದ ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೇ ಟೆಂಡರ್​ ಪ್ರಕ್ರಿಯೆಲ್ಲಿ ರಾಜ್ಯ ಸರ್ಕಾರದ ಕರ್ನಾಟಕ ಪಬ್ಲಿಕ್​ ಪ್ರೊಕ್ಯೂರಮೆಂಟ್​ ಪೋರ್ಟಲ್​(ಕೆಪಿಪಿಪಿ) ನಿಯಮ ಉಲ್ಲಂನೆ ಮತ್ತು ಅಧಿಕ ಮೊತ್ತಕ್ಕೆ ಬಿಡ್​ ಮಾಡಿದವರಿಗೆ ಗುತ್ತಿಗೆ ನೀಡಿದ್ದು ಬೆಳಕಿಗೆ ಬಂದಿದೆ. ಕಡಿಮೆ ವೆಚ್ಚಕ್ಕೆ ಆಥಿರ್ಕ ಬಿಡ್​ ಮಾಡಿದ ಗುತ್ತಿಗೆದಾರನನ್ನು ಯಾವ ಆಧಾರದಲ್ಲಿ ಪ್ರಕ್ರಿಯೆಯಿಂದ ಕೈಬಿಡಲಾಗಿದೆ ಎಂಬುದು ಗೌಪ್ಯವಾಗಿದ್ದು, ಬೀದಿ ದೀಪಿ ನಿರ್ವಹಣೆಯಲ್ಲಿ ನಿರ್ವಹಣೆಯಲ್ಲಿ ಕಾನೂನು ಉಲ್ಲಂನೆ ಮತ್ತು ಭ್ರಷ್ಟಾಚಾರಕ್ಕೆ ಸಾಕ್ಷ$್ಯ ದೊರೆತಿದೆ.

ಕೆಪಿಪಿಪಿ ಉಲ್ಲಂಘನೆ
ಆನ್​ಲೈನ್​ ಮೂಲಕ ನಡೆಯುವ ಟೆಂಡರ್​ ಪ್ರಕ್ರಿಯೆಯಲ್ಲಿ ಬೀದಿ ದೀಪ ನಿರ್ವಹಣೆ ಗುತ್ತಿಗೆ ಪಡೆಯಲು ಗುತ್ತಿಗೆದಾರನು ರಾಜ್ಯದ ಇತರೆ ಜಿಲ್ಲೆಯಿಂದಲೂ ಆನ್​ಲೈನ್​ ಮೂಲಕ ಆಥಿರ್ಕ ಬಿಡ್​ ನಲ್ಲಿ ಭಾಗವಹಿಸಬಹುದು. ಆದರೆ, ಹೊರ ಜಿಲ್ಲೆ ಗುತ್ತಿಗೆದಾರರಿಗೆ ಟೆಂಡರ್​ ಲಭಿಸದಂತೆ ನಡಾವಳಿ ಬರೆದ ನಗರಸಭೆಯು ಕೆಪಿಪಿಪಿ ನಿಯಮ ಉಲ್ಲಂಘಿಸಿದೆ. ಸಾಮಾನ್ಯ ಸಭೆ ಠರಾವು ಸಂಖ್ಯೆ 263ರ ಸಾಮಾನ್ಯ ನಡಾವಳಿಯಲ್ಲಿ ನಗರಸಭೆ ನಮೂದಿಸಿ ಅಂಶಗಳು ಕೆಪಿಪಿಪಿ ನಿಯಮ ಉಲ್ಲಂನೆ ಸ್ಪಷ್ಟವಾಗಿ ಗೋಚರಿಸಿದೆ. ಸ್ಥಳಿಯರಲ್ಲದ ಗುತ್ತಿಗೆದಾರರಿಂದ ಸಮಪರ್ಕ ನಿರ್ವಹಣೆ ಸಾಧ್ಯವಿಲ್ಲ ಎಂದು ನಡಾವಳಿ ಬರೆದ ನಗರಸಭೆಯು ಹೊರ ಜಿಲ್ಲೆ ಗುತ್ತಿಗೆದಾರರಿಗೆ ಟೆಂಡರ್​ ಲಭಿಸಂದತೆ ಚಾಣಾಕ್ಷ ನಡೆ ಅನುಸರಿಸಿದೆ. ಟೆಂಡರ್​ ನಲ್ಲಿ ಭಾಗವಹಿಸಿದ್ದ ಬೆಂಗಳೂರಿನ ಚೈತನ್ಯ ಎಲೆಕ್ಟ್ರಿಕಲ್ಸ್​(ರಮಾಮಣಿ), ಶಿವಮೊಗ್ಗದ ಶ್ರೀ ಎಂಟರಪೆಸಸ್​ ಹಾಗೂ ಬಾಗಲಕೋಟೆಯ ದುರ್ಗಾ ಎಲೆಕ್ಟ್ರಿಕಲ್​ ಗುತ್ತಿಗೆದಾರರನ್ನು ಹೊರಗಿಟ್ಟು, ಸ್ಥಳಿಯ ಗುತ್ತಿಗೆದಾರ ಸವಿಜ್ಯೋತಿ ಎಲೆಕ್ಟ್ರಿಕಲ್​ ಅವರಿಗೆ ಗುತ್ತಿಗೆ ನೀಡಲಾಗಿದೆ. ಈ ನಡಾವಳಿಯಿಂದ ಕೆಪಿಪಿಪಿ ನಿಯಮ ಉಲ್ಲಂನೆ ಆಗಿದ್ದು ಸ್ಪಷ್ಟವಾಗಿದೆ.

ಆದಿಕ ಮೊತ್ತಕ್ಕೆ ಟೆಂಡರ್​:
ಕಡಿಮೆ ಮೊತ್ತಕ್ಕೆ ಟೆಂಡರ್​ ಹಾಕಿದ್ದ ಗುತ್ತಿಗೆದಾರನನ್ನು ಕೈಬಿಟ್ಟು, ಅಧಿಕ ಮೊತ್ತಕ್ಕೆ ಟೆಂಡರ್​ ಹಾಕಿದವರಿಗೆ ಗುತ್ತಿಗೆ ನೀಡಿದ ಒಳಗುಟ್ಟೇನು? ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಕಾಡುತ್ತಿದೆ. ಬೆಂಗಳೂರಿನ ಚೈತನ್ಯ ಎಲೆಕ್ಟ್ರಿಕಲ್ಸ್​(ರಮಾಮಣಿ) ಎಂಬುವರು ಹಾಕಿದ್ದ 92,98,999 ರೂ. ಬೀದಿ ದೀಪ ನಿರ್ವಹಣೆಯ ವಾಷಿರ್ಕ ಗುತ್ತಿಗೆಯನ್ನು ಕೈಬಿಟ್ಟು, 99,88,989 ರೂ. ಅಧಿಕ ಮೊತ್ತಕ್ಕೆ ಟೆಂಡರ್​ ಹಾಕಿದ್ದ ಸ್ಥಳಿಯ ಗುತ್ತಿಗೆದಾರ ಸವಿಜ್ಯೋತಿ ಎಲೆಕ್ಟ್ರಿಕಲ್ಸ್​ (ಯಲ್ಲಪ್ಪಾ ತಿಪ್ಪಾಪುರ) ಎಂಬುವರು ಗೆ ಟೆಂಡರ್​ ಲಭಿಸಿದ್ದು, ಟೆಂಡರ್​ ತುಲನಾತ್ಮಕ ಪಟ್ಟಿಯಲ್ಲಿ ಸ್ಪಷ್ಟವಾಗಿದೆ. ಟೆಂಡರ್​ ಪ್ರಕ್ರಿಯೆಯಲ್ಲಿ ಕಾನೂನು ಬಾಹಿರ ಚಟುವಟಿಕೆ, ನಿಯಮಗಳನ್ನು ಗಾಳಿಗೆ ತೂರಿದ್ದು ಸ್ಪಷ್ಟವಾಗಿದೆ.

ಕ್ರಮ ಏಕಿಲ್ಲ?
ನಗರಭೆಯಲ್ಲಿ ಆಡಳಿತಾತ್ಮಕ ವಿಷಯದಲ್ಲಿ ಕಾನೂನು ಬಾಹಿರ ಕಾರ್ಯ ಚಟುವಟಿಕೆಗಳು ಈ ಮೊದಲಿನಿಂದಲೂ ನಡೆಯುತ್ತಲೇ ಇವೆ. ನಕಲಿ ಠರಾವು ಮೂಲಕ ಕೋಟಿ ರೂ.ಗೂ ಅಧಿಕ ಮೊತ್ತದ ಯುಜಿಡಿ ನಿರ್ವಹಣೆಗೆ ಅನುಮೋದನೆ, ಅಭಿವೃದ್ಧಿಗೊಳ್ಳದ 1063 ನಿವೇಶನಗಳಿಗೆ ಹಕ್ಕು ಬದಲಾವಣೆಯ ಾಮ್​ರ್ ನಂ.3 ವಿತರಣೆ ಅಕ್ರಮ, ಸಾಮಾನ್ಯ ಸಭೆಗಳಲ್ಲಿ ಠರಾವು ಪಾಸಾಗದೇ ಕೇವಲ ಕಾರ್ಯಾನುದೇಶ ಆಧಾರದಲ್ಲಿ ಲಾಂತರ ರೂ ಕಾಮಗಾರಿ ನಡೆಸಿರುವ ಅಕ್ರಮಗಳು ನಡೆದರೂ ಸೂಕ್ತ ತನಿಖೆ ಏಕೆ ಆಗುತ್ತಿಲ್ಲ ಎಂಬ ಅನುಮಾನ ಸಾರ್ವಜನಿಕರನ್ನು ಕಾಡುತ್ತಿದೆ. ಜಿಲ್ಲಾಡಳಿತ ಈ ಅಕ್ರಮಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಅವಶ್ಯಕತೆ ಇದೆ.

ಕೋಟ್​:
ಬೀದಿದೀಪ ನಿರ್ವಹಣೆ ಗುತ್ತಿಗೆಯ ಸಂರ್ಪೂಣ ದಾಖಲೆಯನ್ನು ಪರಿಶೀಲಿಸಿ ವರದಿ ನೀಡಲು ಯೋಜನಾ ನಿರ್ದೇಶಕರಿಗೆ ನಿರ್ದೇಶಿಸಲಾಗಿದೆ. ಅಕ್ರಮ ನಡೆದಿದ್ದೂ ಸಾಭಿತಾದರೆ, ಯಾರೇ ಆಗಲಿ ಅಂತವರ ಮೇಲೆ ಕ್ರಮ ಕಂಡಿತ ತೆಗೆದುಕೊಳ್ಳುತ್ತೇವೆ.
- ವೈಶಾಲಿ ಎಂ.ಎಲ್​ ಜಿಲ್ಲಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net