

ಜನಸಾಮಾನ್ಯರ ಹಿಡಿಶಾಪ! ಸಮರ್ಪಕ ನಿರ್ವಹಣೆಗೆ ಆಗ್ರಹ
ಶಿವಾನಂದ ಹಿರೇಮಠ ಗದಗ,
ಪ್ರತಿ ತಿಂಗಳು 47 ಲಕ್ಷ ಕೊರತೆ ಅನುಭವಿಸುತ್ತಿರುವ ನಗರಸಭೆ ಸಾಮಾನ್ಯ ನಿಧಿಯಿಂದ ವಾಷಿರ್ಕ 1 ಕೋಟಿಗೂ ಅಧಿಕ ವೆಚ್ಚದ ಬೀದಿ ದೀಪ ನಿರ್ವಹಣೆ ಗುತ್ತಿಗೆಯಲ್ಲಿ ಭ್ರಷ್ಟಾಚಾರದ ವಾಸನೆ ಸುಳಿದಾಡುತ್ತಿದೆ. ಇದರನ್ವಯ ಪ್ರತಿ ತಿಂಗಳು ಅಂದಾಜು 11,42,521 ಲಕ್ಷ ರೂ. ಬಿಲ್ ಪಾವತಿಸುವ ಕಾರ್ಯಾದೇಶವನ್ನು ಡಿ.1, 2023 ರಿಂದ ನೀಡಲಾಗಿದೆ. ಆದರೆ, ನಿರ್ವಹಣೆ ಸಮರ್ಪಕವಾಗಿದೆಯೇ ಎಂಬ ಪ್ರಶ್ನೆ ಜನ ಮಾನಸದಲ್ಲಿ ಕಾಡುತ್ತಿದೆ. ನಗರದ ಹಲವಡೆ ಬೀದಿ ದೀಪಗಳು ದುರಸ್ತಿ ಆಗುತ್ತಿಲ್ಲ. ಗುತ್ತಿಗೆದಾರನ ಹೆಸರಲ್ಲಿ ನಗರಸಭೆ ಸದಸ್ಯರೇ ಈ ಕೆಲಸ ನಿರ್ವಹಿಸುತ್ತಿದ್ದಾರೆ ಎಂಬ ಮಾತುಗಳು ಕೂಡ ನಗರಸಭೆ ಆವರಣದಲ್ಲಿ ಕೇಳಿ ಬರುತ್ತಿದೆ.
ಬೀದಿ ದೀಪಗಳ ದುರಸ್ತಿ ಕುರಿತು ನಗರಸಭೆ ಸಾಕಷ್ಟು ದೂರುಗಳು ಬರುತ್ತಿದ್ದರೂ ಗುತ್ತಿಗೆದಾರರು ಮತ್ತು ನಗರಸಭೆ ಸದಸ್ಯರು ಈ ಬಗ್ಗೆ ಗಂಭಿರತೆ ತೆಗೆದುಕೊಂಡಿಲ್ಲ. ದೂರು ಸ್ವೀಕರಿಸಿ ನಿರ್ವಹಣೆ ಪ್ರಕ್ರಿಯೆ ಅಳವಡಿಸಿಕೊಂಡಿಲ್ಲ. ದೀಪಗಳ ದುರಸ್ತಿಗೆ ನಿಧಿರ್ಷ್ಠ ಪ್ರಕ್ರಿಯೆಯನ್ನೇ ಅಳವಡಿಸಿಕೊಳ್ಳದ ಹಿನ್ನೆಲೆ ಜನಸಾಮಾನ್ಯರ ದುಡ್ಡು ನೀರಿನಂತೆ ಅನಗತ್ಯ ರ್ಖಚಾಗುತ್ತಿದೆ ಎಂಬ ಮಾತು ಕೇಳಿ ಬರುತ್ತಿವೆ.
ಸ್ಲಂಗಳಲ್ಲೇ ಸಮಸ್ಯೆ ಹೆಚ್ಚು:
ಬಡವರು ಮತ್ತು ಅಲ್ಪಸಂಖ್ಯಾತರು ಹೆಚ್ಚು ವಾಸಿಸುತ್ತಿರುವ ಹಾಗೂ ಸ್ಲಂ ಏರಿಯಾದಲ್ಲೇ ಬೀದಿ ದೀಪದ ಸಮಸ್ಯೆ ಹೆಚ್ಚು ಕಂಡು ಬರುತ್ತಿದೆ. ಇಲ್ಲಿನ ಮುಗ್ಧ ಜನರ ವಿಶ್ವಾಸವನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂಬುದಾಗಿ ಇಲ್ಲಿನ ಜನರು ಆರೋಪಿಸುತ್ತಿದ್ದಾರೆ. ಬೀದಿ ದೀಪಗಳು ಇಲ್ಲದ ಹಿನ್ನೆಲೆ ಸ್ಲಂ ನಿವಾಸಿಗಳ ಕಷ್ಟ ಹೇಳತೀರದಾಗಿದೆ. ವಾರ್ಡ್ ನಂ 17, 18 ಮತ್ತು ವಾರ್ಡ್ ನಂ 1 ರಲ್ಲಿ, ಗಂಗಿಮಡಿ, ಬೆಟಗೇರಿಯ ಭಜಂತ್ರಿ ನಗರ, ವಾಲ್ಮೀಕಿ ನಗರ, ನರಸಾಪುರ ಆಶ್ರಯ ಕಾಲನಿ, ಹನುಮಾನಸಿಂಗ್ ಜಮಾದಾರ ನಗರ, ಬೆಟಗೇರಿಯ ಸಿದ್ದಲಿಂಗೇಶ್ವರ ನಗರ, ಶರಣ ಬಸವೇಶ್ವರ ನಗರದಲ್ಲಿ ಹಲವಡೆ ಬೀದಿ ದೀಪಗಳನ್ನು ಬದಲಾಯಿಸಬೇಕಿದೆ. ಕಳೆದ ಹಲವು ತಿಂಗಳಿಂದ ಗದಗ - ಬಾದಾಮಿ ರಸ್ತೆ, ಗದಗ ಬೆಟಗೇರಿ ಪ್ರಮುಖ ಹೆದ್ದಾರಿ, ಹೊಸ ಬಸ್ ನಿಲ್ದಾಣ ಅಕ್ಕಪಕ್ಕದ ಲೇಔಟ್ಗಳಲ್ಲಿ, ನಗರದ ಸೆಟ್ಲಮೆಂಟ್ ಸೇರಿದಂತೆ ಬಹುತೇಕ ಹಲವಡೆ ಬೀದಿ ದೀಪಗಳ ದುರಸ್ತಿ ಕಾರ್ಯ ನಡೆಯಬೇಕಿದೆ.
ಬೀದಿ ದೀಪಗಳು ಎಷ್ಟಿವೇ?
ನಗರಸಭೆ ವ್ಯಾಪ್ತಿಯಲ್ಲಿ 20/40 ವ್ಯಾಟ್ ಟ್ಯುಬ್ಲೈಟ್, 70 ವ್ಯಾಟ್ ಸಾಮರ್ಥ್ಯ ಎಚ್ಪಿ ಎಸ್ವಿಎಲ್ ಲೈಟ್ಸ್ , ಹೈ ಮಾಸ್ಕ್, 250 ವ್ಯಾಟ್ ಸಾಮರ್ಥ್ಯದ ಲೈಟ್ಗಳು ಹಾಗೂ ಸೋಡಿಯಂ ವಿದ್ಯುತ್ ದೀಪಗಳು ಸೇರಿ 11954 ಬೀದಿ ದೀಪಗಳನ್ನು ಅಳವಡಿಸಲಾಗಿದೆ. ಆದರೆ, ಶೇ. 50 ರಷ್ಟು ಬೀದಿ ದೀಪಗಳು ಉರಿಯುತ್ತಿಲ್ಲ ಎಂಬುದು ಸತ್ಯ.
ಪ್ರಸಕ್ತ ಸಾಲಿನಲ್ಲಿ ನಗರದ ಸವಿಜ್ಯೋತಿ ಎಲೆಕ್ಟ್ರಿಕ್ ಎಂಬ ಸಂಸ್ಥೆಗೆ ವಾಷಿರ್ಕ 1 ಕೋಟಿಗೂ ಅಧಿಕ ವೆಚ್ಚದ ಬೀದಿ ದೀಪಗಳ ನಿರ್ವಹಣೆ ನೀಡಲಾಗಿದೆ. 2022-23 ವಾಷಿರ್ಕ ಅವಧಿಯಲ್ಲಿ ಗುತ್ತಿಗೆಯ ಮೂಲ ಬೆಲೆ 99.89 ಲಕ್ಷಕ್ಕೇ ನಗರದ ಸಂಗಮೇಶ್ವರ ಎಂಟರ್ಪೆಸಸ್ ಅವರಿಗೆ ಬೀದಿ ದೀಪಗಳ ಕಾರ್ಯ ನಿರ್ವಹಣೆಗೆ ಗುತ್ತಿಗೆ ನೀಡಲಾಗಿತ್ತು. ಆಗಿನಿಂದಲೂ ಬೀದಿ ದೀಪಗಳ ನಿರ್ವಹಣೆ ಸಮರ್ಪಕವಾಗಿ ನಡೆಯುತ್ತಿಲ್ಲ ಎಂಬ ಆರೋಪ ಕೇಳಿ ಬರುತ್ತಿದ್ದು, ಸೂಕ್ತ ತನಿಖೆ ನಡೆಸಿ ನಗರಸಭೆ ಭೊಕ್ಕಸ ಹಣ ಸೋರಿಕೆ ಆಗದಂತೆ ತಡೆಹಿಡಿಯಬೇಕೆಂದು ಸಾರ್ವಜನಿಕರ ಆಗ್ರಹ.
ಗುತ್ತಿಗೆದಾರ ಹೇಳುವುದೇನು? ನಗರಸಭೆ ವ್ಯಾಪ್ತಿಯ ಬೀದಿದೀಪಗಳ ಕಾರ್ಯ ನಿರ್ವಹಣೆಗೆ ಗುತ್ತಿಗೆ ಪಡೆಯಲಾಗಿದೆ. ಪೋನಿನಲ್ಲಿ ಮಾಹಿತಿ ನೀಡುವುದಿಲ್ಲ. ಹೆಚ್ಚಿನ ಮಾಹಿತಿ ಬೇಕಿದ್ದರೆ ನಗರಸಭೆ ಅಧಿಕಾರಿಗಳನ್ನು ಸಂಪಕಿರ್ಸಿ ಎಂದು ಗುತ್ತಿಗೆದಾರರು ಪ್ರತಿಕ್ರಿಯೆ ನೀಡಿದ್ದಾರೆ.
ಕೋಟ್:
ಇದೊಂದು ಹಗಲು ಧರೋಡೆ ಎನ್ನದೇ ಬೇರೇನೂ ಇಲ್ಲ. ಎಲ್ಇಡಿ ಬಲ್ಬ್, ಹೈಮಾಸ್ಕ್ ಲೈಟ್ಗಳ ದುರಸ್ತಿ ಆಗದೇ ಬಿಲ್ ಪಾವತಿಸಲು ಆಡಳಿತ ವರ್ಗ ಸಜ್ಜಾಗಿದೆ. ಈ ಬಗ್ಗೆ ಸೂಕ್ತ ತನಿಖೆ ಆಗಬೇಕು. ಜಿಲ್ಲಾಧಿಕಾರಿಗಳು ಈ ಮಧ್ಯೆ ಪ್ರವೇಶಿಸಿ ಗುತ್ತಿಗೆ ಅಕ್ರಮ ಹಾಗೂ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು
- ನಗರಸಭೆ ಓರ್ವ ಸದಸ್ಯ