ಗದಗ ಎಸ್​ಎಸ್​ಕೆ ಸಮಾಜದಿಂದ ನಮ್ಮೂರು ದಸರಾ

06GDG03
ಜಗದಂಬಾ ದೇವಸ್ಥಾನದ ಸಹಸ್ರಾರ್ಜುನ ಸಮುದಾಯ ಭವನದಲ್ಲಿ ಇತ್ತಿಚೆಗೆ "ನಮ್ಮೂರ ದಸರಾ' ಕಾರ್ಯಕ್ರಮ ಜರುಗಿತು. ನಾರಾಯಣಸಾ ಭಾಂಡಗೆ, ಬಲರಾಮ ಬಸವಾ, ಮೋತಿಲಾಲಸಾ ಪೂಜಾರಿ, ಮಾರುತಿ ಪವಾರ ಹಲವರು ಇದ್ದರು.
Published on

ಎಸ್​ಎಸ್​ಕೆ ಬಾಂಧವರು ಸಂಟಿತರಾಗಿ ಸಮಾಜ ಗಟ್ಟಿಗೊಳಿಸಬೇಕು: ರಾಜ್ಯಸಭಾ ಸದಸ್ಯ ನಾರಾಯಣಸಾ ಬಾಂಡಗೆ
ಗದಗ
: ಎಸ್​ಎಸ್​ಕೆ ಸಮಾಜ ಚಿಕ್ಕ ಸಮಾಜವಾದರೂ ಎಲ್ಲರೊಂದಿಗೆ ಉತ್ತಮ ಬಾಂಧವ್ಯದೊಂದಿಗೆ ಬದುಕುತ್ತಿರುವ ಸಮುದಾಯ ಎಂದು ರಾಜ್ಯಸಭಾ ಸದಸ್ಯ ನಾರಾಯಣಸಾ ಬಾಂಡಗೆ ಹೇಳಿದರು.
ನಗರದ ಹಳೇ ಸರಾ್​ ಬಜಾರ ನಲ್ಲಿ ಇರುವ ಜಗದಂಬಾ ದೇವಸ್ಥಾನದ ಸಹಸ್ರಾರ್ಜುನ ಸಮುದಾಯ ಭವನದಲ್ಲಿ ಇತ್ತಿಚೆಗೆ ಜರುಗಿದ "ನಮ್ಮೂರ ದಸರಾ' ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಎಸ್​ಎಸ್​ಕೆ ಸಮಾಜ ಬಾಂಧವರು ಗದಗ ನಗರದಲ್ಲಿ ನಡೆಯುವ ಪ್ರತಿಯೊಂದು ಧಾಮಿರ್ಕ, ಶೈಣಿಕ ಹಾಗೂ ಸಾಮಾಜಿಕ ಚಟುವಟಿಕೆಗಳಲ್ಲಿ ಭಾಗವಹಿಸಿ ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸುತ್ತಾರೆ. ಎಸ್​ಎಸ್​ಕೆ ಸಮಾಜದಲ್ಲಿ ಸುಶಿತರು ಹಾಗೂ ಸಂಸ್ಕಾರವಂತರು ಹೆಚ್ಚಿನ ಪ್ರಮಾಣದಲ್ಲಿ ಇರುವದರಿಂದ ಅವರೆಲ್ಲರೂ ಇತರರಿಗೆ ಪ್ರೋತ್ಸಾಹ ನೀಡಿ ಬೆಳೆಸುತ್ತಿರುವುದು ಹೆಮ್ಮೆಯ ವಿಷಯ. ಮುಂದಿನ ದಿನಗಳಲ್ಲಿ ಸಮಾಜಕ್ಕೆ ಸರ್ಕಾರಕ್ಕೆ ಸವಲತ್ತುಗಳನ್ನು ಕೊಡಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೆನೆ ಎಂದರು.
ಎಸ್​ಎಸ್​ಕೆ ಸಮಾಜದ ಗೌರವ ಕಾರ್ಯದಶಿರ್ ವಿನೋಧ ಶಿದ್ಲಿಂಗ ಮಾತನಾಡಿ, ಎಸ್​ಎಸ್​ಕೆ ಸಮಾಜಕ್ಕೆ ದಸರಾ ಹಬ್ಬವು ವಿಶೇಷವಾಗಿದೆ. ಹಿಂದಿನ ಹಿರಿಯರು ಸಮಾಜಕ್ಕೆ ಭದ್ರ ಬುನಾದಿ ಹಾಕಿ ದಸರಾ ಹಬ್ಬಕ್ಕೆ ಹೊಸ ಮೆರಗು ನೀಡಿದ್ದಾರೆ. ಈಗಾಗಲೇ ನಗರದಲ್ಲಿ ಸಮಾಜದ ವತಿಯಿಂದ ಮೂರು ದೇವಸ್ಥಾನ, ಎರಡು ಕಲ್ಯಾಣ ಮಂಟಪ, ಒಂದು ಶಾಲೆಯನ್ನು ನಿಮಿರ್ಸಿ ಸಮಾಜಕ್ಕೆ ಕೊಡುಗೆ ನೀಡಿದ್ದಾರೆ ಎಂದರು.
ಕೀರಸಾ ಬಾಂಡಗೆ ಅಧ್ಯಕ್ಷತೆ ವಹಿಸಿದ್ದರು. ರಾಜು ಬದಿ, ವಿಷ್ಣುಸಾ ಶಿದ್ಲಿಂಗ, ಎನ್​.ಆರ್​. ಖಟವಟೆ, ವಿಶ್ವನಾಥಸಾ ಖಟವಟೆ, ಸುರೇಶಕುಮಾರ ಬದಿ, ಬಲರಾಮ ಬಸವಾ, ಮೋತಿಲಾಲಸಾ ಪೂಜಾರಿ, ಮಾರುತಿ ಪವಾರ ಹಲವರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net