ಎಸ್​.ಎಸ್​.ಕೆ. ಸಮಾಜದ ಸಭೆ

17GDG03
Published on

ಗದಗ: ಎಸ್​ಎಸ್​ಕೆ ಸಮಾಜದ ಅಭಿವೃದ್ಧಿ ನಿಗಮ ಮಂಡಳ ಸ್ಥಾಪನೆ ಮಾಡುವ ಕುರಿತು ಬಧವಾರ ಬೆಟಗೇರಿ ಎಸ್​.ಎಸ್​.ಕೆ. ಸಮಾಜದ ಕಚೇರಿಯಲ್ಲಿ ಜರುಗಿದ ಸಭೆ ಯಶಸ್ವಿಯಾಯಿತು. ಜಿಲ್ಲೆಯ ಸಮಾಜದ ಪಂಚಟ್ರಷ್ಟ ಪ್ರಮುಖರು, ಯುವಕರು, ಸಂ ಸಂಸ್ಥೆಯ ಸದಸ್ಯರು ಸಭೆಯಲ್ಲಿ ಭಾಗವಹಿಸಿ ಹೋರಾಟದ ರೂಪರೇಶಗಳನ್ನು ಹೇಗೆ ತೆಗೆದುಕೊಳ್ಳಬೇಕು ಮತ್ತು ಸ್ಥಳಿಯ ಸಂ ಸಂಸ್ಥೆಗಳು ಸದರಿ ವಿಷಯವಾಗಿ ಹೇಗೆ ಕಾರ್ಯ ಪ್ರವೃತ್ತರಾಗಬೇಕು ಎಂದು ಸಭೆಯಲ್ಲಿ ಚಚಿರ್ಸಲಾಯಿತು.
ಸಮಾಜದ ಪಂಚ್​ ಟ್ರಸ್ಟ ಅಧ್ಯ ಲೋಕನಾಥಸಾ ಕವಾಡಿ ಮಾತನಾಡಿ, ಸಮಾಜದ ಅಭಿವೃದ್ಧಿಗಾಗಿ ನಾವೆಲ್ಲರೂ ಒಗ್ಗೂಡಿನಿಂದ ಕೆಲಸ ಮಾಡುವುದು ಬಹಳ ಅವಶ್ಯಕತೆ ಇದೆ. ಎಸ್​ಎಸ್​ಕೆ ಸಮಾಜ ಕಾಯಕ ಸಮಾಜ ಆಗಿದ್ದು, ಸರ್ಕಾರದಿಂದ ನಿರೀೆ ಮಾಡಿದಷ್ಟು ಸೌಲಭ್ಯ ಸಿಗುತ್ತಿಲ್ಲ. ಸೌಲಭ್ಯಗಳನ್ನು ಪಡೆಯಲು ಮತ್ತು ನಿಗಮ ಮಂಡಳಿ ಸ್ಥಾಪಿಸಲು ರಾಜ್ಯಮಟ್ಟದ ಹೋರಾಟ ನಡೆಸುವುದು ಅಗತ್ಯವಿದೆ ಎಂದರು.
ಚಿಂತನ ಮಂತನ ಸಮಿತಿ ಅಧ್ಯ ಹನುಮಂತಸಾ ನಿರಂಜನ ಮಾತನಾಡಿದರು. ಆರ್​.ಟಿ ಕಬಾಡಿ, ಎಸ್​. ಬಿ. ರಾಯಬಾಗಿ, ಸುರೇಶ್​ ಮೆರ್ವಾಡೆ, ರಾಜು ಬಸವಾ, ನರಸಿಂಗ್​ ಮೆರ್ವಾಡೆ, ಸಂಜೀವ ಖಟವಟೆ, ಶಂಕರಸಾ ಕಲಬುಗಿರ್ ಹಲವರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net