ಕ್ರೀಡೆಗಳು ಪರಸ್ಪರ ಸ್ನೇಹ, ಪ್ರೀತಿ, ನಂಬಿಕೆ ಬೆಳೆಸುತ್ತವೆ: ವಸಂತ ಸಿದ್ದಮ್ಮನಹಳ್ಳಿ

IMG-20240828-WA0020
Published on

ಗದಗ: ಕ್ರೀಡೆಗಳು ದೈಹಿಕ ಮಾನಸಿಕ, ಬೆಳವಣಿಗೆಗೆ ಸಹಕಾರಿಯಾಗುವ ಜೊತೆಗೆ ಮನುಷ್ಯರ ನಡುವೆ ಪರಸ್ಪರ ನಂಬಿಕೆ ಪ್ರೀತಿ, ಸ್ನೇಹ ಬೆಳೆಸುತ್ತಿವೆ ಎಂದು ವಾಲ್ಮೀಕಿ ಸಮಾಜದ ಯುವ ನಾಯಕರು ಹಾಗೂ ಕಾಂಗ್ರೇಸ್ ಪಕ್ಷದ ಯುವ ಮುಖಂಡರಾದ ವಸಂತ ಸಿದ್ದಮ್ಮನಹಳ್ಳಿ ಹೇಳಿದರು.

ನಗರದ ಕ್ರಿಕೇಟ್ ಮೈಧಾನದಲ್ಲಿ ಕೃಷ್ಣಾ ಎಚ್ ಹಡಪದ ನೆತ್ರೂತ್ವದ ಗದಗ ಜಿಲ್ಲಾ ಸವಿತಾ ಸಮಾಜದ ನಿಯೋಗದಿಂದ ಶ್ರೀ ಸಂತಸೇನಾ ನಾವಿ (ಮಹಾರಾಜ) ಗುರುಗಳ ಪೂಣ್ಯಸ್ಮರಣೋತ್ಸವ ನಿಮಿತ್ಯವಾಗಿ ಹಮ್ಮಿಕೊಂಡ ಕ್ಷೌರಿಕ ಬಂಧುಗಳ ಟಾಫ್ 6 ಕ್ರಿಕೇಟ್ ಟೂರ್ನಾಮಿಂಟಲ್ಲಿ ಪಾರಿತೋಷಕ ವಿತರಣೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು. ಅತಿಥಿಗಳಾಗಿದ್ದ ಕಾಂಗ್ರೇಸ್ ಪಕ್ಷದ ಮುಖಂಡರಾದ ಅಬ್ದುಲಮುನಾಫ ಮುಲ್ಲಾ ಅವರು ಮಾತನಾಡಿ ಕ್ರಿಕೆಟ್‌ನಲ್ಲಿ ಉತ್ತಮ ಅವಕಾಶಗಳಿದ್ದು ಯುವಕರು ಅವುಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದು ಹೇಳಿದರು.

ಹಡಪದ ಸಮಾಜದ ಮುಖಂಡರಾದ ನೀಲಕಂಟ ಹಡಪದ ಅವರು ಮಾತನಾಡಿ ಹವ್ಯಾಸಕ್ಕಾಗಿಯಾದರೂ ಪ್ರತಿಯೊಬ್ಬರೂ ಕ್ರಿಕೆಟ್ ಸೇರಿದಂತೆ ಇತರ ಆಟಗಳನ್ನು ಆಡುವದರಿಂದ ರೋಗ ಮುಕ್ತ ಜೀವನ ನಡೆಸಬಹುದು ಎಂದರು. ಮರಾಠ ಕ್ಷೌರಿಕ ಸಮಾಜದ ಮುಖಂಡರಾದ ಪಾಂಡು ಕಾಳೆ ಅವರು ಮಾತನಾಡಿ ಯುವಕರು ಕ್ರಿಕೆಟ್ ಜೊತೆಗೆ ದೇಶಿಯ ಫುಟ್‌ ಬಾಲ್, ಕಬಡ್ಡಿ, ಹಾಕಿ ಸೇರಿದಂತೆ ಇತರೇ ಆಟಗಳಿಗೂ ಮಹತ್ವ ನೀಡಬೇಕೆಂದರು.

ಸವಿತಾ ಸಮಾಜದ ಹಿರಿಯ ಮುಖಂಡರಾದ ಪರಶುರಾಮ (ಬಜ್ಜು) ರಾಂಪೂರ, ಅವರು ಮಾತನಾಡಿ ಕೃಷ್ಣಾ ಎಚ್ ಹಡಪದ ಅವರ ಮುಂದಾಳತ್ವದಲ್ಲಿ ಸಮಾಜದ ಕ್ರೀಡಾಪಟುಗಳಿಗಾಗಿ ಟಾಫ್ 6 ಕ್ರಿಕೆಟ್ ಟೊರ್ನಾಮೆಂಟ ನಂತಹ ಕಾರ್ಯಕ್ರಮ ಹಮ್ಮಿಕೊಂಡಿರುವದರಿಂದ ಸವಿತಾ ಸಮಾಜದ ಗಟ್ಟಿ ಸಂಘಟನೆಗೆ ಸಹಕಾರಿ ಎಂದರು.

ಗದಗ ಜಿಲ್ಲಾ ಸವಿತಾ ಸಮಾಜದ ಜಿಲ್ಲಾಧ್ಶಕ್ಷರಾದ ಕೃಷ್ಣಾ ಎಚ್ ಹಡಪದ ಅವರು ಮಾತನಾಡಿ ಟೊರ್ನಿಯಲ್ಲಿ ಭಾಗವಹಿಸಿದ ಸಮಾಜದ 6 ತಂಡಗಳಿಗೆ ಮತ್ತು ವಿನ್ನರ್ ತಂಡಕ್ಕೆ ಶುಭಾಶಯ ಕೋರಿ, ಮಾತನಾಡಿ ಸವಿತಾ ಸಮಾಜ. ಹಡಪದ ಸಮಾಜ. ಮತ್ತು ಮರಾಠ ಕ್ಷೌರಿಕ ಸಮಾಜದ ಒಟ್ಟು ಮೂರು ಸಮುಧಾಯದ ಕ್ರಿಡಾಪಟುಗಳು ಸವಿತಾ ಸಮಾಜದ ಬಂಧುವಾದ ಅಂತರ್ ರಾಷ್ಟ್ರೀಯ ಕ್ರೀಡಾಪಟು ಅಭಿಮನ್ಯು ಮಿಥುನ್‌ರಂತೆ ತಾವುಗಳು ಕೂಡಾ ರಾಜ್ಯದ ಜೊತೆಗೆ ಅಂತರರಾಷ್ಟ್ರೀಯ ಮಟ್ಟದಲ್ಲಿಯೂ ಮಿಂಚಬೇಕೆಂದು ಆಶಿಸಿದರು.

ಈ ಸಂದರ್ಭದಲ್ಲಿ ರಾಜ್ಶ ನಾಯಕರಾದ ಹನಮಂತಪ್ಪ ರಾಂಪೂರ, ಗದಗ ಸವಿತಾ ಸಮಾಜ ಸುಧಾರಣಾ ಸಂಘದ ಅಧ್ಶಕ್ಷರಾದ ಪರಶುರಾಮ ಕೊಟೇಕಲ್ಲ ಶ್ರೀ ಸಂತಸೇನಾ ಮಹಾರಾಜ ನಾಭೀಕ ಮರಾಠ ಸಮಾಜದ ನಗರ ಅಧ್ಶಕ್ಷರಾದ ವಿಕಾಸ ಕ್ಷೀರಸಾಗರ ಸವಿತಾ ಸಮಾಜ ಕ್ರಿಕೇಟ್ ತಂಡದ ಮ್ಯಾನೇಜರಾದ ಶ್ರೀನಿವಾಸ ಕೊಟೇಕಲ್ಲ ಹಿರಿಯರಾದ ದೆವೇಂದ್ರಪ್ಪ ರಾಂಪೂರ ಆಂಜನೈಯ್ಯ ಆದೋನಿ ಹೇಮಂತ ವಡ್ಡಪಲ್ಲಿ, ಬಸುರಾಜ (ರಜನಿ) ಹಡಪದ ದೀಪಕ ಮಾನೆ ರಮೇಶ ರಾಂಪೂರ ದತ್ತು ಮಾನೆ ವಸಂತ ಮಾನೆ ಬಸುರಾಜ ಗೌಡರ ನರಸೀಂಹ ಗುರುಜಾಲಕರ್ ಜಿಲ್ಲಾ ಪ್ರ.ಕಾರ್ಯದರ್ಶಿ ಮಂಜುನಾಥ ಮಾನೆ ಖಜಾಂಚಿ ಅರೂಣ ರಾಂಪೂರ ಯುವ ನಾಯಕರಾದ ಸುನೀಲ ರಾಯಚೂರ ವೆಂಕಟೇಶ ಕೊಟೇಕಲ್ಲ ಸುಧೀರ ಮಾನೆ ಕೃಷ್ಣಾ ಬುದೂರ ರಾಘವೇಂದ್ರ ಬಾಯಲಗುಡ್ಡ ವಿಶ್ವನಾಥ ರಾಯಚೂರ ವಿಜಯ ಬುದೂರ ಗಣೇಶ ಕಡಮೂರ ಪ್ರಕಾಶ ಬುದೂರ ಸಾಗರ ಹಡಪದ ಹಾಗೂ ಸಮಾಜದ ಬಾಂದವರು  ಕ್ರೀಡಾ ಪಟುಗಳು ಹಾಗೂ ನೂರಾರು ಕ್ರೀಡಾಭೀಮಾನಿಗಳು ಉಪಸ್ತಿತರಿದ್ದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net