

ಗದಗ: ರೋಣ ತಾಲೂಕಿನ ಬೆಳವಣಿಕಿ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಗುಜಮಾಗಡಿಯ ಸರಕಾರಿ ಪ್ರಾಥಮಿಕ ಶಾಲೆಯು ಕಬ್ಬಡ್ಡಿಯಲ್ಲಿ ಜಯ ಗಳಿಸಿ ರೋಣ ತಾಲೂಕ ಮಟ್ಟಕ್ಕೆ ಆಯ್ಕೆಯಾಗಿದೆ.
ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಿಂದ ಮಕ್ಕಳಲ್ಲಿ ಕಲಿಕೆಯೊಂದಿಗೆ ಸ್ಪರ್ಧಾತ್ಮಕ ಮನೋಭಾವ ಬೆಳೆದು ಬರುತ್ತದೆ ಎಂದು ಗುಜಮಾಗಡಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷ ಮೈಲಾರಪ್ಪ ಕಳಸಾಪೂರ ಹೇಳಿದರು.
ಅವರು ಶಾಲಾ ತಂಡವು ಪಂದ್ಯಾವಳಿಗಳಲ್ಲಿ ಭಾಗವಹಿಸಿ ಕಬಡ್ಡಿಯಲ್ಲಿ ಆಯ್ಕೆಯಾಗಿ ತಾಲೂಕ ಮಟ್ಟದಲ್ಲಿ ಸ್ಪರ್ಧಿಸುತ್ತಿದ್ದು ಸಂತಸ ವ್ಯಕ್ತಪಡಿಸಿ ವಿದ್ಯಾರ್ಥಿಗಳಿಗೆ ಅಭಿನಂದಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ರುದ್ರಪ್ಪ ಹುರಳಿ ಮಾತನಾಡಿ ಮಕ್ಕಳು ಪಂದ್ಯಾವಳಿಯಲ್ಲಿ ಆಸಕ್ತಿದಾಯಕವಾಗಿ ಭಾಗಹಿಸಿ ಯಶಸ್ಸು ಪಡೆದ ವಿದ್ಯಾರ್ಥಿಗಳನ್ನು ಹಾಗೂ ತರಬೇತಿಗೊಳಿಸಿದವರನ್ನು ಅಭಿನಂದಿಸಿದರು.
ಗುಜಮಾಗಡಿ ಗ್ರಾ.ಪಂ ಅಧ್ಯಕ್ಷ ಗಂಗಾಧರ ಕಮ್ಮಾರ ಹಾಗೂ ಸದಸ್ಯರು, ಎಸ್‌ಡಿಎಂಸಿಯ ಸದಸ್ಯರು, ಗ್ರಾಮದ ಹಿರಿಯರು ಕ್ರೀಡಾಪಟುಗಳನ್ನು ಅಭಿನಂದಿಸಿದರು.
ಶಾಲಾ ಮುಖ್ಯೋಪಾಧ್ಯಾಯನಿ ಎಸ್.ವ್ಹಿ.ಹಿರೇಮಠ ಹಾಗೂ ಜಗದೀಶ ಯಾಳಗಿ, ಬಿ.ಜಿ.ಕೆರಿ, ಅಕ್ಕಮಹಾದೇವಿ ಕುದರಿಮೋತಿ, ಜ್ಯೋತಿ ಪತ್ತಾರ ಮುಂತಾದವರಿದ್ದರು.