

ಗದಗ :
ತುಮಕೂರಿನಲ್ಲಿ ಇತ್ತೀಚೆಗೆ ನಡೆದ ಕರ್ನಾಟಕ ರಾಜ್ಯ ಸಕಾರಿ ನೌಕರರ ರಾಜ್ಯಮಟ್ಟದ ಕ್ರೀಡಾಕೂಟ ಮತ್ತು ಸಾಂಸತಿಕ ಸ್ಪರ್ಧೆಯಲ್ಲಿ ಭಾಗವಹಸಿ ಅತ್ಯುತ್ತಮ ಪ್ರದರ್ಶನ ಮೆರೆಯುವ ಮೂಲಕ ಗದಗ ಜಿಲ್ಲೆಯ 6 ಸರ್ಕಾರಿ ನೌಕರ ಕ್ರೀಡಾಪಟುಗಳು ರಾಷ್ಟ್ರಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿ ಗದಗ ಜಿಲ್ಲೆಗೆ ಹೆಮ್ಮೆ ತಂದಿದ್ದಾರೆ ಎಂದು ರಾಜ್ಯ ಸರ್ಕಾರಿ ನೌಕರ ಸಂದ ರಾಜ್ಯ ಉಪಾಧ್ಯ ರವಿ ಗುಂಜೀಕರ ತಿಳಿಸಿದ್ದಾರೆ.
ಈ ಕುರಿತು ಒರಕಟಣೆ ತಿಳಿಸಿರುವ ಅವರು, ಚೆಸ್ನಲ್ಲಿ ಅಶೋಕ ಕಂಬಿ (ಪ್ರಥಮ), ಬಲ್ಲೆ ಎಸೆತದಲ್ಲಿ ಸಾವಿತ್ರಿ ಮಾದಪ್ಪನವರ (ಪ್ರಥಮ), ಉದ್ದ ಜಿಗಿತದಲ್ಲಿ ಎಸ್.ಬಿ.ಹೊರಪೇಟೆ (ಪ್ರಥಮ), ಕುಸ್ತಿಯಲ್ಲಿ ಅಶೋಕ ಹಾದಿ ಮತ್ತು ಪಿ. ಟಿ. ಜಾದವ (ದ್ವೀತಿಯ), ಹಾಗೂ ಈಜು ಸ್ಪರ್ಧೆಯಲ್ಲಿ ಯಾಸೀನ ಲೋಹಾನಿ ತೃತೀಯ ಸ್ಥಾನ ಗಳಿಸಿ ರಾಷ್ಟ್ರಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆ ಆಗಿದ್ದಾರೆ ಎಂದು ತಿಳಿಸಿದ್ದಾರೆ.