ಪೊಲೀಸ್​ ಕಾರ್ಯಾಚರಣೆ ! ಚಿನ್ನಾಭರಣ ಸೇರಿ 2.43 ಕೋಟಿ ವಸ್ತು ವಶ

14GDG10B
Published on

ವಿಜಯವಾಣಿ ಸುದ್ದಿಜಾಲ ಗದಗ
ಕಳೆದ ಜನವರಿಯಿಂದ ಈವರೆಗೆ ಜಿಲ್ಲೆಯ ವಿವಿಧ ಪೊಲೀಸ್​ ಠಾಣೆಗಳಲ್ಲಿನ ಕಳ್ಳತನ ಪ್ರಕರಣ ಭೇದಿಸಿ, ಚಿನ್ನಾಭರಣ ಸೇರಿ 2.43 ಕೋಟಿ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಬಿ.ಎಸ್​. ನೇಮಗೌಡ ಹೇಳಿದರು
ಜಿಲ್ಲಾ ಪೊಲೀಸ್​ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, 30 ವಾಹನ ಕಳ್ಳತನ ಪ್ರಕರಣ, 48 ಮನೆ ಕಳ್ಳತನ ಪ್ರಕರಣ, 7 ಇತರೆ ಕಳ್ಳತನ ಪ್ರಕರಣ, 6 ಮೋಸ ವಂಚನೆ ಪ್ರಕರಣ ಹಾಗೂ ಮೊಬೈಲ್​ ಕಳ್ಳತನ ಪ್ರಕರಣ ಸೇರಿ ಒಟ್ಟಾರೆ 91 ಪ್ರಕರಣಗಳನ್ನು ಭೇದಿಸಿದ್ದಾರೆ. ಪೊಲೀಸ್​ ಸಿಬ್ಬಂದಿ ಭರ್ಜರಿ ಕಾರ್ಯಾಚರಣೆ ನಡೆಸಿ, ಚಿನ್ನಾಭರಣ, ಬೈಕ್​ ಸೇರಿ ಒಟ್ಟು 2.43 ಕೋಟಿ ರೂ. ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದು ಸಂಬಂಧಪಟ್ಟ ಮಾಲೀಕರಿಗೆ ಹಸ್ತಾಂತರ ಮಾಡಲಾಗಿದೆ ಎಂದು ತಿಳಿಸಿದರು.
90 ಲಕ್ಷ ರೂ. ಮೌಲ್ಯದ 2.16 ಕೆಜಿ ಚಿನ್ನ, 5.50 ಲಕ್ಷ ರೂ. ಮೌಲ್ಯದ 8 ಕೆಜಿ ಬೆಳ್ಳಿ, 87 ಸಾವಿರ ರೂ. ನಗದು ವಶಕ್ಕೆ ಪಡೆಯಲಾಗಿದೆ ಎಂದು ಮಾಹಿತಿ ನೀಡಿದರು. 7.60 ಲಕ್ಷ ರೂ. ಮೌಲ್ಯದ 21 ದ್ವಿಚಕ್ರ ವಾಹನ, 16 ಲಕ್ಷ ರೂ. ಮೌಲ್ಯದ 3 ಟ್ರ್ಯಾಕ್ಟರ್​, 7.35 ಲಕ್ಷ ರೂ. ಮೌಲ್ಯದ 5 ಟ್ರ್ಯಾಕ್ಟರ್​ ಟೆಲರ್​, 4.50 ಲಕ್ಷ ರೂ. ಮೌಲ್ಯದ ಬೊಲೆರೊ ಗೂಡ್ಸ್​ ವಾಹನ ಪತ್ತೆ ಮಾಡಲಾಗಿದೆ. 91 ಪ್ರಕರಣಗಳ ಪೈಕಿ 112 ಜನ ಆರೋಪಿಗಳನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ತಿಳಿಸಿದರು.


ಜಿಲ್ಲೆಯ ಎಲ್ಲ ಪೊಲೀಸ್​ ಠಾಣೆೆಯ ಸಿಪಿಐ, ಪಿಎಸ್​ಐ , ಅಪರಾಧ ದಳದ ಸಿಬ್ಬಂದಿ ಹಾಗೂ ಇನ್ನಿತರ ಎಲ್ಲ ಸಿಬ್ಬಂದಿಗಳ ಪ್ರಯತ್ನದಿಂದ ಅಲ್ಪ ಅವಧಿಯಲ್ಲಿ ಅನೇಕ ಪ್ರಕರಣ ಬೇಧಿಸಲು ಸಾಧ್ಯವಾಗಿದೆ. ಜಿಲ್ಲಾ ಪೊಲೀಸ ಸಿಬ್ಬಂದಿಗಳಿಗೆ ಸೂಕ್ತ ಬಹುಮಾನ ಘೋಷಣೆ ಮಾಡಲಾಗುವುದು ಎಂದು ಎಸ್ಪಿ ತಿಳಿಸಿದರು.
ಹೆಚ್ಚುವರಿ ಪೊಲೀಸ್​ ವರಿಷ್ಠಾಧಿಕಾರಿ ಎಂ. ಬಿ. ಸಂಕದ, ಡಿಎಸ್​ಪಿ ಜೆ. ಎಚ್​. ಇನಾಮದಾರ ಸೇರಿದಂತೆ ಪೊಲೀಸ್​ ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net