

ವಿಜಯವಾಣಿ ಸುದ್ದಿಜಾಲ ಗದಗ
ಸೈಬರ್ ವಂಚಕರು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಬಿ. ಎಸ್. ನೇಮಗೌಡ ಐಪಿಎಸ್ ಹೆಸರಲ್ಲಿ ನಕಲಿ ಫೇಸ್ಬುಕ್ ಖಾತೆ ತೆರೆದು ವ್ಯಕ್ತಿಯೊಬ್ಬರಿಗೆ 25 ಸಾವಿರ ರೂ. ವಂಚನೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಈ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಲೂಕಿನ ಬಿಂಕದಕಟ್ಟಿ ಗ್ರಾಮದ ಮಹದೇವಗೌಡ ವಾಸುಗೌಡ ಕೊಳ್ಳಿ ಎಂಬವರೇ ವಂಚನೆಗೊಳಗಾದ ವ್ಯಕ್ತಿ. ಠಾಣೆಯಲ್ಲಿ ಮಹದೇವಗೌಡ ಅವರು ದೂರು ದಾಖಲಿಸಿದ್ದಾರೆ.
ಬಿ. ಎಸ್. ನೇಮಗೌಡ ಐಪಿಎಸ್ ಎಂಬ ನಕಲಿ ಫೇಸ್ಬುಕ್ ಐಡಿ ತೆರೆದು ವಂಚಕರು ಎಸ್ಪಿ ಫೋಟೋ ಪ್ರೊೈಲ್ ಆಗಿ ಬಳಸಿಕೊಂಡು ಹಲವರಿಗೆ ್ರೆಂಡ್ ರಿಕ್ವೆಸ್ಟ್ ಕಳಿಸಿದ್ದಾರೆ. ಅದೇ ರೀತಿ ಮಹದೇವಗೌಡ ವಾಸುಗೌಡ ಕೊಳ್ಳಿಯವರಿಗೆ ಫ್ರೆಂಡ್ ರಿಕ್ವೆಸ್ಟ್ ಕಳಿಸಿದ್ದು, ಮಹದೇವಗೌಡ ರಿಕ್ವೆಸ್ಟ್ ಸ್ವೀಕರಿಸಿದ್ದಾರೆ. ಫ್ರೆಂಡ್ ರಿಕ್ವೆಸ್ಟ್ ಸ್ವೀಕರಿಸುತ್ತಿದ್ದಂತೆ ಮೆಸೆಂಜರ್ ಮೂಲಕ ಮಹದೇವಗೌಡ ಅವರಿಗೆ ಮೆಸೇಜ್ ಬಂದಿದೆ. ಸಿಆರ್ಪಿಎ್ ಆಫೀಸರ್ ಸಂತೋಷಕುಮಾರ ಅವರಿಗೆ ವರ್ಗಾವಣೆ ಆಗಿದೆ. ಅವರ ಮನೆಯ ಸಾಮಗ್ರಿಗಳು ಕಡಿಮೆ ಬೆಲೆಗೆ ಮಾರಾಟಕ್ಕಿವೆ ಎಂದು ಮೆಸೇಜ್ ಮಾಡಿದ್ದಾರೆ. ಅದೇ ರೀತಿ ಮೊಬೈಲ್ ನಂಬರ್ 8099285143ಗೆ ವಾಟ್ಸಾಪ್ ಡಿಪಿಯಾಗಿ ಎಸ್ಪಿ ಬಿ. ಎಸ್. ನೇಮಗೌಡ ೋಟೋ ಬಳಸಿ ವಾಟ್ಸಾಪ್ ಮೆಸೇಜ್ ಕೂಡ ಮಾಡಿದ್ದಾರೆ. ಎಸ್ಪಿ ಅವರೇ ಮೆಸೇಜ್ ಮಾಡಿದ್ದಾರೆ ಎಂದು ನಂಬಿದ್ದ ಮಹದೇವಗೌಡ ಉತ್ಸಾಹದಲ್ಲಿ ವಂಚಕರು ಕೇಳಿದ ಅಡ್ವಾನ್ಸ್ 25 ಸಾವಿರ ರೂ. ಹಣ ಪಾವತಿಸಿದ್ದಾರೆ. ವಮಚಕರು ಮೋಸ ಮಾಡಿದ ಕುರಿತು ದೂರಿನಲ್ಲಿ ಉಲ್ಲೇಖಿಸಿ ಮಹದೇವಗೌಡ ದೂರು ದಾಖಲಿಸಿದ್ದಾರೆ. ಪೊಲೀಸ್ ಇಲಾಖೆ ತನಿಕೆ ಕೈಗೊಂಡಿದೆ. ಈ ಕುರಿತು ತನಿಖೆ ಮುಂದುವರಿದಿದೆ.
ಸಾರ್ವಜನಿಕರು ಮೋಸ, ವಂಚನೆಗೆ ಒಳಗಾಗದಿರಿ: ಎಸ್.ಪಿ ನೇಮಗೌಡ ವಿನಂತಿ:
ಪ್ರಕರಣ ಬೆಳಿಗೆ ಬರುತ್ತಿದ್ದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ. ಎಸ್. ನೇಮಗೌಡ ಸೈಬರ್ ವಂಚಕರ ಕುರಿತು ಎಚ್ಚರ ವಹಿಸಿಲು ಸಾರ್ವಜನಿಕರಿಗೆ ಕರೆ ನೀಡಿದ್ದಾರೆ. ಗದಗ ಎಸ್ಪಿ ಹೆಸರಿನಲ್ಲಿ ಫೇಕ್ ಫೇಸ್ಬುಕ್ ಐಡಿ ಕ್ರಿಯೆಟ್ ಮಾಡಿ ಮತ್ತು ಮೆಸೆಂಜ್ರ ಹಾಗೂ ವಾಟ್ಸಾಪ್ ಖಾತೆ ತೆರೆದು ಅವುಗಳಲ್ಲಿ ಗದಗ ಜಿಲ್ಲೆಯ ಎಸ್ಪಿ ರವರ ೋಟೋ ಅನ್ನು ಡಿಪಿ ಹಾಗೂ ಪ್ರೋೈಲ್ ಪೋಟೋ ಆಗಿ ಬಳಸಿ, ಆ ಮೂಲಕ ಬೇರೆ ಬೇರೆ ಕಾರಣಗಳ ಹೇಳಿ ಸಾರ್ವಜನಿಕರಿಂದ ಹಣ ವಸೂಲಿ ಮಾಡುತ್ತಿರುವ ಪ್ರಕರಣ ಬೆಳಕಿಗೆ ಬರುತ್ತಿವೆ. ಈ ರೀತಿಯ ವಂಚನೆ ಮಾಡುವ ಪ್ರಯತ್ನದಲ್ಲಿ ಇರುವ ಕುರಿತು ಹಾಗೂ ಇಂತದ್ದೇ ಪ್ರಕರಣದಿಂದ ಬಾಧಿತ ಆಗಿರುವ ಕುರಿತು ದೂರು ಸಲ್ಲಿಸಲು ತಿಳಿಸಿದ್ದಾರೆ. ಸಾರ್ವಜನಿಕರು ಮೋಸ, ವಂಚನೆಗೆ ಒಳಗಾಗಬಾರದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ. ಎಸ್. ನೇಮಗೌಡ ಸಾರ್ವಜನಿಕರಲ್ಲಿ ವಿನಂತಿಸಿದ್ದಾರೆ.