ಯುವಜನರ ಪ್ರಗತಿಯೇ ದೇಶದ ಉನ್ನತಿ: ಪೊಲೀಸ್​ ವರಿಷ್ಠಾಧಿಕಾರಿ ಬಿ. ಎಸ್​. ನೇಮಗೌಡ

18GDG04
ಗದಗ ತೋಂಟದಾರ್ಯ ಕಲ್ಯಾಣ ಕೇಂದ್ರದಲ್ಲಿ ಏರ್ಪಡಿಸಿದ್ದ ತೋಂಟದ ಸಿದ್ಧೇಶ್ವರ ಪಿಯು ಕಾಲೇಜು ವಾಷಿರ್ಕೋತ್ಸವ ಹಾಗೂ ಬೀಳ್ಕೊಡುಗೆ ಸಮಾರಂಭವನ್ನು ಬಿ.ಎಸ್​. ನೇಮಗೌಡ ಉದ್ಘಾಟಿಸಿದರು. ಶಾಂತಲಿಂಗ ಶ್ರೀಗಳು, ಎಸ್​.ಎಸ್​. ಪಟ್ಟಣಶೆಟ್ಟರ, ಕೊಟ್ರೇಶ ಮೆಣಸಿನಕಾಯಿ ಇತರರು ಇದ್ದರು.
Published on

ವಿಜಯವಾಣಿ ಸುದ್ದಿಜಾಲ ಗದಗ

ಭಾರತ ಅತೀ ಹೆಚ್ಚು ಯುವಜನರನ್ನು ಹೊಂದಿದ ದೇಶವಾಗಿದೆ. ದೇಶದ ಅಭಿವೃದ್ಧಿಯ ದೃಷ್ಠಿಯಿಂದ ಯುವ ಸಂಪನ್ಮೂಲ ಲಾಭದಾಯಕ. ಆದರೆ ಇತ್ತೀಚಿನ ದಿನಗಳಲ್ಲಿ ಯುವಜನಾಂಗ ಅನೇಕ ದುಶ್ಚಟಗಳತ್ತ ವಾಲುತ್ತಿದೆ. ಇದು ದೇಶಕ್ಕೆ ಮಾರಕವಾಗಿದ್ದು, ಯುವಜನರ ಪ್ರಗತಿಯೇ ದೇಶದ ಉನ್ನತಿ ಎಂದು ಪೊಲೀಸ್​ ವರಿಷ್ಠಾಧಿಕಾರಿ ಬಿ. ಎಸ್​. ನೇಮಗೌಡ ಹೇಳಿದರು.

ನಗರದ ತೋಂಟದಾರ್ಯ ಕಲ್ಯಾಣಕೇಂದ್ರದಲ್ಲಿ ಶುಕ್ರವಾರ ಏರ್ಪಡಿಸಿದ್ದ ತೋಂಟದ ಸಿದ್ಧೇಶ್ವರ ವಿಜ್ಞಾನ, ವಾಣಿಜ್ಯ ಹಾಗೂ ಕಲಾ ಪಿಯು ಕಾಲೇಜು ವಾಷಿರ್ಕೋತ್ಸವ ಹಾಗೂ ದ್ವೀತಿಯ ಪಿಯುಸಿ ವಿದ್ಯಾಥಿರ್ಗಳ ಬೀಳ್ಕೋಡುಗೆ ಸಮಾರಂಭ ಉದ್ಘಾಟಿಸಿ ಮಾತನಾಡಿ, ತೋಂಟದಾರ್ಯ ಮಠದ ಶೈಣಿಕ ಸಂಸ್ಥೆಗಳು ಗುಣಮಟ್ಟದ ಶಿಣಕ್ಕೆ ಹೆಸರುವಾಸಿಯಾಗಿವೆ. ವಿದ್ಯಾಥಿರ್ಗಳು ಸರ್ವಾಂಗೀಣ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಲು ಆದ್ಯತೆ ನೀಡಬೇಕಿದೆ. ಬಡವ, ಶ್ರೀಮಂತ, ಕನ್ನಡ, ಆಂಗ್ಲ ಮಾಧ್ಯಮ ಹೀಗೆ ಯಾವುದೇ ಬಗೆಯ ಕೀಳರಿಮೆಗಳಿಗೆ ಆಸ್ಪದ ನೀಡದೇ ನಮ್ಮಲ್ಲಿ ಅಡಗಿರುವ ಸಾಮರ್ಥ್ಯವನ್ನು ಹೊರಹಾಕುವತ್ತ ಚಿಂತನೆ ನಡೆಸಬೇಕು. ಶೈಣಿಕ, ಸಾಹಿತ್ಯಿಕ, ಸಾಮಾಜಿಕವಾಗಿ ನಾಡಿಗೆ ಗದಗ ಜಿಲ್ಲೆಯ ಕೊಡುಗೆ ಅಪಾರವಾಗಿದೆ. ಕುಮಾರವ್ಯಾಸ, ಹುಯಿಲಗೋಳ ನಾರಾಯಣರಾವ್​, ಭೀಮಸೇನ ಜೋಶಿ, ಪುಟ್ಟರಾಜ ಗವಾಯಿಗಳು, ತೋಂಟದ ಸಿದ್ಧಲಿಂಗ ಶ್ರಿಗಳು ಹೀಗೆ ಅನೇಕ ಮಹಾತ್ಮರು ಗದುಗಿನ ಕೀತಿರ್ಪತಾಕೆ ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಪಸರಿಸಿದ್ದಾರೆ. ಕೃಷಿ, ಕೈಗಾರಿಕೆ ಹೀಗೆ ಯಾವುದೇ ೇತ್ರ ಇದ್ದರೂ ಕಾಯಕಕ್ಕೆ ಹಿಂಜರಿಯಬಾರದು ಎಂದು ಬಿ.ಎಸ್​. ನೇಮಗೌಡ ಹೇಳಿದರು.

ತೋಂಟದಾರ್ಯ ವಿದ್ಯಾಪಿಠದ ಕಾರ್ಯದಶಿರ್ ಪ್ರೊ. ಎಸ್​. ಎಸ್​. ಪಟ್ಟಣಶೆಟ್ಟರ ಮಾತನಾಡಿ, ತೋಂಟದ ಸಿದ್ಧೇಶ್ವರ ಪಿಯು ಕಾಲೇಜು ಸ್ಥಾಪನೆಯಾದ ಅಲ್ಪಾವಧಿಯಲ್ಲೇ ಅತ್ಯುತ್ತಮ ಲಿತಾಂಶ ನೀಡಿ ಈ ಪರಿಸರದಲ್ಲಿ ತನ್ನದೇ ಹೆಸರು ಸ್ಥಾಪಿಸಿದೆ. ವಿದ್ಯಾಥಿರ್ಗಳು ಗುರಿಯನ್ನು ಹೊಂದಿ ಅದನ್ನು ತಲುಪಲು ಪರಿರ್ಪೂಣವಾಗಿ ತೊಡಗಿಸಿಕೊಳ್ಳಬೇಕು ಎಂದರು. ಪಿಯುಸಿಯಲ್ಲಿ ಶೇ. 95ಕ್ಕಿಂತ ಹೆಚ್ಚು ಅಂಕಗಳಿಸಿದರೆ ಇಂಜೀನಿಯರಿಂಗ್​ ಹಾಗೂ ಪದವಿ ಕೋರ್ಸುಗಳಿಗೆ ಉಚಿತ ಪ್ರವೇಶ ನೀಡುವುದಾಗಿ ತಿಳಿಸಿದ ಅವರು ಎಲ್ಲಾ ಸಂಪತ್ತಿಗಿಂತ ವಿದ್ಯಾಸಂಪತ್ತು ಶ್ರೇಷ್ಠ ಹಾಗಾಗಿ ವಿದ್ಯೆಯ ಸಂಪಾದನೆಯಲ್ಲಿ ಮಕ್ಕಳು ನಿರತರಾಗಬೇಕು ಎಂದರು.

ಡಾ. ಎಸ್​. ಬಿ. ಶೆಟ್ಟರ ಮಾತನಾಡಿ, ಪಿಯುಸಿ ಹಂತವು ವಿದ್ಯಾಥಿರ್ಗಳ ಭವಿಷ್ಯದಲ್ಲಿ ಪ್ರಮುಖ ಟ್ಟವಾಗಿದೆ. ಶ್ರದ್ಧೆ, ಪ್ರಾಮಾಣಿಕತೆಯಿಂದ ಕಲಿತರೆ ಗುರಿ ಮುಟ್ಟುವುದು ಸುಲಭವಾಗುತ್ತದೆ. ದೇಶವು ರಚನಾತ್ಮಕವಾಗಿ ಬೆಳೆಯಬೇಕಾದರೆ ವಿದ್ಯಾಥಿರ್ಗಳ ಕೊಡುಗೆ ಮಹತ್ವದ್ದಾಗಿದೆ. ಹಿಂದೆ ಗುರು ಹಾಗೂ ಮುಂದೆ ಗುರಿ ಇದ್ದರೆ ಜೀವನದಲ್ಲಿ ಎಷ್ಟೇ ಉನ್ನತ ಸ್ಥಾನವನ್ನೂ ತಲುಪಲು ಸಾಧ್ಯ ಎಂದರು.

ಶಿರೋಳ ಮಠದ ಶಾಂತಲಿಂಗ ಶ್ರೀಗಳು ಮಾತನಾಡಿ, ತೋಂಟದ ಸಿದ್ಧೇಶ್ವರ ಮಹಾವಿದ್ಯಾಲಯ ಬೆಳೆದುಬಂದ ಹಾದಿಯನ್ನು ಹತ್ತಿರದಿಂದ ಗಮನಿಸಿದ್ದೇನೆ. ವಿದ್ಯಾಥಿರ್ಗಳ ವಯಕ್ತಿಕ ಕಾಳಜಿಗೆ ಇಲ್ಲಿ ಆದ್ಯತೆ ನೀಡಲಾಗುತ್ತದೆ. ಶಿಣದ ಜೊತೆಗೆ ಮಾನವೀಯ ಮೌಲ್ಯಗಳು ಮಕ್ಕಳಿಗೆ ಅವಶ್ಯವಿದೆ. ಆದರ್ಶ ವ್ಯಕ್ತಿಗಳ ಹಾದಿಯಲ್ಲಿ ನಡೆಯುವ ಮೂಲಕ ನೀವೂ ಅವರಂತೆ ಸಾಧಕರಾಗಲು ಸ್ಪೂತಿರ್ ಆಗಬೇಕು ಎಂದರು.

ಲೋಯೊಲಾ ಪ್ರೌಢಶಾಲೆಯ ಮುಖ್ಯೋಪಾಧ್ಯಾಯಿನಿ ರೇನಿಟಾ ಪೀಂಟೂ, ದೈಹಿಕ ಶಿಣ ಪರಿವೀಕಿ ಜಯಲಕ್ಷಿ$್ಮ ಅಣ್ಣಿಗೇರಿ ಮಾತನಾಡಿದರು. ಕಳೆದ ವರ್ಷದ ಪಿಯುಸಿ ಪರೀೆಯಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾಥಿರ್ಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ವೈ. ಎಸ್​. ಮತ್ತೂರ, ಎನ್​. ವಿ. ಕಡಗದ, ಬಾಲಚಂದ್ರ ಭರಮಗೌಡ್ರ, ಕೊಟ್ರೇಶ ಮೆಣಸಿನಕಾಯಿ ಹಲವರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net