ಸಂಗೀತ-ಸಾಹಿತ್ಯ ಮನಸ್ಸಿಗೆ ಮುದ ನೀಡುವದು

1
Published on

ಗದಗ: ಮಾನವರಲ್ಲಿ ಅಡಗಿದ ಅಜ್ಞಾನವನ್ನು ಹೋಗಲಾಡಿಸಿ ಸುಜ್ಞಾನದ ಬೆಳಕನ್ನು ಕೊಟ್ಟು ಮನಸ್ಸಿಗೆ ನೆಮ್ಮದಿ ಶಾಂತಿಯನ್ನು ನೀಡುವ ಶಕ್ತಿ ಶಾಸ್ತಿçಯ-ಸುಗಮ ಸಂಗೀತ ಹಾಗೂ ಕಥಾಕೀರ್ತನದಲ್ಲಿದೆ ಎಂದು ಸೂಡಿ ಜುಕ್ತಿಹಿರೇಮಠದ ಪೂಜ್ಯ ಡಾ.ಕೊಟ್ಟೂರ ಬಸವೇಶ್ವರ ಶಿವಾಚಾರ್ಯರು ಹೇಳಿದರು.
ಅವರು ಸೂಡಿ ಜುಕ್ತಿ ಹಿರೇಮಠದಲ್ಲಿ ಕರ್ನಾಟಕ ಕೀರ್ತನ ಕಲಾವೇದಿಕೆ (ರಿ) ಗದಗ, ಶ್ರೀಗುರು ಸಾಂಸ್ಕೃತಿಕ ಶಿವಾನುಭವ ಸಮಿತಿ (ರಿ) ಗದಗ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಶ್ರಯದಲ್ಲಿ ನಡೆದ “ಶಾಸ್ತಿçÃಯ ಸಂಗೀತ, ಸುಗಮ ಸಂಗೀತ, ಕಥಾಕೀರ್ತನ ಪ್ರವಚನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮನಸ್ಸಿಗೆ ಮುದ ನೀಡುವ ಕಲೆಗಳೆಂದರೆ ಸಂಗೀತ ಸಾಹಿತ್ಯ ಕಲೆಗಳಾಗಿವೆ, ಇವುಗಳಿಗೆ ಕಥಾಕೀರ್ತನವೂ ಸೇರಿ ತ್ರಿವೇಣಿ ಸಂಗಮವಾಗಿರುವ ಈ ಕಲೆಯನ್ನು ಉಳಿಸಿ ಪ್ರೋತ್ಸಾಹಿಸುವ ಕಾರ್ಯ ಎಲ್ಲರಿಂದ ಆಗಬೇಕಿದೆ ಎಂದರು.
ಪೂಜ್ಯ ಉಮಾಪತಿ ಶಿವಾಚಾರ್ಯ ಪುಣ್ಯಸ್ಮರಣೋತ್ಸವ ಹಾಗೂ ಜಾತ್ರಾ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡ ಸಜ್ಜಲಗುಡ್ಡದ ಶರಣಮ್ಮನವರ ಪುರಾಣ ಪ್ರವಚನ ಕಾರ್ಯಕ್ರಮದಲ್ಲಿ ಈ ತ್ರಿವೇಣಿ ಸಂಗಮ ಕಾರ್ಯಕ್ರಮ ಎರ್ಪಡಿಸಿದ್ದು ಸ್ವಾಗತಾರ್ಹ ಎಂದರು.
ಸಿದ್ಧೇಶ್ವರ ಶಾಸ್ತಿçà ತೆಲ್ಲೂರ ಅವರಿಂದ ಕಥಾಕೀರ್ತನ ಪ್ರವಚನ ಜರುಗಿತು. ಹನಮಂತಕುಮಾರ ಲಿಂಗನಬAಡಿ, ಇಮಾಮಸಾಹೇಬ ಮುಗಳಿ, ಬಸವರಾಜ ಹೊನ್ನಿಗನೂರ, ಲೋಕೇಶ ಬಳಗಾನೂರ ಅವರಿಂದ ಸಂಗೀತ ಜರುಗಿತು.
ಕಾರ್ಯಕ್ರಮದಲ್ಲಿ ಗಣ್ಯರು, ಜಾತ್ರಾ ಮಹೋತ್ಸವ ಸಮಿತಿಯ ಪದಾಧಿಕಾರಿಗಳು, ಭಕ್ತಾಧಿಗಳು ಪಾಲ್ಗೋಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net