ಭಾರತೀಯ ವೀರಯೋಧರ ಕಾರ್ಯ ಶ್ಲಾಘನೀಯ

unnamed
Published on
ಗದಗ: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮನಲ್ಲಿ   ನಡೆದ ಭಯೋತ್ಪಾದಕರ ದಾಳಿಗೆ ಪ್ರತಿಕಾರವಾಗಿ ಆಪರೇಷನ್ ಸಿಂದೂರ ಕಾರ್ಯಾಚರಣೆಯನ್ನು ಭಾರತೀಯ ಸೈನಿಕರು ಸಮರ್ಥವಾಗಿ ಮಾಡಿ ಮುಗಿಸಿದ್ದಾರೆ ಅವರಿಗೆ ಅಭಿನಂದನೆಯ ವಿಜಯೋತ್ಸವ ಆಚರಿಸಲಾಗುವುದೆಂದು ನಿವೃತ್ತ ಮುಖ್ಯೋಧ್ಯಾಪಕ ಎಸ್ ಐ ಪಟ್ಟೇದ್ ಅವರು  ಹೇಳಿದರು.
ವಿವೇಕಾನಂದ ನಗರ ಹಾಗೂ ನಿಸರ್ಗ ಬಡಾವಣೆಯ ಹಾತ್ಲಿಗೇರಿ ರೋಡಿನಲ್ಲಿ ವಾಯು ವಿಹಾರ   ಗೆಳೆಯರ ಬಳಗದಿಂದ ವೀರಯೋಧರಗಿ ಅಭಿನಂದನೆಯ  ವಿಜಯೋತ್ಸವ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡುತ್ತಾ ಭಾರತೀಯ ಯೋಧರು ಭಯೋತ್ಪಾದಕರಿಗೆ ಸರಿಯಾದ ಉತ್ತರವನ್ನು ನೀಡಿದ್ದು ಭಯೋತ್ಪಾದನೆ ಕಾರ್ಯ ಸಂಪೂರ್ಣವಾಗಿ ಸ್ಥಗಿತಗೊಳ್ಳಬೇಕೆಂಬವರು ಹೇಳಿದರು.
ನಿವೃತ್ತ ಕೃಷಿ ಅಧಿಕಾರಿ ಕೆ ಐ ಕುರುಗೋಡು ಅವರು ಮಾತನಾಡಿ ಭಾರತೀಯ ಸೈನಿಕರ  ಕಾರ್ಯ ಪ್ರಶ್ನಾತೀರ್ಥ ವಾಗಿದ್ದು ಇಡೀ ಜಗತ್ತೇ ಬೆರಗಾಗುವಂತೆ ಭಾರತೀಯ ಸೈನಿಕರು ಭಯೋತ್ಪಾದಕರ ನೆಲೆಗಳನ್ನು ಧ್ವಂಸಗೊಳಿಸಿ  ಸಮರ್ಥವಾಗಿ ಕಾರ್ಯನಿರ್ವಹಿಸಿದ್ದಾರೆ ಎಂದು ಅವರು ಹೇಳಿದರು.
ಪ್ರಾಚಾರ್ಯ  ಗಂಗಾಧರ ಹಿಡಿಕಿಮಠ ಅವರು ಮಾತನಾಡಿ ದೇಶದ ಜನರು ಹೆಮ್ಮೆಪಡುವಂತ ಕಾರ್ಯ ಭಾರತೀಯ ಸೈನಿಕರು ಮಾಡಿದ್ದು ಭಾರತೀಯರು ಎಲ್ಲರೂ ಒಗ್ಗಟ್ಟಾಗಿ ಸೈನ್ಯಕ್ಕೆ ಬೆಂಬಲ ನೀಡಬೇಕು ಉಗ್ರವಾದವನ್ನು ಉಗ್ರವಾಗಿ ಖಂಡಿಸಬೇಕೆಂದು ಅವರು ಹೇಳಿದರು.
ಆರ್ ಆರ್ ಕಾಶಪ್ಪನವರ್ ಮಾತ್ನಾಡಿ ಆಪರೇಷನ್ ಸಿಂಧೂರ ಭಾರತೀಯ ಸೈನಿಕರು ಯಶಸ್ವಿಗೊಳಿಸಿದ್ದು 9 ಉಗ್ರಗಾಮಿಗಳ ನೆಲೆಗಳನ್ನು ನಾಶಗೊಳಿಸಿ ಉಗ್ರರ ಕೃತ್ಯಕ್ಕೆ ಸರಿಯಾದ ಪ್ರತ್ಯುತ್ತರ ನೀಡಿ ಭಾರತೀಯ  ಸೈನಿಕರ ಶಕ್ತಿ ಏನೆಂಬುವುದನ್ನು ತೋರಿಸಿಕೊಟ್ಟಿದ್ದಾರೆ ಎಂದು ಅವರು ಹೇಳಿದರು.
ಸಭೆಯಲ್ಲಿ ಕೆ ಎಸ್ ಆರ್ ಟಿ ಸಿ  ಕೆ ಎಂ ಯತ್ನಟ್ಟಿ, ಪ್ರಾಚಾರ್ಯ ಜಿ ಎಸ್ ಯತ್ನಟ್ಟಿ, ಬಿಎಸ್ಎನ್ಎಲ್ ಅಧಿಕಾರಿ  ಎಸ್ ಎಸ್ ಪಾಟೀಲ್, ನಿವೃತ್ತ ಮುಖ್ಯೋದ್ಯಾಪಕ ಕೆ ಬಿ ಭಜಂತ್ರಿ, ಮಮ್ಮದ್ ಅಲಿ ನದಾಫ್, ಮುಖ್ಯೋದ್ಯಾಪಕ  ಶ್ರೀಧರ್ ಕುಲಕರ್ಣಿ, ಪಿ ಎಸ್ ಕಣವಿ, ಕಮತರ್, ಬಸವರಾಜ್ ಕೊಳೂರ್ ಎಲ್ಲರೂ ಈ ಸಂದರ್ಭದಲ್ಲಿ ಮಾತನಾಡಿ ಉಗ್ರವಾದವನ್ನು ತೀವ್ರವಾಗಿ ಖಂಡಿಸಿದರು  ಕಾರ್ಯಕ್ರಮವನ್ನು ನಡಿಸಿ ಕೊನೆಗೆ ರಾಮಣ್ಣ ಕಾಶಪ್ಪನವರು ವಂದಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net