

ಗದಗ: ಜಗತ್ತಿನ ಯಾವ ದೇಶವೂ ಕಾಲಿಡದ ಪ್ರದೇಶದಲ್ಲಿ ಭಾರತ ತನ್ನ ಹೆಜ್ಜೆ ಗುರುತು ಮೂಡಿಸಿದ್ದು 140 ಕೋಟಿ ಭಾರತೀಯರ ಕೀರ್ತಿ ಪತಾಕೆ ಚಂದ್ರನಗಳಕ್ಕೆ ತಲುಪಿದಂತೆ ಎಂದು ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ಗದಗ ಜಿಲ್ಲಾ ಘಟಕ ಹೆಮ್ಮೆ ವ್ಯಕ್ತಪಡಿಸಿದೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ಗದಗ ಜಿಲ್ಲಾಧ್ಯಕ್ಷ ಬಸಲಿಂಗಪ್ಪ ಮುಂಡರಗಿ ಅವರು, ಭಾರತೀಯ ವಿಜ್ಞಾನಿಗಳ ಸಾಧನೆಯಿಂದ ಇಡೀ ವಿಶ್ವವೇ ಇಂದು ಬೆಂಗಳೂರಿನ ಇಸ್ರೊ ಸಂಸ್ಥೆಯ ಕಡೆಗೆ ತಿರುಗಿ ನೋಡುವಂತಾಗಿದೆ .
ಈ ಸಾಧನೆ ಮಾಡುವಲ್ಲಿ ಇಸ್ರೋ ಅಧ್ಯಕ್ಷ ಸೋಮನಾಥ್ ಸೇರಿದಂತೆ ಕರ್ನಾಟಕದ 500 ವಿಜ್ಞಾನಿಗಳು ಚಂದ್ರಯಾನ -3 ರ ಯಶಸ್ವಿಗೆ ಹಗಲು ಇರುಳು ಎನ್ನದೆ ಸಾಕಷ್ಟು ಶ್ರಮಿಸಿದ್ದಾರೆ. ಅವರೆಲ್ಲರ ಯಶಸ್ವಿನಿಂದಾಗಿ ಚಂದ್ರನ ದಕ್ಷಿಣ ಭಾಗದಲ್ಲಿ ಕಾಲಿರಿಸಿರುವ ಮೊದಲ ದೇಶವಾಗಿ ಭಾರತ ಹೊರ ಹೊಮ್ಮಿದೆ. ಇಂತಹ ಐತಿಹಾಸಿಕ ಸಾಧನೆಗೈದ ಕನ್ನಡ ನೆಲದಲ್ಲಿರುವ ಇಸ್ರೋ ಸಂಸ್ಥೆ ನಿಜಕ್ಕೂ ನಮ್ಮೆಲ್ಲರ ಹೆಮ್ಮೆ.
'ಚಂದ್ರಯಾನ ಬಾಹ್ಯಾಕಾಶ ಕಾರ್ಯಕ್ರಮವು ನವ ಭಾರತದ ಚೈತನ್ಯದ ಸಂಕೇತವೇ ಆಗಿದೆ. ಭಾರತವು ಮತ್ತಷ್ಟು ಅಂತರಗ್ರಹ ಯೋಜನೆಗಳನ್ನು ನಡೆಸಲು ಸಮರ್ಥವಾಗಿದೆ. ಚಂದ್ರನ ಮೇಲ್ಮೈಯಲ್ಲಿ ಸಾಫ್ಟ್ ಲ್ಯಾಂಡಿAಗ್ ಸೇರಿದಂತೆ ಚಂದ್ರಯಾನ-3 ಯೋಜನೆಯು
ಚಂದ್ರ, ಮಂಗಳ ಅಥವಾ ಶುಕ್ರ ಗ್ರಹದ ಅಂಗಳಕ್ಕೆ ಕಾಲಿಡಲು ನಾವು ಸಮರ್ಥರಾಗಿದ್ದೇವೆ. ದೇಶದ ಜನತೆ ಇಸ್ರೊದ ಭವಿಷ್ಯದ ಯೋಜನೆಗಳಿಗೂ ಇದೇ ರೀತಿ ಸಂಪೂರ್ಣ ಬೆಂಬಲ ನೀಡಿ, ಸಹಕರಿಸುವಂತೆ ಬಸಲಿಂಗಪ್ಪ ಮುಂಡರಗಿ ಅವರು ಕೋರಿದ್ದಾರೆ.