

ಗದಗ: ಸಮಾಜ ಕಲ್ಯಾಣ ಇಲಾಖೆಯು ಜ. 11 ಹಾಗೂ 12 ರಂದು ಬೆಳಗಾವಿಯಲ್ಲಿ ಏರ್ಪಡಿಸಿದ್ದ ಸಮಾಜ ಕಲ್ಯಾಣ ಇಲಾಖೆಯ ನೌಕರರ ಬೆಳಗಾವಿ ವಿಭಾಗ ಮಟ್ಟದ ಕ್ರೀಡಾ ಮತ್ತು ಸಾಂಸತಿಕ ಸ್ಪರ್ಧೆಗಳಲ್ಲಿ ಸಕ್ರೀಯವಾಗಿ ಪಾಲ್ಗೋಂಡಿದ್ದ ಗದಗ ಜಿಲ್ಲೆಯ ಮಹಿಳಾ ಮತ್ತು ಪುರುಷ ನೌಕರರು ಒಟ್ಟು 7 ವಿಭಾಗಗಳಲ್ಲಿ ವಿವಿಧ ಸ್ಥಾನಗಳನ್ನು ಪಡೆಯುವ ಮೂಲಕ ರಾಜ್ಯಮಟ್ಟದ ಸ್ಪರ್ಧೆಗೆ ಆಯ್ಕೆ ಆಗಿದ್ದಾರೆ ಎಂದು ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೆಶಕ ಮಹೇಶ ಪೋತದಾರ ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ವೈಯುಕ್ತಿಕ ಭಾವಗೀತೆ ಮತ್ತು ಕ್ರಿಕೆಟ್ನಲ್ಲಿ ಪ್ರಥಮ, ಸಾಮೂಹಿಕ ಜಾನಪದ ಗೀತೆಯಲ್ಲಿ ದ್ವೀತಿಯ, ಮಹಿಳಾ ವಿಭಾಗದ ಶೆಟಲ್ ಕಾಕ್ದಲ್ಲಿ ದ್ವೀತಿಯ, ಥ್ರೋ ಬಾಲ್ದಲ್ಲಿ ದ್ವೀತಿಯ, ಪುರುಷರ ವಿಭಾಗದ ಶೆಟಲ್ ಕಾಕ್ ಸ್ಪರ್ಧೆಯಲ್ಲಿ ದ್ವೀತಿಯ ಹಾಗೂ ಕಿರು ನಾಟಕ ಸ್ಪರ್ಧೆಯಲ್ಲಿ ದ್ವೀತಿಯ ಸ್ಥಾನ ಸೇರಿದಂತೆ ಒಟ್ಟು 7 ಸ್ಥಾನಗಳನ್ನು ಗಳಿಸುವ ಮೂಲಕ ಗದಗ ಜಿಲ್ಲೆಯ ಕೀತಿರ್ಯನ್ನು ಹೆಚ್ಚಿಸಿದ್ದಾರೆ. ಬೆಳಗಾವಿ ವಿಭಾಗ ಮಟ್ಟದಲ್ಲಿ ವಿಜೇತರಾಗಿ ರಾಜ್ಯಮಟ್ಟದಕ್ಕೆ ಆಯ್ಕೆಯಾಗಿರುವ ಸಮಾಜ ಕಲ್ಯಾಣ ಇಲಾಖೆಯ ಗದಗ ಜಿಲ್ಲೆಯ ಎಲ್ಲ ತಾಲೂಕುಗಳ ಸಹಾಯಕ ನಿರ್ದೆಶಕರನ್ನು, ಕಚೇರಿ ಅಧಿಕರನ್ನು, ವಾರ್ಡನ್, ಅಡುಗೆಯವರನ್ನು ಹಾಗೂ ಅಡುಗೆ ಸಹಾಯಕರನ್ನು ಪೋತದಾರ ಅಭಿನಂದಿಸಿದ್ದಾರೆ.