ಜಿಲ್ಲೆಯ ಎಲ್ಲ ಗ್ರಾಮಗಳಿಗೆ ಸ್ಮಶಾನ ಭೂಮಿ ನಿಗದಿ

25GDG01A
Published on

ಕೆಲವು ಬೂಸ್ವಾಧಿನ ಮತ್ತು ಕೆಲವು ಖರೀದಿ ಹಂತದ ಪ್ರಕ್ರಿಯೆಯಲ್ಲಿ ಬಾಕಿ

ಶಿವಾನಂದ ಹಿರೇಮಠ ಗದಗ

ಜಿಲ್ಲೆಯಲ್ಲಿ ಹಲವು ಗ್ರಾಮಗಳಲ್ಲಿನ ಸ್ಮಶಾನ ಭೂಮಿ ಕೊರತೆಯನ್ನು ನೀಗಿಸಲು ಜಿಲ್ಲಾಡಳಿತ ಮುಂದಾಗಿದೆ. ಪ್ರಸಕ್ತ ಸಾಲಿನಲ್ಲಿ 20ಕ್ಕೂ ಅಧಿಕ ಸ್ಮಶಾನ ಭೂಮಿ ವಂಚಿತ ಗ್ರಾಮಗಳಿಗೆ ಭೂಮಿ ಗುರುತಿಸಲಾಗಿದ್ದು, ಕೆಲ ಗ್ರಾಮದ ಸ್ಮಶಾನ ಭೂಮಿಯು ಖರೀದಿ ಹಂತದಲ್ಲಿ, ಇನ್ನೂ ಹಲವು ಗ್ರಾಮಗಳಲ್ಲಿ ಸ್ಮಾಶಾನ ಭೂಮಿ ಸ್ವಾಧಿನ ಪ್ರಕ್ರಿಯೆ ಹಂತದಲ್ಲಿದೆ. ಜಿಲ್ಲೆಯ ಯಾವೊಂದು ಗ್ರಾಮದ ಜನರು ಸ್ಮಶಾನಭೂಮಿ ಇಲ್ಲದೆಂಬ ಕೊರಗನ್ನೂ 2025ರ ಅಂತ್ಯದೊಳಗೆ ದೂರ ಮಾಡಲು ಜಿಲ್ಲಾಡಳಿತ ನೀಲ ನೆ ಸಿದ್ದಪಡಿಸಿಕೊಂಡಿದೆ.

ಜಿಲ್ಲೆಯಲ್ಲಿ ಕೆಲ ಗ್ರಾಮದ ಜನರು ದಣ ದಿಕ್ಕಿಗೆ, ಗ್ರಾಮದಿಂದ ಎತ್ತರ ಪ್ರದೇಶಕ್ಕೆ ಹೀಗೆ ಹಲವು ಮೂಡ ನಂಬಿಕೆಗಳನ್ನು ಹೊಂದಿದ್ದರು. ಹಾಗಾಗಿ ಜಮೀನ್ದಾರ ಮನೆಯ ಜಮೀನು, ಖಾಸಗಿ ಮಾಲೀಕತ್ವ ಹಾಗೂ ಹಳ್ಳದ ಪಕ್ಕದಲ್ಲಿ ಹೀಗೆ ಶವಗಳನ್ನು ಮಣ್ಣು ಮಾಡುತ್ತಿದ್ದರು. ಈ ಮೂಡನಂಬಿಕೆ ಹೋಗಲಾಡಿಸಿ ಮತ್ತು ಸ್ಮಶಾನ ಭೂಮಿ ಕೊರತೆ ಕೊನೆಗಾಣಿಸಲು ಸ್ಮಶಾನ ಭೂಮಿ ಅವಶ್ಯ ಇರುವ ಗ್ರಾಮಗಳಿಗಾಗಿ ಭೂಸ್ವಾಧಿನ ಮಾಡಿಕೊಳ್ಳಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. 2025ನೇ ವರ್ಷದ ಒಳಗಾಗಿ ಖರೀದಿ ಪ್ರಕ್ರಿಯೆ ಮುಗಿದು ಗ್ರಾಮಗಳು ಅಗತ್ಯ ಸ್ಮಶಾನ ಭೂಮಿಯನ್ನು ಹೊಂದಲಿವೆ.

ಭೂಸ್ವಾಧಿನ ಪ್ರಸ್ತಾನವೆ:

ಜಿಲ್ಲೆಯಲ್ಲಿ ಮುಂಡರಗಿ ತಾಲೂಕು ಹೊರತುಪಡಿಸಿ ಇತರೆ ಎಲ್ಲ ತಾಲೂಕಿನ ಗ್ರಾಮಗಳಲ್ಲಿ ಸ್ಮಶಾನ ಭೂಮಿ ಕೊರತೆ ಇತ್ತು. ನರಗುಂದ ತಾಲೂಕಿನ 35 ಗ್ರಾಮಗಳ ಪೈಕಿ ಬೂದಿಹಾಳ ಮತ್ತು ಗಂಗಾಪೂರ ಗ್ರಾಮಗಳಿಗೆ ತಲಾ ಒಂದು ಎಕರೆ ಬೂಸ್ವಾಧಿನಕ್ಕಾಗಿ ಪ್ರಸ್ತಾವನೆ ಸರ್ಕಾರಕ್ಕೆ ಸಲ್ಲಿಸಲಾಗಿದೆ. ರೋಣ ತಾಲೂಕಿನ 55 ಗ್ರಾಮಗಳ ಪೈಕಿ ನೈನಾಪುರದಲ್ಲಿ 1.4 ಎಕರೆ, ಮುಗಳಿ ಗ್ರಾಮದಲ್ಲಿ 1.20 ಏಕರೆ, ತಳಗಳ  1.10 , ಹೊನ್ನಿಗನೂರು 20 ಗುಂಟೆ, ಬೆಳಹೀಡ 1 ಎಕರೆ, ಬಸಲಾಪುರ 1.20 ಎಕರೆ, ಹಿರೇಹೊನ್ನೂರು 1.20 ಎಕರೆ, ಕೊತಬಾಳ 3 ಎಕರೆ ಹಾಗೂ ಎರೆ ಕುರುಬನಾಳ ಗ್ರಾಮಕ್ಕೆ 1 ಎಕರೆ ಸೇರಿ ಒಟ್ಟು 9 ಗ್ರಾಮಗಳಿಗೆ ಸ್ಮಶಾನ ಭೂಮಿ ಖರೀದಿಸಲು ರಾಜ್ಯ ಸರ್ಕಾರಕ್ಕೆ ಭೂಸ್ವಾಧಿನ ಪ್ರಸ್ತಾವನೆ ಸಲ್ಲಿಕೆ ಆಗಿದೆ. ಶಿರಹಟ್ಟಿಯಲ್ಲಿ ಕಲ್ಲಾಗನೂರು ಮತ್ತು ಕೊಕ್ಕರಗುಂದಿ ಗ್ರಾಮಕ್ಕೆ ತಲಾ 2 ಎಕರೆ, ಗಜೇಂದ್ರಗಡ ತಾಲೂಕಿನಲ್ಲಿ ವೀರಾಪೂರ ಗ್ರಾಕ್ಕೆ 1 ಎಕರೆ, ಬೂದಿಹಾಳ 1.365 ಏಕರೆ, ಮಾರನಬಸರಿ 2 ಎಕರೆ ಹಾಗೂ ಹಳ್ಳಿಕೆರೆ ಗ್ರಾಮಕ್ಕೆ 2.20 ಏಕರೆ ಭೂಸ್ವಾಧಿನ ಪ್ರಕ್ರಿಯೆ ಬಾಕಿ ಇದೆ.

ಖರೀದಿ ಹಂತದ ಪ್ರಸ್ತಾವನೆ:

ಜಿಲ್ಲೆಯ ಕೆಲ ತಾಲೂಕುಗಳಲ್ಲಿ ಭೂಸ್ವಾಧಿನ ಪ್ರಕ್ರಿಯೆ ಮುಗಿದು ನಂತರ ಖರೀದಿ ಹಂತಕ್ಕೆ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಜಿಲ್ಲೆಯ ಬಾಕಿ ಉಳೀದ ಗ್ರಾಮಗಳಲ್ಲಿ ಕೆಲವೇ ತಿಂಗಳಲ್ಲಿ ಶವ ಸಂಸ್ಕಾರಕ್ಕೆ ಭೂಮಿ ಲಭ್ಯವಾಗಲಿದೆ. ಗದಗ ತಾಲೂಕಿನ ಹಂಗನಕಟ್ಟಿಯಲ್ಲಿ 3 ಎಕರೆ ಮತ್ತು ದುಂದೂರು ಗ್ರಾಮದಲ್ಲಿ ನೇರ ಖರೀದಿ ಪ್ರಕ್ರಿಯೆ ಬಾಕಿ ಇದೆ. ಅದೇ ರೀತಿ ರೋಣ ತಾಲೂಕಿನ ಅಮರಗೊಳ ಗ್ರಾಮದ 1.1 ಎಕರೆ, ಹೊಳೆ ಹಡಗಲಿ ಗ್ರಾಮದ 1.20 ಎಕರೆ, ನಾಗರಾಳ 1 ಎಕರೆ, ಬೆಳವಣಿಕಿ 3 ಎಕರೆ, ಶಿರಹಟ್ಟಿ ತಾಲೂಕಿನಲ್ಲಿ ತಾರಿಕೊಪ್ಪ ಗ್ರಾಮದ 2 ಎಕರೆ, ನಾರಾಯಣಪೂರ ಗ್ರಾಮದ 33 ಗುಂಟೆ, ಗಜೇಂದ್ರಗಡ ತಾಲೂಕಿನ ಚಿಲಜರಿ ಗ್ರಾಮದ 19 ಗುಂಟೆ, ಹಲಕೇರಿಗೆ 2 ಎಕರೆ ಜತೆಗ ಲೆ$್ಮಶ್ವರ ತಾಲೂಕಿನಲ್ಲಿ ಹಿರೇಮಲ್ಲಾಪುರ ಗ್ರಾಮದ 18 ಗುಂಟೆ ಖರೀದಿ ಪ್ರಕ್ರಿಯೆಗಳು ಜಿಲ್ಲಾಡಳಿತ ಮಟ್ಟದಲ್ಲಿ ಬಾಕಿ ಇದೆ. ಕೆಲ ಸ್ಮಶಾನಭೂಮಿ ಖರೀದಿಗೆ ನುದಾನ ಲಬ್ಯವಿದ್ದು, ಇನ್ನೂ ಹಲವು ಭೂಮಿ ಖರೀದಿಗೆ ಸರ್ಕಾರದಿಂದ ಅನುದಾನ ಬಿಡುಗಡೆ ಆಗಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net