ಸ್ಲಂ ಸಮಿತಿ : ಅ.೧೬ ರಂದು ಜಿಲ್ಲಾಡಳಿತ ಮುಂಭಾಗದಲ್ಲಿ

IMG-20231009-WA0021 (1)
Published on
ಸ್ಲಂ ಜನರ ವಸತಿ ರಹಿತ ನಿವಾಸಿಗಳಿಗೆ ಮನಿ ಹಂಚಿಕೆ ಮಾಡದೆ ಹೋದರೆ ಅ.೧೬ ರಂದು ಜಿಲ್ಲಾಡಳಿತ ಮುಂಭಾಗದಲ್ಲಿ ಧರಣಿ ಹಮ್ಮಿಕೊಳ್ಳಲಾಗಿದೆ ಎಂದು ಸ್ಲಂ ಸಮಿತಿ ಅಧ್ಯಕ್ಷ ಇಮ್ತಿಯಾಜ್ ಮಾನ್ವಿ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲಾ ಸ್ಲಂ ಸಮಿತಿಯಿಂದ ಕಳೆದ ೧೫ ವರ್ಷಗಳಿಂದ ಸ್ಲಂ ಜನರ ವಸತಿ, ಹಕ್ಕುಪತ್ರ ಕಲ್ಪಿಸಲು ಒತ್ತಾಯಿಸಿ ನಿರಂತರ ಹೋರಾಟಗಳನ್ನು ನಡೆಸುತ್ತ ಜನಪ್ರತಿನಿಧಿಗಳಿಗೆ ಮತ್ತು ಅಧಿಕಾರಿಗಳಿಗೆ ಮನವಿಗಳು ನೀಡಿದರು ಸಹ ಸ್ಲಂ ಜನರ ಮತ್ತು ವಸತಿರಹಿತರ ಬೇಡಿಕೆಗಳಿಗೆ ನಿರ್ಲಕ್ಷö್ಯ ನೀತಿ ಅನುಸರಿಸುತ್ತಿರುವುದು ಖಂಡನೀಯವಾಗಿದೆ. ಆದ್ದರಿಂದ ಜಿಲ್ಲಾ ಸ್ಲಂ ಸಮತಿಯಿಂದ ಸ್ಲಂ ಜನರ ಮತ್ತು ವಸತಿರಹಿತರ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಬೃಹತ್ ಪ್ರತಿಭಟನೆ ನಡೆಸಲು ಉದ್ದೇಶಿಸಲಾಗಿದೆ ಎಂದರು.ಚುನಾವಣೆ ಪೂರ್ವದಲ್ಲಿ ಸ್ಲಂ ನಿವಾಸಿಗಳಿಗೆ ೩೪೮ ನಿವಾಸಿಗಳಿಗೆ ಮನೆ ಮಂಜೂರು ಮಾಡುವ  ಕುರಿತು ಭರವಸೆ ನೀಡಲಾಗಿತ್ತು. ಆದರೆ ಇದುವರೆಗೆ ಮೂಲ ಫಲಾನುಭವಿಗಳಿಗೆ ಮನೆ ಮಂಜೂರು ಮಾಡಿಲ್ಲ. ಆದರೆ ಸಚಿವರು ಕೊಳಚೆ ನಿವಾಸಿಗಳಿಗೆ ಮನೆ ಮಂಜೂರು ಮಾಡುವಲ್ಲಿ ನಿರಾಶಕ್ತಿ ತೋರಿಸುತ್ತಿದ್ದಾರೆ ಎಂದು ಅಸಮಧಾನ ತೋಡಿಕೊಂಡರು.ನಗರದಲ್ಲಿರುವ ವಿವಿಧ ಮನೆ ಹಂಚಿಕೆಯಲ್ಲಿ ತಾರತಮ್ಯವಾಗಿದೆ. ಕೂಡಲೇ ಮೂಲ ಫಲಾನುಭವಿಗಳಿಗೆ ಮನಿ ಹಂಚಿಕೆ ಮಾಡಬೇಕು ಎಂದು ಒತ್ತಾಯಿಸಿದರು. ಜತೆಗೆ ಈಗಾಗಲೇ ಸ್ಲಂ ನಿವಾಸಿಗಳ ಸರ್ವೆ ಕಾರ್ಯ ಮಾಡಲಾಗಿದೆ. ಆದರಿಂದ ಕೂಡಲ ನಗರದಲ್ಲಿರುವ ಸ್ಲಂ ನಿವಾಸಿಗಳಿಗೆ ಹಕ್ಕು ಪತ್ರ ನೀಡಬೇಕು. ಕೂಟಲೇ ೩೪೮ ಸ್ಲಂ ನಿವಾಸಿಗಳ ಬೇಡಿಕೆ ಈಡೇರಿಸಬೇಕು ಎಂದು ಒತ್ತಾಯಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಅಶೋಕ ಕುಸಬಿ, ಮಹಿಳಾ ಸಂಚಾಲಕಿ ಪರವೀಬಾನು ಹವಾಲ್ದಾರ, ಭತರ ನವಲಗುಂದ, ವಂದನಾ ಶ್ಯಾವಿ, ರಾಜಸಾಬ್ ಸೇರಿದಂತೆ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net