31 ರಂದು ಮೂಳೆಗಳ ಬಲವರ್ಧನೆ ತಪಾಸಣೆ ಉಚಿತ ಶಿಬಿರ

28GDG06
Published on
ಗದಗ: ನಗರದ ಸ್ಟೇಷನ್ ರಸ್ತೆಯಲ್ಲಿರುವ ಮುನ್ಸಿಪಲ್ ಕಾಲೇಜ್ ಹತ್ತಿರವಿರುವ ರಾಫಾ ಎಲುಬು ಕೀಲುಗಳ ಆಸ್ಪತ್ರೆಯಲ್ಲಿ ಡಿ. 31ರಂದು ಬೆಳಗ್ಗೆ 10 ರಿಂದ ಸಂಜೆ 4 ಗಂಟೆ ವರೆಗೆ ಉಚಿತವಾಗಿ ಮೂಳೆಗಳ ಬಲವರ್ಧನೆಯ ಮೌಲ್ಯಮಾಪನ ಪರೀಕ್ಷಿಸುವ ಆರೋಗ್ಯ ತಪಾಸಣೆ ಶಿಬಿರ ನಡೆಯಲಿದೆ.
50 ವರ್ಷ ಮೇಲ್ಪಟ್ಟ ಪುರುಷರು ಮತ್ತು 45 ವರ್ಷ ಮೇಲ್ಪಟ್ಟ ಮಹಿಳೆಯರು ಈ ಶಿಬಿರದಲ್ಲಿ ಭಾಗವಹಿಸಬಹುದಾಗಿದೆ. ಅಸ್ತಮಾ, ಸಂಧಿವಾತ ಹೀಗೆ ನಾನಾ ಕಾಯಿಲೆಗಳಿಗೆ ತುತ್ತಾಗಿ ಅನೇಕ ದಿನಗಳಿಂದ ಔಷಧಿ ಪಡೆಯುತ್ತಿರುವವರು, ಮಧುಮೇಹಿಗಳು, ಅತಿಯಾಗಿ ಧೂಮಪಾನ- ಮಧ್ಯಪಾನ ಮಾಡುವವರು ಮತ್ತು ಅನುವಂಶಿಕವಾಗಿ ಕಂಡು ಬರುವ ಚಪ್ಪೆ ಮುರಿತ ಸಮಸ್ಯೆ ಇರುವವರು ಈ ಶಿಬಿರದಲ್ಲಿ ಭಾಗವಹಿಸಬಹುದಾಗಿದೆ.
ಗರಿಷ್ಠ 200  ಜನರಿಗೆ ಯಾವುದೇ ಅಡ್ಡಪರಿಣಾಗಳಿಲ್ಲದ ಅತ್ಯಾಧುನಿಕ ವೈದ್ಯಕೀಯ ಯಂತ್ರೋಪಕರಣದ ಮೂಲಕ ತಪಾಸಣೆ ನಡೆಸಲಾಗುತ್ತದೆ. ಡಿ. 30ರ ಸಂಜೆ ಒಳಗಾಗಿ ಮೊದಲು ನೋಂದಾಯಿಸಿದವರಿಗೆ ಮೊದಲ ಆದ್ಯತೆ. ಹೆಚ್ಚಿನ ಮಾಹಿತಿ ಮತ್ತು ಹೆಸರು ನೋಂದಾಯಿಸಲು ರಾಫಾ ಆಸ್ಪತ್ರೆ ದೂ. 9483214777 ಕರೆ ಅಥವಾ ವಾಟ್ಸ್‌‌ಆ್ಯಪ್ ಮೂಲಕವೂ ನೋಂದಾಯಿಸಿಕೊಳ್ಳಬಹುದು  ಎಂದು ಡಾ. ರೋನಾಲ್ಡ್ ಖಾನಾಪುರ ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net