ಸಿದ್ರಾಮೇಶ್ವರ ಜಯಂತಿ ಕಾರ್ಯಕ್ರಮ

IMG-20250202-WA0014
Published on
Gadag: ಬಸವಣ್ಣನವರ ಜತೆ ಇರುವ ಶರಣರ ಇತಿಹಾಸ ತಿಳಲಿದಿರುವುದು ಕಡಿಮೆ. ಅದರಲ್ಲು ಸಿದ್ರಾಮೇಶ್ವರ ಅವರ ಇತಿಹಾಸ ದೊರೆಯುವುದು ಕಡಿಮೆ. ಸಿದ್ರಾಮೇಶ್ವರ ಅವರು ಬಸವಣ್ಣನ ಮೇಲೆ ಇಟ್ಟಿರುವ ಗೌರರವನ್ನು ಅವರ ವಚನದಿಂದ ಅವತು ಬಿತ್ತರಿಸಿದ್ದಾರೆ ಎಂದು ಎಚ್.ಕೆ. ಪಾಟೀಲ ಹೇಳಿದರು.
ನಗರದ ತೋಂಟದಾರ್ಯ ಕಲ್ಯಾಣ ಕೇಂದ್ರದಲ್ಲಿ ಭಾನುವಾರ ಜರುಗಿದ ಸಿದ್ರಾಮೇಶ್ವರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಅನುಭವ ಮಂಟಪದಲ್ಲಿ ಇದ್ದ ಶರಣರಂತೆ ಎಲ್ಲರೂ ನಡೆದುಕೊಂಡರೆ ವಿಶ್ವದಲ್ಲೇ ಭಾರತೀಯ ಸಮುದಾಯದ ಎತ್ತರಕ್ಕೆ ಬೆಳೆಯುವುದರಲ್ಲಿ ಬಸಂಶಯವಿಲ್ಲ ಎಂದರು.
ಬಸವೇಶ್ವರ ಅವರನ್ನು ಎಲ್ಲರಿಗೂ ಪರಚಿಸುವ, ಅವರ ತತ್ವ ಸಿದ್ದಾಂತಗಳು ಎಲ್ಲರಿಗೂ ಮನ ಮುಟ್ಟಿಸುವ ಕೆಲಸವನ್ನು ಸಾಣಿಹಳ್ಳಿ ಪಂಡಿತರಾಧ್ಯ ಶ್ರೀ ಗಳು ಮಾಡಿದ್ದಾರೆ. ಬಸವಣ್ಣನವರ ಕುರಿತು ನಾಟಕಗಳನ್ನು ಬರೆದು ನಾಡಿಗೆ ಬಸವೇಶ್ವರ ಅವರನ್ನು ಪರಿಣಾಮಕಾರಿಯಾಗಿ ಪರಿಚಯಿಸುವ ಕೆಲಸ ಮಾಡುತ್ತಿದ್ದಾರೆ. ಸಮಾಜದಲ್ಲಿ ಡೊಂಕುಗಳನ್ನು ತಿದ್ದುವ ಕೆಲಸ ಅವರಿಂದ ಆಗುತ್ತಿರುವುದು ವಿಶೇಷ ಎಂದರು.
ಬೋವಿ ಮಠದ ಸಿದ್ರಾಮೇಶ್ವರ ಶ್ರೀಗಳ ಕುರಿತು ಮಾತನಾಡಿದ ಎಚ್.ಕೆ. ಪಾಟೀಲ ಅವರು ಬೀವಿ ಸಮಾಜದಲ್ಲಿನ ಭಯವನ್ನು ತೊಡೆದುಹಾಕಿ ಅವರಲ್ಲಿ ಉತ್ಸಾಹ ತರಿಸುವ ಕೆಲವನ್ನು ಸಿದ್ರಾಮೇಶ್ವರ ಶ್ರೀಗಳು ಮಾಡುತ್ತಿದ್ದಾರೆ. ಬೋವಿ ಸಮಾಜದವರು ಈ ದೇಶದ ಸಂಪತ್ತು ಅಧಿಕಗೊಳಿಸಲು ಶ್ರಮೀಸಿದವರು. ಕಡಿಮೆ ಓದಿದ  ಸಮುದಾಯದಗಳಲ್ಲಿ ಬೋವಿ ಸಮಾಜವು ಒಂದಾಗಿದೆ. ಅಂಬೇಡ್ಕರ್ ಅವರು ನೀಡಿರುವ ಸಂವಿಧಾನದ ಮೂಲಕ ಶಿಕ್ಷಣ ಎಲ್ಲರಿಗೂ ದೊರೆಯುವ ಹಕ್ಕಾಗಿದೆ. ಅಂತಹ ಹಕ್ಕಿನಿಂದ ಸಂಪೂರ್ಣ ಶಿಕ್ಷಣವಂತರಾಗಬೇಕು ಎಂದು ಎಚ್.ಕೆ. ಪಾಟೀಲ ಹೇಳಿದರು.
ಸಿದ್ರಾಮೇಶ್ವರ ಶ್ರೀಗಳು, ಪಂಡಿತಾರಾಧ್ಯ ಶ್ರೀಗಳು. ಜಿ.ಎಸ್. ಪಾಟೀಲ, ಡಿ. ಆರ್ ಪಾಟೀಲ, ವಿದ್ಯಾದರ ದೊಡ್ಡಮನಿ ಇತರರು ಇದ್ದರು
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net