ಪ್ರೊ.ಸಿದ್ದು ಯಾಪಲಪರವಿ ಅವರಿಂದ ಯುರೋಪ್ ರಾಷ್ಟ್ರಗಳಲ್ಲಿ ವಿಶೇಷ ಉಪನ್ಯಾಸ

IMG-20250505-WA0296
Published on
ಗದಗ : ನಾಡಿನ ಹೆಸರಾಂತ ಸಾಹಿತಿ, ಬಸವತತ್ವ ಚಿಂತಕ ಹಾಗೂ ವಚನ ಟಿವಿಯ ಮುಖ್ಯಸ್ಥ ಪ್ರೊ.ಸಿದ್ದು ಯಾಪಲಪರವಿ ಅವರು ಈ ತಿಂಗಳು ಎಂಟರಿಂದ ಇಪ್ಪತ್ತು ದಿನಗಳ ಕಾಲ ಇಂಗ್ಲೆಂಡ್, ಫ್ರ್ಯಾನ್ಸ್, ಜರ್ಮನಿ, ಸ್ವಿಜರ್ಲ್ಯಾಂಡ್ ಹಾಗೂ ಇತರ ಎಂಟು ರಾಷ್ಟ್ರಗಳಲ್ಲಿ ಪ್ರವಾಸ ಮಾಡಲಿದ್ದರೆ.
ಬೆಂಗಳೂರಿನ ರಾಷ್ಟ್ರೀಯ ಬಸವ ಪ್ರತಿಷ್ಠಾನ, ಪರಮಪೂಜ್ಯ ಡಾ. ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ಆಯೋಜನೆ ಮಾಡಿರುವ ಬಸವತತ್ವ ಚಿಂತನ ಗೋಷ್ಠಿಯಲ್ಲಿ ಪ್ರಧಾನ ಉಪನ್ಯಾಸಕರಾಗಿ ಪಾಲ್ಗೊಂಡು ‘ಜಗತ್ತಿನ ಮೊದಲ ಪಾರ್ಲಿಮೆಂಟ್ ಅನುಭವ ಮಂಟಪ ಹಾಗೂ ವಚನಗಳ ಜಾಗತಿಕ ಮೌಲ್ಯಗಳು’ ಎಂಬ ವಿಷಯದ ಕುರಿತು ಮಾತನಾಡಲಿದ್ದಾರೆ. ಕಳೆದ ವರ್ಷ ಜೂನ್ ತಿಂಗಳಲ್ಲಿ ಜಪಾನ್, ನವೆಂಬರ್ ತಿಂಗಳಲ್ಲಿ ಇಂಡೋನೇಷ್ಯಾ ಬಾಲಿಯಲ್ಲಿ ಪ್ರವಾಸ ಮಾಡಿ, ವಿವಿಧ ಕಾರ್ಯಕ್ರಮಗಳಲ್ಲಿ ಉಪನ್ಯಾಸ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.
ಹಿರಿಯ ಸಾಂಸ್ಕೃತಿಕ ಚಿಂತಕರಾದ ಡಾ. ಜಿ. ಬಿ. ಪಾಟೀಲ,  ಜಿಲ್ಲಾ ವಿಶ್ವಕರ್ಮ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾದ ರಾಜಗೋಪಾಲ ಕಡ್ಲಿಕೊಪ್ಪ, ಜಿಲ್ಲಾ ಚಿತ್ರಕಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ವಿಜಯ ಕಿರೆಸೂರ, ಡಾ. ಜಿ. ಎಸ್. ಹಿರೇಮಠ ಸೇರಿದಂತೆ
ಕಸಾಪ ಪದಾಧಿಕಾರಿಗಳು ಹಾಗೂ ಸಾಹಿತ್ಯಾಸಕ್ತರು ಪ್ರೊ.ಸಿದ್ದು ಯಾಪಲಪರವಿ ಅವರನ್ನು ಅಭಿನಂದಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net