ಸರ್ವರಲ್ಲಿ ದುರ್ಗುಣಗಳು ದೂರವಾಗಿ ಸದ್ಗುಣಗಳು ಬರಬೇಕು

07GDG03
Published on

ಸಿದ್ಧಾಂತ ಶಿಖಾಮಣಿ ಪ್ರವಚನದಲ್ಲಿ ನರೇಗಲ್ಲ ಶ್ರೀಗಳ ನುಡಿ:

ವಿಜಯವಾಣಿ ಸುದ್ದಿಜಾಲ ಗದಗ

ಮನುಷ್ಯನಲ್ಲಿ ದುರ್ಗುಣಗಳು ದೂರವಾಗಿ ಸದ್ಗುಣಗಳು ಬರಬೇಕು. ಅಂತಹ ಕಾರ್ಯವನ್ನು ಧರ್ಮ ಗುರುಗಳು, ಧರ್ಮ ಗ್ರಂಥಗಳು ಮಾಡಬೇಕು. ಸಿದ್ಧಾಂತ ಶಿಖಾಮಣಿ ಸಮಸ್ತ ಮನುಕುಲದ ಹಿತವನ್ನು ಬಯಸಿದ ಅತ್ಯಮೂಲ್ಯ ಗ್ರಂಥವಾಗಿದೆ ಎಂದು ನರೇಗಲ್​ ಹಿರೇಮಠದ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮಿಗಳು ಹೇಳಿದರು.

ನಗರದ ಗಾಣಿಗ ಭವನದಲ್ಲಿ ಶನಿವಾರ ಏರ್ಪಡಿಸಿದ್ದ ಸಿದ್ಧಾಂತ ಶಿಖಾಮಣಿ ಆಧ್ಯಾತ್ಮಿಕ ಪ್ರವಚನ ಸಮಿತಿಯ ಶ್ರೀಮದ್​ ಕಾಶೀ ನೂತನ ಜಗದ್ಗುರುಗಳವರ ಆಷಾಡ ಮಾಸದ ಇಷ್ಟಲಿಂಗ ಮಹಾಪೂಜೆ ಹಾಗೂ ಸಿದ್ಧಾಂತ ಶಿಖಾಮಣಿ ಆಧ್ಯಾತ್ಮಿಕ ಪ್ರವಚನದಲ್ಲಿ ಮಾತನಾಡಿದ ಅವರು, ಜಗದ್ಗುರು ರೇಣುಕರು ಅಗಸಮುನಿಗೆ ಬೋಧಿಸಿದ, ಶಿವಯೋಗಿ ಶಿವಾಚಾರ್ಯರು ವಿರಚಿತ ಸಿದ್ದಾಂತ ಶಿಖಾಮಣಿ ಸಂವಾದದ ಗ್ರಂಥವಾಗಿದೆ. ಇದು ಕೇವಲ ವೀರಶೈವರಿಗೆ ಮಾತ್ರವಲ್ಲ. ಸಮಸ್ತರ ಶ್ರೇಯಸ್ಸನ್ನು ಹಾಗೂ ಸಮಾನತೆಯ ಮೌಲ್ಯಗಳನ್ನು ಬೋಧಿಸಿರುವ ಗ್ರಂಥ ಎಂದರು.

ಮನುಷ್ಯನಲ್ಲಿ ಆಂತರಿಕ ವಿಕಾಸ ಆಗಬೇಕು, ಅಂತರಂಗ ಭಹಿರಂಗ ಶುದ್ಧಿಯಾಗಬೇಕು ಜೊತೆಗೆ ಮಾ ಗುಣಗಳು ಮನುಷ್ಯನನ್ನು ಎತ್ತರದ ಸ್ಥಾನಕ್ಕೆ ಸಾಗಿಸಬಲ್ಲವು ಈ ಎಲ್ಲ ಕಾರ್ಯಗಳು ಸರ್ವರಿಂದಾಗಲಿ ಸಮಾಜ ಸನ್ಮಾರ್ಗದಲ್ಲಿ ಸಾಗಲಿ ಎಂದು ಶ್ರೀಗಳು ಹೇಳಿದರು.

ಹಿರೇವಡ್ಡಟ್ಟಿ ಹಿರೇಮಠದ ವಿರೇಶ್ವರ ಶಿವಾಚಾರ್ಯ ಶ್ರೀಗಳು ನೇತೃತ್ವ ವಹಿಸಿದ್ದರು. ಜಂಗಮವಾಡಿಮಠ ವಾರಣಾಸಿ ಕಾಶೀ ಮಹಾಪೀಠದ ಶ್ರೀಮದ್​ ಕಾಶೀ ಜ್ಞಾನಸಿಂಹಾಸನಾಧೀಶ್ವರ ಜ. ಡಾ. ಮಲ್ಲಿಕಾರ್ಜುನ ವಿಶ್ವಾರಾಧ್ಯ ಶಿವಾಚಾರ್ಯ ಭಗವತ್ಪಾದಂಗಳವರು ಸಾನ್ನಿಧ್ಯ ವಹಿಸಿ ಮಾತನಾಡಿ ಸರ್ವರಲ್ಲಿ ದಯೆ ಬರಬೇಕು ಬರಬೇಕು, ದಯೆ ಇಲ್ಲದ ಧರ್ಮ ಅದು ಧರ್ಮ ಅಲ್ಲ. ಧರ್ಮ ಗ್ರಂಥಗಳು ಎಲ್ಲರಲ್ಲಿ ಸೌಹಾರ್ದತೆ, ಸ್ನೇಹ, ಪ್ರೇಮತ್ವ ಮೂಡಿಸುವಂತಿರಬೇಕು. ಇದರಿಂದ ಮನುಷ್ಯತ್ವ ಮತ್ತು ಮಾನವೀಯ ಸಂಬಂಧಗಳು ಗಟ್ಟಿಗೊಳ್ಳುವದು ಎಂದರು.

ವಿರೇಶ ಕೂಗು, ವಿಜಯಕುಮಾರ ಹಿರೇಮಠ, ಲಿಂಗನಗೌಡ ಬೆಳವಟಗಿ, ನಾಗನಗೌಡ ನಾಗಲಾಪೂರ, ಡಾ. ಜಿ. ಎಸ್​. ಹಿರೇಮಠ, ನೀಲವ್ವ ಜವಳಿ, ಅನ್ನರ್ಪೂಣ ವರವಿ, ಪರಪ್ಪ ಗುಡಿಸಾಗರ, ಸುವರ್ಣಾ ವಸ್ತ್ರದ, ವೀರನಗೌಡ ಚಂದ್ರಗೌಡ್ರ, ಪರಪ್ಪ ಉಮಚಗಿ, ಬಸವರಾಜ ತಿರ್ಲಾಪೂರ, ವಿಜಯ ಹುಬ್ಬಳ್ಳಿಮಠ, ಶೈಲಾ ಅಬ್ಬಿಗೇರಿ, ಸುರೇಶ ಶೆಟ್ಟರ, ಮಲ್ಲಣ್ಣ ಸಿಕ್ಕೇದೇಸಾಯಿ, ಅತಾ ಹಿರೇಮಠ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net