ಯುವಕರು ಸನ್ಮಾರ್ಗದಲ್ಲಿ ಮುನ್ನಡೆಯಲು ಸನ್ನದ್ಧಗೊಳಿಸಬೇಕು

05GDG02
Published on

ಸಿದ್ಧಾಂತ ಶಿಖಾಮಣಿ ಆಧ್ಯಾತ್ಮಿಕ ಪ್ರವಚನದಲ್ಲಿ ಅಡ್ನೂರ ಶ್ರೀಗಳ ಅಭಿಮತ

ವಿಜಯವಾಣಿ ಸುದ್ದಿಜಾಲ ಗದಗ

ಯುವಕರನ್ನು ಆಧ್ಯಾತ್ಮಿಕ ಹಾಗೂ ಧಾಮಿರ್ಕ ಕಾರ್ಯಗಳಲ್ಲಿ ತೊಡಗಿಸುವ ಮೂಲಕ ಅವರನ್ನು ಧರ್ಮದ ಸನ್ಮಾರ್ಗದಲ್ಲಿ ಮುನ್ನಡೆಯುವಂತೆ ಸನ್ನದ್ಧಗೊಳಿಸುವದು ಎಂದಿಗಿಂತ ಇಂದು ಅವಶ್ಯವಿದೆ ಎಂದು ಅಡ್ನೂರ ರಾಜೂರ ಗದಗ ಬೃಹನ್ಮಠದ ಅಭಿನವ ಪಂಚಾರ ಶಿವಾಚಾರ್ಯ ಸ್ವಾಮಿಗಳು ಹೇಳಿದರು.

ಗುರುವಾರ ನಗರದ ಗಾಣಿಗ ಭವನದಲ್ಲಿ ಏರ್ಪಡಿಸಿದ್ದ ಸಿದ್ಧಾಂತ ಶಿಖಾಮಣಿ ಆಧ್ಯಾತ್ಮಿಕ ಪ್ರವಚನ, ಕಾಶೀ ನೂತನ ಜಗದ್ಗುರುಗಳವರ ಆಷಾಡ ಮಾಸದ ಇಷ್ಟಲಿಂಗ ಮಹಾಪೂಜೆ ಕಾರ್ಯಕ್ರಮದ ನೇತೃತ್ವ ವಹಿಸಿ ಮಾತನಾಡಿದ ಅವರು, ಪ್ರವಚನಕ್ಕೆ ಬಂದವರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಯೋಮಾನ ಹಾಗೂ ಮಧ್ಯ ವಯಸ್ಕರರು. ಇವರೊಂದಿಗೆ ಯುವಕರೂ ಇಂತಹ ಇಷ್ಟಲಿಂಗ ಮಹಾಪೂಜೆ ಆಧ್ಯಾತ್ಮಿಕ ಪ್ರವಚನ ಕಾರ್ಯಕ್ರಮದಲ್ಲಿ ಪಾಲ್ಗೋಳ್ಳಬೇಕು. ಅಂದಾಗ ಅವರಲ್ಲಿ ಧರ್ಮ ಸಂಸ್ಕಾರ, ಆಧ್ಯಾತ್ಮಿಕ ಸಂಸತಿ ತಿಳಿಯುವದು. ಆ ಮೂಲಕ ಅವರಲ್ಲಿ ಸದ್ಗುಣಗಳು ಬಂದು ಅವರು ಜೀವನಲ್ಲಿ ಸತಜೆಗಳಾಗಿ ಬಾಳಲು ಪೂರಕವಾಗುವದು ಎಂದರು.

ನರೇಗಲ್​ ಹಿರೇಮಠದ ಮಲ್ಲಿಕಾರ್ಜುನ ಶಿವಾಚಾರ್ಯ ಶ್ರೀಗಳು ಸಿದ್ದಾಂತ ಸಿಖಾಮಣಿ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿ, ಭಯ ದುರ್ಗುಣಗಳ ಸೇನಾಧಿಪತಿಯಾಗಿದ್ದು ಸತ್ಯ ಮತ್ತು ಪ್ರಾಮಾಣಿಕತೆಯಿಂದ ಜೀವನ ಮಾಡುವವರು ಯಾವುದಕ್ಕೂ ಭಯಪಡುವ ಅಗತ್ಯವಿಲ್ಲ. ಸತ್ಯ ಪರಿಪಾಲನೆ ಅಗತ್ಯವಿದೆ. ಸತ್ಯದಿಂದ ನಡೆಯುವದೂ ಸಹ ಒಂದು ತಪಸ್ಸು ಇದ್ದಂತೆ ಎಂದರು.

ಸಾನಿಧ್ಯ ವಹಿಸಿ ಮಾತನಾಡಿದ ಜಂಗಮವಾಡಿಮಠ ವಾರಣಾಸಿ ಕಾಶೀ ಮಹಾಪೀಠದ ಜ.ಡಾ.ಮಲ್ಲಿಕಾರ್ಜುನ ವಿಶ್ವಾರಾಧ್ಯ ಶಿವಾಚಾರ್ಯ ಭಗವತ್ಪಾದಂಗಳವರು ಸತ್ಯ, ನಿಷ್ಠೆ, ಪ್ರಾಮಾಣಿಕತೆಯುಳ್ಳವರು ಜೀವನದಲ್ಲಿ ಯಶಸ್ಸನ್ನು ಸಾಧಿಸಬಲ್ಲರು. ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಜ್ಞಾನಾರ್ಜನೆಗೆ ಹಾಗೂ ಸತ್ಕಾರ್ಯಗಳಿಗೆ ಸದುಪಯೋಗ ಮಾಡಿಕೊಳ್ಳಬೇಕು. ಇಂದು ಮೊಬೈಲ್​ ಬಂದು ಸುಳ್ಳು ಹೇಳುವದನ್ನು ಇನ್ನಷ್ಟು ಸುಗಮಗೊಳಿಸಿದೆ, ಆದರೆ ಸುಳ್ಳು ಸದಾವಕಾಲ ಲಿಸದು. ಅದರಿಂದ ಹಾನಿಯೇ ಹೆಚ್ಚು. ಆದ್ದರಿಂದ ಮನೆಯಲ್ಲಿ ಹಿರಿಯರು ಸತ್ಯವನ್ನು ಮಾತನಾಡುವ ಮೂಲಕ ಮಕ್ಕಳಿಗೂ ಅಂತಹ ಸಂಸ್ಕಾರವನ್ನು ರೂಢೀಸಬೇಕು ಎಂದರು.

ಪ್ರಭುಸ್ವಾಮಿ ದಂಡಾವತಿಮಠ, ಸಿದ್ಧರಾಮೇಶ್ವರ ಬಾರಕೇರ, ಕೆ. ಎಸ್​. ಕೋರಿಮಠ, ಶರಣಪ್ಪ ಕುರಡಗಿ, ಮಲ್ಲಿಕಾರ್ಜುನ ಸುರಕೋಡ, ಶಿವಯೋಗಿ ತೆಗ್ಗಿನಮಠ, ಪ್ರಶಾಂತ ತಂಬ್ರಳ್ಳಿಮಠ, ಚನ್ನಬಸವರಾಜ ಹಿರೇಮಠ, ಪ್ರವಿಣ ಚನ್ನಳ್ಳಿಮಠ, ಕ್ಕೀರಯ್ಯಶಾಸ್ತ್ರಿ ಹಿರೇಮಠ, ರೋಹಿತ ಅಬ್ಬಿಗೇರಿ, ಆಂಜನೇಯ ಕಟಗಿ, ರಾಜಶೇಖರ ಮುಧೋಳ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಮಂಗಳಾ ಯಾನಮಶೆಟ್ಟಿ, ಶರಣಬಸಪ್ಪ ಗುಡಿಮನಿ, ವಿ. ಕೆ. ಗುರುಮಠ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net