

ವಿಜಯವಾಣಿ ಸುದ್ದಿಜಾಲ ಗದಗ
ಸಿದ್ಧಲಿಂಗ ನಗರದ ಸರ್ಕಾರಿ ಪ್ರೌಢಶಾಲೆಯ ಮಣಿಕಂಠ ಕಸ್ತೂರಿಯು ಪ್ರಸಕ್ತ ಸಾಲಿನ ಆಕ್ಸರ್ಡ ಮ್ಯಾಟಸರ್ ಆವಾರ್ಡ, 50 ಸಾವಿರ ನಗದು ಬಹುಮಾನ ಪುರಸ್ಕಾರ ಪಡೆಯುವುದರ ಜೊತೆಗೆ ಶಾಲೆಯ ಕೀತಿರ್ ಹೆಚ್ಚಿಸಿದ್ದಾರೆಂದು ಶಿಕಿ ವಿಜಯಲಕ್ಷಿ$್ಮ ಅಣ್ಣಿಗೇರಿ ತಿಳಿಸಿದರು.
ವಿಜಯಪುರ ಜಿಲ್ಲೆಯ ಆಕ್ಸರ್ಡ ಪಾಟೀಲ್ಸ್ ಸಂಸ್ಥೆಯು ಪ್ರತಿವರ್ಷ 10ನೇ ತರಗತಿಯ ವಿದ್ಯಾಥಿರ್ಗಳಿಗಾಗಿ ಆಂಗ್ಲ, ವಿಜ್ಞಾನ ಮತ್ತು ಗಣಿತ ವಿಷಯಗಳ ಕುರಿತು ಏರ್ಪಡಿಸುವ ಸ್ಪರ್ಧೆಯಲ್ಲಿ ವಿಜೇತ ವಿದ್ಯಾಥಿಗಳಿಗೆ ನೀಡುವ ನಗದು ಪುರಸ್ಕಾರವನ್ನು ಈ ಬಾರಿ ನಗರದ ಮಣಿಕಂಠ ಪಡೆದಿದ್ದಾರೆ. ಗದಗ ನಗರದಲ್ಲಿ ಪ್ರಸಕ್ತ ಸಾಲಿನ ರಾಜ್ಯಮಟ್ಟದ ಸ್ಪರ್ದೇಯಲ್ಲಿ ಭಾಗವಹಿಸಿದ್ದ 3000 ಕ್ಕೂ ಹೆಚ್ಚು ವಿದ್ಯಾಥಿರ್ಗಳಲ್ಲಿ ಮಣಿಕಂಠ ಕಸ್ತೂರಿ ಪ್ರಥಮ ಸ್ಥಾನ ಪಡೆದು ಶಾಲೆಗೆ ಕೀತಿರ್ ತಂದಿದ್ದಾರೆ ಎಂದರು.
ಡಾ. ಬಸವರಾಜ ಧಾರವಾಡ ಮಾತನಾಡಿ, ಸಭಾಪತಿ ಬಸವರಾಜ ಹೊರಟ್ಟಿಯವರು ಈ ಶಾಲೆಯನ್ನು ದತ್ತುಪಡೆದ ನಂತರ ಶಾಲೆಗೆ ಹೆಚ್ಚಿನ ಕಳೆ ಬಂದಿದೆ. ಜತೆಗೆ ಕಲಿಕೆಗೆ ಪೂರಕವಾದ ಉತಷ್ಟ ವಾತಾವರಣ ಶಾಲಾ ಆವರಣದಲ್ಲಿ ಮೂಡಿದೆ. ಅದರ ಪರಿಣಾಮದಿಂದಾಗಿ ಜಿಲ್ಲೆಯಲ್ಲಿಯೇ ಒಂದು ಮಾದರಿ ಶಾಲೆಯಾಗಿ ಹೊರ ಹೊಮ್ಮುವುದರ ಜೊತೆಗೆ ಇಲ್ಲಿಂದ ಪ್ರತಿಭಾವಂತ ವಿದ್ಯಾಥಿರ್ಗಳು ಹೆಚ್ಚೆಚ್ಚು ತಮ್ಮ ಪ್ರತಿಭೆಯನ್ನು ತೋರಿಸಿ ಸಾಧನೆ ಮಾಡುತ್ತಿರುವುದು ಈ ಶಾಲೆಯ ಕೀತಿರ್ಯನ್ನು ಬೆಳಗಿಸುತ್ತಿದ್ದಾರೆ ಎಂದರು.
ವಿದ್ಯಾಥಿರ್ ಮಣಿಕಂಠ ಕಸ್ತೂರಿ ಹಾಗೂ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ರಂಗೋಳಿ ಸ್ಪರ್ಧೇಯಲ್ಲಿ ಭಾಗವಹಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾದ ರಾಧಿಕಾ ಮೊರಬ ಅವರನ್ನು ಸನ್ಮಾನಿಸಲಾಯಿತು.
ಪಾರ್ವತಿ ವಸ್ತ್ರದ, ಎಂ. ಐ. ಶಿವನಗೌಡ, ರಮೇಶ್ ಬಸರಿ, ನಾಗಪ್ಪ ಶಿರೋಳ, ಶಂಕ್ರಮ್ಮ ಹನುಮಗೌಡ, ಸಂಜೀವಿನಿ ಕೂಲಗುಡಿ, ಶೋಭಾ ಗಾಳಿ ಹಲವರು ಇದ್ದರು.