

ವಿಜಯವಾಣಿ ಸುದ್ದಿಜಾಲ ಗದಗ
ಸ್ವಚ್ಛ ಭಾರತ ಅಭಿಯಾನ ಯಶಸ್ವಿಯಾಗಬೇಕಾದರೆ ಶಾಲಾ ಹಂತದಿಂದಲೇ ಸ್ವಚ್ಛತೆಯ ಮಹತ್ವ ಹಾಗೂ ಅರಿವು ಮೂಡಿಸುವಂತಾಗಬೇಕು. ಸ್ವಚ್ಚತೆಯ ಅರಿವಿನಿಂದ ಸುಂದರ ಸ್ವಚ್ಛ ಉತ್ತಮ ನೈಸಗಿರ್ಕ ವಾತಾವರಣ ಕಾಣಲು ಸಾಧ್ಯ ಎಂದು DDPI ಮುತ್ತಣ್ಣ ರಡ್ಡೇರ್ ಹೇಳೀದರು.
ಸಿದ್ದಲಿಂಗ ನಗರದ ಸರ್ಕಾರಿ ಪ್ರೌಢಶಾಲೆಯಲ್ಲಿ ಗುರುವಾರ ಸ್ವಚ್ಛತಾ ಪರಿಕರಗಳನ್ನು ವಿತರಿಸಿ ಮಾತನಾಡಿದ ಅವರು, ಸ್ವಚ್ಛತೆ ಇಂದು ಅತೀ ಮಹತ್ವದ ಸಂಗತಿ. ಶುಚಿತ್ವ ಕಾಪಾಡಿಕೊಳ್ಳದೇ ಹೋದರೆ ಅದು ಆರೋಗ್ಯದ ಮೇಲೆ ಸಾಕಷ್ಟು ದುಷ್ಪರಿಣಾಮ ಉಂಟು ಮಾಡುತ್ತದೆ. ಶಾಲೆಯಲ್ಲಿ ಉತ್ತಮ ವಾತಾವರಣ ಸೃಷ್ಟಿ ಆಗಬೇಕಾದರೆ ಉತ್ತಮ ಕಲಿಕೆಗೆ ಶಾಲಾ ಆವರಣ ಸುಂದರವಾಗಿ ಇರಬೇಕು. ವಿದ್ಯಾಥಿರ್ಗಳು ನಿತ್ಯ ಖುಷಿ ಖುಷಿಯಿಂದ ಪಾಠ ಕೇಳಲು ಸಾಧ್ಯ. ಶಿಕರು ಪರಿಣಾಮಕಾರಿ ಬೋಧಿಸಲು ಸಾಧ್ಯ ಎಂದರು.
ಜಿಲ್ಲಾ ಸಂಖ್ಯಾ ಸಂಗ್ರಹಣಾ ಅಧಿಕಾರಿ ಎ.ಎ. ಕಂಬಾಳಿಮಠ ಮಾತನಾಡಿ, ಸಭಾಪತಿ ಬಸವರಾಜ ಹೊರಟ್ಟಿಯವರು ಸರ್ಕಾರಿ ಶಾಲೆಯನ್ನು ದತ್ತುಪಡೆಯುವ ಮೂಲಕ ಶಾಲೆಯ ಕಳೆಯೇ ಬದಲಾಯಿಸಿದ್ದಾರೆ. ಖಾಸಗಿ ಶಾಲೆಯನ್ನು ಮೀರುವಂತೆ ಕೆಲವೇ ತಿಂಗಳಲ್ಲಿ ಬದಲಾಗಿದ್ದು ಸಾಕಷ್ಟು ಖುಷಿ ತಂದಿದೆ. ಈ ಶಾಲೆಯೊಂದಿಗೆ ಕಳೆದ 30 ವರ್ಷಗಳಿಂದ ಸಂಬಂಧ, ಒಡನಾಟ ನನಗೆ ಇದೆ. ಇಂದು ಶಾಲಾ ವಾತಾವರಣ ನೋಡಿದಾಗ ಸಾಕಷ್ಟು ಖುಷಿಯಾಯಿತು. ಇದರ ಸದುಪಯೋಗವನ್ನು ವಿದ್ಯಾಥಿರ್ಗಳು ಪಡೆದು ಉತ್ತಮ ಸಾಧನೆ ಮಾಡಲಿ ಎಂದರು.
ಡಾ.ಬಸವರಾಜ ಧಾರವಾಡ ಪ್ರಾಸ್ತಾವಿಕವಾಗಿ ಮಾತನಾಡಿ, ಸಭಾಪತಿ ಬಸವರಾಜ ಹೊರಟ್ಟಿಯವರ ಸಂಕಲ್ಪದಂತೆ ಈ ಶಾಲೆ ಕೆಲವೇ ದಿನಗಳಲ್ಲಿ ಅಭಿವೃದ್ಧಿ ಹೊಂದಿ ಎಲ್ಲ ಮೂಲಭೂತ ಸೌಕರ್ಯಗಳನ್ನು ಹೊಂದಿದೆ. ಇದಕ್ಕೆ ಕಾರಣೀಕರ್ತರಾದ ಹೊರಟ್ಟಿಯವರನ್ನು ಅಭಿನಂದಿಸುವುದಾಗಿ ಹೇಳಿದರು.
ಇದೇ ಸಂದರ್ಭದಲ್ಲಿ ದಾನಿಗಳಾದ ಸುನೀಲ ವೆರ್ಣೇಕರ್ ಅವರನ್ನು ಶಾಲೆಯ ಪರವಾಗಿ ಗೌರವಿಸಲಾಯಿತು. ಪಾರ್ವತಿ ವಸ್ತ್ರದ, ಎಸ್. ಆರ್. ಹನಮಗೌಡ್ರ, ಎಂ. ಪಿ. ಸಾಂಬ್ರಾಣಿ, ಎಸ್. ಬಿ. ಗುಳೇದವರ, ಎಸ್. ಎಂ.ಪತ್ತಾರ, ಎಸ್. ಎ. ಬಾಣದ, ಎಸ್. ಎ. ಗದ್ದನಕೇರಿ, ಎನ್. ಆರ್. ಶಿರೋಳ, ಎಸ್. ಯು. ಕುಷ್ಟಗಿ, ಜಿ. ಎನ್. ಅಳವಂಡಿ, ಪಿ. ವಿ. ದಾಸರ ಹಲವರು ಇದ್ದರು.