ಪಾಲಕರ ವಿಶ್ವಾಸ ಹೆಚ್ಚಿಸಿದ ಸಿದ್ಧಲಿಂಗನಗರ ಸರ್ಕಾರಿ ಪ್ರೌಢ ಶಾಲೆ: ಸಂತೋಷ ಪಾಟೀಲ

30GDG05
Published on

ವಿಜಯವಾಣಿ ಸುದ್ದಿಜಾಲ ಗದಗ
ಸರ್ಕಾರಿ ಶಾಲೆಗಳ ಬಗ್ಗೆ ಸಾರ್ವಜನಿಕರಲ್ಲಿ ಇನ್ನೂ ನಂಬಿಕೆ ಮೂಡುತ್ತಿಲ್ಲ. ಆದರೆ ಅದಕ್ಕೆ ಅಪವಾದ ಎನ್ನುವಂತೆ ಸಿದ್ಧಲಿಂಗ ನಗರದ ಸರ್ಕಾರಿ ಪ್ರೌಢ ಶಾಲೆಯು ಪಾಲಕರಲ್ಲಿ ಸಾಕಷ್ಟು ವಿಶ್ವಾಸ, ನಂಬಿಕೆ, ಭರವಸೆ ಮೂಡಿಸುತ್ತಿದೆ ಎಂದು ಸಮಗ್ರ ಶಿಣ ಕರ್ನಾಟಕ ಯೋಜನೆ ಪ್ರಧಾನಮಂತ್ರಿ ಪೋಷಣಾ ಶಕ್ತಿ ನಿರ್ಮಾಣ ಯೋಜನೆಯ ತಾಲೂಕಾ ಕಾರ್ಯಕ್ರಮದ ವ್ಯವಸ್ಥಾಪಕ ಸಂತೋಷ ಪಾಟೀಲ ಹೇಳಿದರು.
ಸಿದ್ದಲಿಂಗ ನಗರದ ಸರ್ಕಾರಿ ಪ್ರೌಢಶಾಲೆಯಲ್ಲಿ ಆಯೋಜಿಸಿದ ಸಾಮಾಜಿಕ ಪರಿಶೋಧನೆಯ ಕುರಿತು ಪಾಲಕರೊಂದಿಗೆ ನಡೆದ ಚಿಂತನ&ಮಂಥನ ಸಭೆಯಲ್ಲಿ ಅವರು ಮಾತನಾಡಿ, ನಾಲ್ಕು ದಿನಗಳಿಂದ ಸರ್ಕಾರಿ ಪ್ರೌಢಶಾಲೆ ಕುರಿತು ಸಮಗ್ರವಾಗಿ ಪರಿಶೀಲಿಸಲಾಯಿತು. ಕಲಿಕೆ, ಮೂಲಭೂತ ಸೌಕರ್ಯಗಳು, ಗುಣಮಟ್ಟದ ಶಿಣ ಹೀಗೆ ಎಲ್ಲ ರೀತಿಯಿಂದ ನೋಡಿದಾಗ ಈ ಶಾಲೆ ಒಂದು ಮಾದರಿ ಶಾಲೆಯಾಗಿ ಮೂಡಿಬರುವ ಮೂಲಕ ಸಾರ್ವಜನಿಕರಲ್ಲಿ ಸಾಕಷ್ಟು ವಿಶ್ವಾಸ ಮೂಡಿಸಿದೆ. ನಮ್ಮ ತಪಾಸಣಾ ತಂಡ ನ್ಯೂನ್ಯತೆಗಳನ್ನು ಹುಡುಕುವ ಸಾಕಷ್ಟು ಪ್ರಯತ್ನ ಮಾಡಿದರೂ ಒಂದೂ ನ್ಯೂನ್ಯತೆಯು ಸಿಗಲಿಲ್ಲ. ಹೀಗಾಗಿ ಈ ಶಾಲೆ ರಾಜ್ಯದಲ್ಲಿಯೇ ಒಂದು ಮಾದರಿ ಶಾಲೆಯಾಗಿ ಕೆಲವೇ ದಿನಗಳಲ್ಲಿ ಹೊರಹೊಮ್ಮಲಿದೆ. ಇಂಥಹ ಪ್ರಯತ್ನಗಳು ಎಲ್ಲ ಕಡೆ ಆಗಲಿ ಎಂದು ಆಶಿಸಿದರು.
ಕಾರ್ಯಕ್ರಮದ ಅಧ್ಯತೆ ವಹಿಸಿದ್ದ ತೋಟಗಾರಿಕೆ ಇಲಾಖೆ ಅಧಿಕಾರಿ ಶಂಭುಲಿಂಗ ನೆಗಳೂರು ಮಾತನಾಡಿ, ಇಲ್ಲಿ ಶಿಣ ಪಡೆಯುತ್ತಿರುವ 450 ಕ್ಕೂ ಹೆಚ್ಚು ವಿದ್ಯಾಥಿರ್, ವಿದ್ಯಾಥಿರ್ನಿಯರು ಅದೃಷ್ಟವಂತರು. ಇಲ್ಲಿನ ಎಲ್ಲ ಸೌಲಭ್ಯಗಳನ್ನು ವಿದ್ಯಾಥಿರ್ಗಳು ಸದುಪಯೋಗ ಪಡಿಸಿಕೊಂಡು ಸುಂದರವಾದ ಭವಿಷ್ಯವನ್ನು ರೂಪಿಸಿಕೊಳ್ಳಬೇಕೆಂದು ಕರೆ ನೀಡಿದರು.
ಬಸವರಾಜ ಧಾರವಾಡ, ಎಂ. ಎ ರಡ್ಡೇರ, ಆರ್​. ಎಸ್​. ಬುರಡಿ, ವಿದ್ಯಾವತಿ ಗಡಗಿ, ಎಸ್​. ಎಂ. ಅಗಡಿ, ಜಯಲಕ್ಷಿ$್ಮ ಅಣ್ಣಿಗೇರಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net