

ಗದಗ: ಭಾರತೀಯ ಸಂಸ್ಕೃತಿ ಹಬ್ಬಗಳ ಆಚರಣೆಗಳ ಹಿಂದೆ ಸತ್ಯದ ಅರ್ಥಗಳಿವೆ. ನಮ್ಮ ಸಂಸ್ಕೃತಿ ಆಚರಣೆಗಳು ನಶಿಸುವ ಹಂತದಲ್ಲಿದ್ದು ಶಿವಾನುಭವದಂತಹ ಕಾರ್ಯಕ್ರಮಗಳು ಪುನರ್ಜಿವನ ನೀಡುವ ಕಾರ್ಯ ಮಾಡುತ್ತವೆ ಎಂದು ಬ್ರಹ್ಮಕುಮಾರಿ ಜಯಂತಿ ಅಕ್ಕನವರು ಹೇಳಿದರು.
ಅವರು ಗದುಗಿನ ಅಡವೇಂದ್ರ ಸ್ವಾಮಿ ಮಠದಲ್ಲಿ ಜರುಗಿದ 327ನೇ ಶಿವಾನುಭವದಲ್ಲಿ ರಕ್ಷಾ ಬಂಧನ ಹಾಗೂ ಹಬ್ಬಗಳ ಮಹತ್ವ ಕುರಿತು ಉಪನ್ಯಾಸ ನೀಡಿದರು. ಪ್ರತಿ ಸ್ತಿçÃಯನ್ನು ಕಂಡಾಗಲೂ ಸಹೋದರಿ ಭಾವನೆ ಬೆಳೆಯಬೇಕು. ಹೀಗಾಗಿ ಪುರಾಣ, ಇತಿಹಾಸ, ಧರ್ಮಗಳಲ್ಲಿ ರಕ್ಷಾಬಂಧನ ಕುರಿತು ಉಲ್ಲೇಖಗಳಿವೆ ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ತೋಟಗಾರಿಕೆ ಇಲಾಖೆಯ ನಿವೃತ್ತ ನಿರ್ದೇಶಕ ವಿರೇಶ ಕುಂಬಾರ ಮಾತನಾಡಿ ನಮ್ಮ ಆಚಾರ-ವಿಚಾರ-ಸಂಸ್ಕೃತಿಗಳಿಗೆ ಮಧುರ ಬಾಂಧವ್ಯಕ್ಕೆ ಬೆಲೆ ಕೊಡುವ ವ್ಯಕಿಗಳು ಉನ್ನತ ವ್ಯಕ್ತಿಗಳಾಗುತ್ತಾರೆ. ಮಠ ಮಾನ್ಯಗಳು ವ್ಯಕ್ತಿಯಲ್ಲಿ ದೈವತ್ವವನ್ನು ಉಂಟು ಮಾಡುತ್ತವೆ ಎಂದರು.
ಸಾಮುಖ್ಯ ವಹಿಸಿದ್ದ ಶ್ರೀಮಠದ ಧರ್ಮದರ್ಶಿ ವೇ.ಮೂ ಮಹೇಶ್ವರ ಸ್ವಾಮಿಜಿ ಮಾತನಾಡಿ ದೇಹವನ್ನು ಅಂತರ್ಮುಖಿಯಾಗಿ ಆಧ್ಯಾತ್ಮಿಕ ದೃಷಿಕೋನದಲ್ಲಿ ಭಕ್ತಿ ಭಾವದಿಂದ ಭಗವಂತನ ಪ್ರಾರ್ಥನೆಯನ್ನು ಮಾಡಿದಾಗ ಮನುಷ್ಯನಲ್ಲಿ ದೈವತ್ವದ ಗುಣಗಳು ಮೂಡಿ ಬರುತ್ತವೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಶಿವಾನುಭವ ಸಮಿತಿಯ ಅಧ್ಯಕ್ಷ ಡಾ.ಎಸ್.ಕೆ.ನಾಲ್ವತ್ತವಾಡಮಠ ಮಾತನಾಡಿ ಶಿವಾನುಭವಗಳು ಸಾಮಾನ್ಯರಲ್ಲಿ ಆಧ್ಯಾತ್ಮದ ಅರಿವನ್ನು ಉಂಟುಮಾಡಿ ಅವರಲ್ಲಿ ಮೌಲ್ಯಗಳನ್ನು ತುಂಬುತ್ತವೆ ಎಂದರು. ವಿರೇಶ ಕುಂಬಾರ ಹಾಗೂ ನಿವೃತ್ತಿ ಹೊಂದಿದ ಶ್ರೀಮತಿ ಜಿ.ಎಸ್.ಮುಧೋಳ, ಯಮನಪ್ಪ ರತ್ನಗಿರಿ ಅವರನ್ನು ಸನ್ಮಾನಿಸಲಾಯಿತು.
ಸಿದ್ದಣ್ಣ ಜವಳಿ ಪ್ರಾರ್ಥಿಸಿದರು. ಶಿವಾನುಭವ ಸಮಿತಿ ಕಾರ್ಯದರ್ಶಿ ಬಿ.ಬಿ.ತೋಟಗೇರ ಸ್ವಾಗತಿಸಿದರು. ಪ್ರಭುಗೌಡ ಪಾಟೀಲ ವಂದಿಸಿದರು. ಭಕ್ತಿಸೇವೆಯನ್ನು ವೀರಣ್ಣ ಉಪ್ಪಿನ, ಪ್ರಭುಗೌಡ ಪಾಟೀಲ ಹಾಗೂ ಪ್ರಕಾಶ ಬಂಡಿ ವಹಿಸಿದ್ದರು.