

ವಿಜಯವಾಣಿ ಸುದ್ದಿಜಾಲ ಗದಗ
ಇಂದು ಪ್ರಜಾಪ್ರಭುತ್ವ ವ್ಯವಸ್ಥೆಯಿದೆ. ಆದರೆ, 12ನೇ ಶತಮಾನದಲ್ಲಿ ಪ್ರಭುತ್ವ ವ್ಯವಸ್ಥೆಯ ಮಧ್ಯದಲ್ಲಿಯೂ ಬಸವಣ್ಣನವರು ವಚನಗಳ ಮೂಲಕ ಸಮಾಜದಲ್ಲಿನ ಅಂಧಕಾರವನ್ನು ಅಳಿಸಿ ಹೊಸ ಬೆಳಕು ಕೊಟ್ಟರು ಎಂದು ತೋಂಟದ ಸಿದ್ಧರಾಮ ಶ್ರೀಗಳು ಹೇಳಿದರು.
ತೋಂಟದಾರ್ಯ ಮಠದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಶಿವಾನುಭವನ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ವೈಜ್ಞಾನಿಕ ಯುಗದಲ್ಲಿಯೂ ಮೌಢ್ಯಗಳನ್ನು ಆಚರಣೆ ಮಾಡುವ ಪದ್ಧತಿಯನ್ನು ಕಾಣುತ್ತೇವೆ. ಸಮಾಜದಲ್ಲಿನ ಅಜ್ಞಾನ ಮೂಢನಂಬಿಕೆ ಅಳಿಸಬೇಖು ಎಂಬುದು ವಚನಗಳ ಮೂಲಕ ತಿಳಿಸಿಕೊಟ್ಟಿದ್ದಾರೆ ಎದರು.
ಸರ್ಕಾರಿ ಪದವಿಪೂರ್ವ ಕಾಲೇಜಿನ ಡಾ. ಬಿ. ಎಂ. ಮರಳಿಹಳ್ಳಿ ಮಾತನಾಡಿ, ಮೌಢ್ಯಗಳನ್ನು ವಿರೋಧಿಸುವ ವಚನಗಳು ಇಂದಿಗೂ ಪ್ರಸ್ತುತ. ಹಾವಾಡಿಗ, ಬೆಕ್ಕು, ಮೂಕೊರತಿ ಎದುರಿಗೆ ಬಂದರೆ ಅಪಶಕುನ ಎನ್ನುವ ಸಮಾಜಕ್ಕೆ ಬಸವಣ್ಣನವರು ವಚನಗಳ ಮೂಲಕ ತಕ್ಕ ಉತ್ತರ ಕೊಟ್ಟಿದ್ದಾರೆ. ಅನುಭವಕ್ಕೆ ವ್ನಿಗಳಿಲ್ಲ. ಆತ್ಮ ಕೇಂದ್ರಿತ ಪ್ರಜ್ಞೆಯನ್ನು ನಿರಾಕರಿಸಿ, ದೇಹ ಕೇಂದ್ರಿತವಾದ ಪ್ರಜ್ಞೆಯನ್ನು ಸಾರಿದರು. ಅರಿವೆ ಗುರು ಶರಣರ ದಿವ್ಯ ಸಂದೇಶವಾಗಿತ್ತು ಎಂದು ಮಾತನಾಡಿದರು.
ವಿಜಯಮ ಹಾಂತದೇವರು ಹಿರೇಮಠ ಅವರು ಮಾತನಾಡಿ, ಶ್ರಾವಣ ಮಾಸದ ನಿಮಿತ್ಯ ವಚನ ಚಿಂತನದ ಪ್ರವಚನ ಮಾಡಿದರು. ಡಾ. ಧನೇಶ ದೇಸಾಯಿ, ಶೈಲಾ ಕೋಟೆಕಲ್ಲ, ಶಿವಣ್ಣ ಕತ್ತಿ, ಸಿದ್ದರಾಮಪ್ಪ ಗೊಜನೂರ, ಬಾಲಚಂದ್ರ ಭರಮಗೌಡ್ರ, ಡಾ. ಉಮೇಶ ಪುರದ, ವಿದ್ಯಾ ಗಂಜಿಹಾಳ, ವೀರಣ್ಣ ಗೋಟಡಕಿ, ಸೋಮನಾಥ ಪುರಾಣಿಕ, ನಾಗರಾಜ ಹಿರೇಮಠ ಇತರರು ಇದ್ದರು
ಪೋಟೋ 04ಜಿಡಿಜಿ04
ಗದಗ ತೋಂಟದಾರ್ಯ ಮಠದಲ್ಲಿ ಏರ್ಪಡಿಸಿದ್ದ ಶಿವಾನುಭ ಕಾರ್ಯಕ್ರಮದಲ್ಲಿ ಡಾ. ಬಿ. ಎಂ. ಮರಳಿಹಳ್ಳಿ ಮಾತನಾಡಿದರು. ತೋಂಟದಾರ್ಯ ಮಠದ ಶ್ರೀಗಳು, ವಿಜಯಮ ಹಾಂತದೇವರು, ಡಾ. ಧನೇಶ ದೇಸಾಯಿ, ಶೈಲಾ ಕೋಟೆಕಲ್ಲ, ಶಿವಣ್ಣ ಕತ್ತಿ, ಸಿದ್ದರಾಮಪ್ಪ ಗೊಜನೂರ, ಬಾಲಚಂದ್ರ ಭರಮಗೌಡ್ರ, ಡಾ. ಉಮೇಶ ಪುರದ, ವಿದ್ಯಾ ಗಂಜಿಹಾಳ, ವೀರಣ್ಣ ಗೋಟಡಕಿ, ಸೋಮನಾಥ ಪುರಾಣಿಕ, ನಾಗರಾಜ ಹಿರೇಮಠ ಇತರರು ಇದ್ದರು