ಹಡಪದ ಅಪ್ಪಣ್ಣನವರು ನಿಜಸುಖಿಗಳು: ತೋಂಟದ ಸಿದ್ಧರಾಮ ಶ್ರೀಗಳು

13GDG04
Published on

ವಿಜಯವಾಣಿ ಸುದ್ದಿಜಾಲ ಗದಗ
ಕಾಯಕ, ದಾಸೋಹ, ಸಮಾನತೆ ಬಸವಾದಿ ಶಿವಶರಣರ ಸಿದ್ಧಾಂತಗಳಾಗಿವೆ. ಹಡಪದ ಅಪ್ಪಣ್ಣನವರು ಲಿಂಗಾನುಭಾವಿಗಳಾಗಿದ್ದರು. ಲಿಂಗಾಂಗ ಸಾಮರಸ್ಯದಲ್ಲಿ ಸಿಗುವ ಸುಖವನ್ನು ನಿತ್ಯವೂ ಅನುಭವಿಸಿ ನಿಜಸುಖಿಗಳಾಗಿದ್ದರು ಎಂದು ಡಾ. ತೋಂಟದ ಸಿದ್ಧರಾಮ ಶ್ರೀಗಳು ಹೇಳಿದರು.
ತೋಂಟದಾರ್ಯ ಮಠದಲ್ಲಿ ಏರ್ಪಡಿಸಿದ್ದ ಶಿವಾನುಭ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿದ ಶ್ರೀಗಳು, ಹಡಪದ ಅಪ್ಪಣ್ಣನವರು ಬಸವಣ್ಣನವರ ಪ್ರೀತಿಗೆ ಪಾತ್ರರಾಗಿದ್ದರು. ಅಪ್ಪಣ್ಣನವರು ಅನುಭಾವಿಗಳು, ತತ್ವವನ್ನು ಅರಿತವರು, ಶಿಸ್ತು, ಸೌಜನ್ಯ, ನಯ ವಿನಯಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡವರು. ಹಡಪದ ಅಪ್ಪಣ್ಣನವರು ಪ್ರಾರಂಭದಿಂದಲೂ ಮಹಾ ಮಾನವತಾವಾದಿ ಬಸವಣ್ಣನವರ ಬದುಕಿನ ರಕರಾಗಿ, ಆಪ್ತ ಕಾರ್ಯದಶಿರ್ಯಾಗಿ, ಆಪ್ತಸಹಾಯಕರಾಗಿ, ಮಹಾಮನೆಯ ಮೇಲ್ವಿಚಾರಕರಾಗಿ ಕಾಯಕ ನಿರ್ವಹಿಸಿದ್ದಾರೆ. ಸಾವಿರಾರು ವಚನಗಳನ್ನು ಬರೆದಿದ್ದರೂ ಕೂಡಾ ಹಡಪದ ಅಪ್ಪಣ್ಣನವರ 250 ವಚನಗಳು, ಹಡಪದ ಲಿಂಗಮ್ಮನವರ 114 ವಚನಗಳು ಲಭ್ಯವಿವೆ. .ಗು. ಹಳಕಟ್ಟಿಯವರು ಸಂಗ್ರಹಿಸಿ, ಸಂಶೋಧಿಸಿ ಪ್ರಕಟಿಸಿದ ವಚನ ಸಾಹಿತ್ಯವನ್ನು ನಾಡಿನಾದ್ಯಂತ ಪ್ರವಚನದ ಮೂಲಕ ಪ್ರಚಾರ ಮಾಡಿದ ಶ್ರೇಯಸ್ಸು ಲಿಂ. ಪೂಜ್ಯ ಲಿಂಗಾನಂದ ಮಹಾಸ್ವಾಮಿಗಳಿಗೆ ಸಲ್ಲುತ್ತದೆ. ಬಸವಾದಿ ಶಿವಶರಣರ ತತ್ವಗಳನ್ನು, ಆದರ್ಶಗಳನ್ನು, ಮೌಲ್ಯಗಳನ್ನು ಜೀವನದಲ್ಲಿ ರೂಢಿಸಿಕೊಳ್ಳಬೇಕು ಎಂದು ಶ್ರೀಗಳು ಮಾತನಾಡಿದರು.
ಹಡಪದ ಅಪ್ಪಣ್ಣ ಕುರಿತು ಶಶಿಧರ ಕರವೀರಶೆಟ್ರ ಉಪನ್ಯಾಸ ನೀಡಿ ಮಾತನಾಡಿದರು, ಹಡಪದ ಅಪ್ಪಣ್ಣನವರಿಗೆ ಲಿಂಗತತ್ವ ಬದುಕಿನ ಜೀವಾಳವಾಗಿತ್ತು. ಇಡೀ ಬದುಕು ಲಿಂಗಮಯವಾಗಿತ್ತು. ಲಿಂಗತತ್ವದಲ್ಲಿ ನಿಜವಾದ ಸುಖವನ್ನು ಕಂಡಂತಹ ಅಪ್ಪಣ್ಣನವರು ನಿಜಸುಖಿಗಳಾಗಿದ್ದರು. ಅಪ್ಪಣ್ಣನವರ ಪುಣ್ಯಸ್ತ್ರೀ ಹಡಪದ ಲಿಂಗಮ್ಮನವರು ಸಹಿತ ಅಪ್ರತಿಮ ಶರಣೆಯಾಗಿದ್ದರು. ಹಡಪದ ಅಪ್ಪಣ್ಣನವರ ಜೀವನಾದರ್ಶಗಳನ್ನು ಅರಿತು ಬದುಕಿನಲ್ಲಿ ಅಳವಡಿಸಿಕೊಳ್ಳಲು ಪ್ರಯತ್ನಿಸಬೇಕು ಎಂದು ಮಾತನಾಡಿದರು.
ವಿ.ಬಿ. ಕೊಣ್ಣೂರು, ಟಿ. ವೈ. ಹಡಪದ, ಶ್ರೀನಿವಾಸ ಹಡಪದ, ಮೃತ್ಯುಂಜಯ ಹಿರೇಮಠ, ಗುರುನಾಥ ಸುತಾರ, ಮಂಜುನಾಥ ಹೂವಪ್ಪ ಗಜಾಕೋಶ, ಬಸವರಾಜ ಹಡಪದ, ಬಸವರಾಜ ತೋಟಪ್ಪ ಹಡಪದ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net