

ಹುಬ್ಬಳ್ಳಿ: ಗದಗ ಶ್ರೀ ಜಗದ್ಗುರು ಶಿವಾನಂದ ಬೃಹನ್ಮಠದ ಶ್ರೀ ಶಿವಾನಂದ ಸದ್ಧರ್ಮಜ್ಞಾನ ಪ್ರಚಾರಕ ಭಕ್ತ ಮಂಡಳಿ ಹಾಗೂ ಜಾತ್ರಾ ಮಹೋತ್ಸವ ಸಮಿತಿ ವತಿಯಿಂದ ಫೆ. 24ರಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಫೆ. 24ರಂದು ಸಂಜೆ 7ಕ್ಕೆ ಸದ್ಧರ್ಮ ಪರಿಷತ್ ಆಯೋಜಿಸಲಾಗಿದ್ದು, ಜಗದ್ಗುರು ಶ್ರೀ ಅಭಿನವ ಶಿವಾನಂದ ಸ್ವಾಮೀಜಿ, ಮುಂಡರಗಿ ಅನ್ನದಾನೀಶ್ವರ ಮಠದ ನಾಡೋಜ ಡಾ. ಜಗದ್ಗುರು ಅನ್ನದಾನೀಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಇಬ್ರಾಹಿಮಪುರದ ಸದ್ಗುರು ಶ್ರೀ ದಯಾನಂದ ಸ್ವಾಮೀಜಿ ಅಧ್ಯಕ್ಷತೆ ವಹಿಸುವರು.
ಫೆ. 25ರಂದು ಸಂಜೆ ನಡೆಯುವ ಸದ್ಧರ್ಮ ಪರಿಷತ್ ಸಾನ್ನಿಧ್ಯವನ್ನು ಶ್ರೀ ತೋಂಟದ ಸಿದ್ಧರಾಮ ಸ್ವಾಮೀಜಿ ವಹಿಸುವರು. ಕರಿಕಟ್ಟಿಯ ಡಾ. ಬಸವರಾಜ ಸ್ವಾಮೀಜಿ ಅಧ್ಯಕ್ಷತೆ ವಹಿಸುವರು.
ಫೆ. 26ರಿಂದ ಶ್ರೀ ಮಜ್ಜಗದ್ಗುರು ಶಿವಾನಂದ ಬೃಹನ್ಮಠದ 105ನೇ ಜಾತ್ರಾ ಮಹೋತ್ಸವ ಏರ್ಪಡಿಸಲಾಗಿದೆ. ರಾತ್ರಿ ಮಹಾಶಿವರಾತ್ರಿ ಜಾಗರಣಾ ಕಾರ್ಯಕ್ರಮ, ವಿವಿಧ ಕಲಾವಿದರಿಂದ ಸಂಗೀತ ಕಚೇರಿಗಳು ನಡೆಯಲಿವೆ.
ಫೆ. 27ರಂದು ಮಧ್ಯಾಹ್ನ 3.30ಕ್ಕೆ ಅಡ್ಡಪಲ್ಲಕ್ಕಿ ಉತ್ಸವ, ಸಂಜೆ 6ಕ್ಕೆ ಮಹಾರಥೋತ್ಸವ ಜರುಗಲಿದೆ. ವಿವಿಧ ವಾದ್ಯಮೇಳಗಳು, ಭಜನಾ ಮೇಳಗಳು, ಕಲಾ ತಂಡಗಳು ಸೇರಿ ಗದಗ ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಲಿವೆ.
ರಾತ್ರಿ 8ಕ್ಕೆ ಮಹಾತ್ಮರಿಂದ ಪ್ರವಚನ ಏರ್ಪಡಿಸಲಾಗಿದೆ. ರಾತ್ರಿ 10ಕ್ಕೆ ಶ್ರೀ ದುರ್ಗಾ ಪರಮೇಶ್ವರಿ ಕಲಾ ಕ್ಷೇಮಾಭಿವೃದ್ಧಿ ಸಂದ ವತಿಯಿಂದ ಸಂಪೂರ್ಣ ಹೇಮರಡ್ಡಿ ಮಲ್ಲಮ್ಮ ನಾಟಕ ಏರ್ಪಡಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.