

ವಿಜಯವಾಣಿ ಸುದ್ದಿಜಾಲ ಗದಗ
ನಿತ್ಯ ಇಷ್ಟ ಲಿಂಗ ಪೂಜೆ ಜೊತೆಗೆ ಕಾಯಕ ಮತ್ತು ದಾಸೋಹ ಸಂಸತಿ ಅಳವಡಿಸಿಕೊಳ್ಳಬೇಕು. ವೃತ್ತಿ ಧರ್ಮದಲ್ಲಿ ನಿಷ್ಠೆ ಪ್ರಾಮಾಣಿಕತೆ ಇರಿಸಿಕೊಂಡು, ಗಳಿಕೆ ಬಳಕೆ ಉಳಿಕೆ ತತ್ವದಡಿಯಲ್ಲಿ ಬದುಕಿದರೆ ನಿಜವಾದ ಶರಣ ಸಾಧಕ ಎನಿಸಿಕೊಳ್ಳುತ್ತಾರೆ ಎಂದು ವಿಭೂತಿ ಪತ್ರಿಕೆ ಸಂಪಾದಕ ಅಂದಾನೆಪ್ಪ ವಿಭೂತಿ ಹೇಳಿದರು.
ಸಿದ್ಧಲಿಂಗ ನಗರದ ಬಸವ ಯೋಗ ಮಂದಿರದಲ್ಲಿ ಬಸವಯೋಗ ಕೇಂದ್ರ ಮತ್ತು ಅಕ್ಕಮಹಾದೇವಿ ಯೋಗವಿಾನ ಕೇಂದ್ರ ಆಶ್ರಯದಲ್ಲಿ ಶುಕ್ರವಾರ ಏರ್ಪಡಿಸಿದ್ದ ವಚನ ಶ್ರಾವಣ, ವಚನ ವಿಶ್ಲೇಷಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಶರಣರು ಸತ್ಯವನ್ನೇ ನುಡಿಯುತ್ತಾರೆ. ವೃತ್ತಿ ಜ್ಞಾನವ ತಿಳಿದು ಬದುಕುತ್ತಾರೆ. ನಿತ್ಯವು ಲಿಂಗ ಪೂಜೆ ಮಾಡುತ್ತಾರೆ. ಅಂತಹ ಶರಣರ ತತ್ವಗಳನ್ನು ವಾರದ ಮಲ್ಲಪ್ಪನವರು, ಸಕ್ಕರೆ ಕರಡೆಪ್ಪನವರು, ಎಲೆ ಮಲ್ಲಪ್ಪ ಶೆಟ್ಟರು, ಎಸ್. ನಿಜಲಿಂಗಪ್ಪನವರು, ಬಿ. ಜಿ. ಅಣ್ಣಿಗೇರಿ ಗುರುಗಳು, ಗಳಂಗಳಪ್ಪ ಪಾಟೀಲ ಮುಂತಾದವರು ಅಳವಡಿಸಿಕೊಂಡಿದ್ದರು ಎಂದರು.
ಸಿದ್ಧರಾಮೇಶ ಪಟ್ಟೇದವರ ಅವರನ್ನು ಸನ್ಮಾನಿಸಲಾಯಿತು. ಅನರ್ಪೂಣ ವರವಿ, ವಿಜಯಲಕ್ಷ$್ಮ ಆನೆಹೊಸೂರ, ಸಂಗೀತಾ ನಾಕೋಡ, ಐ. ಕೆ. ಕಮ್ಮಾರ, ಎಸ್. ಎನ್. ಹಕಾರೆ, ಅಮರೇಶ ರಾಂಪುರ, ಕಸ್ತೂರಿ ಕರಿಗೌಡರ, ಮಹಾದೇವಿ ಚರಂತಿಮಠ ಇತರರು ಇದ್ದರು.