

ಶಿವಾನಂದ ಹಿರೇಮಠ ಗದಗ
ಶಾಲಾ ಆರಂಭೋತ್ಸವ ನಡುವೆಯೇ ಪೂರ್ವ ಮುಂಗಾರು ಆರಂಭವಾಗಿದೆ. ನಿರಂತರ ಮಳೆ ಹಿನ್ನೆಲೆ ಜಿಲ್ಲೆಯ ಸರ್ಕಾರಿ ಪೂರ್ವ ಪ್ರಾಥಮಿಕ, ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಹಲವು ಕಟ್ಟಡಗಳು ಶಿಥಿಲಾವಸ್ಥೆಗೆ ತಲುಪಿವೆ. ಶಾಲಾ ಮೇಲಾವಣಿ, ಗೋಡೆ, ಶೌಚಾಲಯಗಳ ದುರಸ್ಥಿ ಕಾರ್ಯ ನಡೆಯಬೇಕಿದೆ. ಅನೇಕ ಕೊಠಡಿಗಳು ಬೀಳುವ ಹಂತಕ್ಕೆ ತಲುಪಿದ್ದು, ಕೆಲವೆಡೆ ಮಕ್ಕಳು ಜೀವ ಕೈಯಲ್ಲಿ ಹಿಡಿದು ಶಾಲೆಗೆ ಹೋಗುವಂತಾಗಿದೆ. ಈ ನಡುವೆ ಗ್ಯಾರಂಟಿ ಯೋಜನೆಗಳಿಂದ ಆಥಿರ್ಕ ಕೊರತೆ ಅನುಭವಿಸುತ್ತಿರುವ ರಾಜ್ಯ ಸರ್ಕಾರದ ಬಳಿ ಶಾಲಾ ದುರಸ್ಥಿಗೆ ಸೂಕ್ತ ಅನುದಾನ ಇಲ್ಲವಾಗಿದ್ದು, ಪ್ರಸಕ್ತ ಸಾಲಿನಲ್ಲಿ ಶಾಲಾ ದುರಸ್ತಿಗೆ ಅಗತ್ಯ ಅನುದಾನ ಲಭ್ಯತೆ ಇಲ್ಲವಾಗಿದೆ. ಕಳೆದ ಸಾಲಿನ ದುರಸ್ಥಿ ಕಾಮಗಾರಿಗಳೇ ಇನ್ನೂ ಮುಗಿದಿಲ್ಲ ಎಂಬ ಕೊರಗು ಶಿಕ್ಷಣ ಪ್ರೇಮಿಗಳನ್ನು ಕಾಡುತ್ತಿದೆ.
ಜಿಲ್ಲೆಯಲ್ಲಿ ದುರಸ್ಥಿ ಕಾಮಗಾರಿ ಅವಶ್ಯ ಇರುವ 1094 ಶಾಲಾ ಕೊಠಡಿಗಳ ಪೈಕಿ ಕಳೆದ ಸಾಲಿನಲ್ಲಿ 631 ಶಾಲೆಗಳ ಕಾಮಗಾರಿಗಳನ್ನು ಕೈಗೊಳ್ಳಲಾಗಿತ್ತು. ಪ್ರಸಕ್ತ ಸಾಲಿನಲ್ಲಿ ರಾಜ್ಯ ಸರ್ಕಾರದ 1.76 ಕೋಟಿ ಅನುದಾನದಲ್ಲಿ ಜಿಲ್ಲೆಯಲ್ಲಿ 42 ಶಾಲಾ ಕೊಠಡಿಗಳ ದುರಸ್ತಿ ಕಾಮಗಾರಿಯನ್ನು ಕೈಗೊಳ್ಳಲಾಗಿದೆ. ಜತೆಗೆ ಜಿಪಂ ಅನಿರ್ಭಂದಿತ ಅನುದಾನ 77 ಲಕ್ಷ ರೂ. ಮೊತ್ತದ ಕ್ರೀಯಾ ಯೋಜನೆಯನ್ನು ಶಿಕ್ಷಣ ಇಲಾಖೆ ಸಿದ್ಧಪಡಿಸುತ್ತಿದ್ದು, ಈ ಕ್ರೀಯಾ ಯೋಜನೆಗೆ ಅನುಮೋದನೆ ವಿಳಂಬವಾಗಲಿದೆ ಎಂದು ಮೂಲಗಳು ತಿಳಿಸಿವೆ.
ಈ ವರ್ಷದ ಅನುಮೋದನೆ?
ಪ್ರಸಕ್ತ ಸಾಲಿನಲ್ಲಿ ಶಿರಹಟ್ಟಿ ವಿಧಾನಸಭಾ ಕ್ಷೇತ್ರದ ಯತ್ತಿನ ಹಳ್ಳಿ, ಯಳವತ್ತಿ, ಹೊಳಲಾಪುರ ಮತ್ತು ಬಟ್ಟರು ಸೇರಿದಂತೆ 12 ಶಾಲಾ ಕೊಠಡಿಗಳ ದುರಸ್ಥಿಗೆ 55 ಲಕ್ಷ ರೂ. ರಾಜ್ಯ ಸರ್ಕಾರ ಬಿಡುಗಡೆ ಮಾಡಿದೆ. ಅದೇ ರೀತಿ ಗದಗ ವಿಧಾನಸಭಾ ಕ್ಷೇತ್ರದ ಹುಲಕೋಟಿ ಗ್ರಾಮದ ಉರ್ದು ಶಾಲೆ, ಹಿರೇಹಂದಿಗೋಳ, ಕಣವಿ ಮತ್ತು ಬೆಟಗೇರಿ ನಂ 3 ಶಾಲೆ ಸೇರಿದಂತೆ 9 ಶಾಲಾ ಕೊಠಡಿ ದುರಸ್ಥಿಗೆ 4.46 ಲಕ್ಷರೂ, ರೋಣ ವಿಧಾನಸಭಾ ಕ್ಷೇತ್ರದ ತೋಟಗಂಟಿ, ಮೇವುಂಡಿ, ಪೇಠಾಲೂರು ಹಾಗೂ ಹಿರೇವಡ್ಡಟ್ಟಿ ಸೇರಿದಂತೆ 9 ಶಾಲಾ ಕೊಠಡಿಗಳಿಗೆ 40.46 ಲಕ್ಷ ರೂ ಮತ್ತು ನರಗುಂದ ವಿಧಾನಸಭಾ ಕ್ಷೇತ್ರದ ಅರಿಸಿನಗೋಡಿ, ಕುರಗೋವಿನಕೊಪ್ಪ, ಯರೇಬೇಲೇರಿ ಸೇರಿದಂತೆ 12 ಶಾಲಾ ಕೊಠಡಿಗಳ ದುರಸ್ಥಿಗೆ 40.46 ಲಕ್ಷ ರೂ, ಸರ್ಕಾರ ಬಿಡುಗಡೆ ಮಾಡಿದೆ.
ಹಿಂದಿನ ವರ್ಷದ ಕಾಮಗಾರಿಗಳು?
ಶಿಕ್ಷಣ ಇಲಾಖೆ ಮೂಲಗಳ ಪ್ರಕಾರ ಜಿಲ್ಲೆಯಲ್ಲಿ ಕಳೆದ ಸಾಲಿನಲ್ಲಿ 631 ಕೊಠಡಿಗಳ ದುರಸ್ಥಿ ಕಾಮಗಾರಿ ಕೈಗೊಂಡಿದ್ದು, ವಿವೇಕ ಕೊಠಡಿ, ಎಸ್ಸಿ, ಎಸ್ಟಿ ಯೋಜನೆ, ಎಸ್ಎಸ್ಕೆ ಯೋಜನೆ, ಮತ್ತಿತರ ಯೋಜನೆಗಳ ಅಡಿಯಲ್ಲಿ ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆ (ಪಿಆರ್ಡಿ), ನಿಮಿರ್ತಿ ಕೇಂದ್ರ, ಮತ್ತಿತರ ಏಜೆನ್ಸಿಗಳ ಮೂಲಕ ಜಿಲ್ಲೆಯಲ್ಲಿ ಶಾಲಾ ಕೊಠಡಿಗಳ ನಿರ್ಮಾಣ ಕಾರ್ಯ ಮುಂದುವರಿದೆ. ಹಿಂದಿನ ವರ್ಷದ ಕಾಮಗಾರಿಗಳಿಗೆ ತಾಪಂ ಮಹತ್ವಾಕಾಂೆ ಯೋಜನೆಯಡಿ 5.79 ಕೋಟಿ ರೂ. 2024&25ನೇ ಸಾಲಿನಲ್ಲಿ 20 ಲಕ್ಷ ರೂ. ಸಣ್ಣ ಪುಟ್ಟ ದುರಸ್ಥಿಗೆ ಅನುದಾನ ನೀಡಲಾಗಿದೆ. ಈ ಕಾಮಗಾರಿಗಳು ಪ್ರಗತಿ ಸ್ಥಿತಿಯಲ್ಲಿವೆ.
= = = =
ಶಾಸಕರ ಆಸಕ್ತಿ:
ರೋಣ ವಿಧಾನಸಭಾ ಕ್ಷೇತ್ರದ ಶಾಲಾ ಕೊಠಡಿಗಳಿಗೆ ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಿಂದ ವಿಶೇಷವಾಗಿ 3 ಕೋಟಿ ರೂ. ಅನುದಾನ ಮಿಸಲಿಟ್ಟಿದ್ದು, ವಿಧಾನಸಭಾ ಕ್ಷೇತ್ರವಾರು ಬಹುದೊಡ್ಡ ಅನುದಾನ ಇದಾಗಿದೆ.
= = = =
ಬಾಕ್ಸ್:
ಪ್ರಸ್ತಾವನೆ ಸಲ್ಲಿಕೆ:
ಜಿಲ್ಲೆಯಲ್ಲಿ ಆರಂಭವಾಗಿರುವ 631 ಶಾಲಾ ಕೊಠಡಿ ದುರಸ್ಥಿ ಹೊರತುಪಡಿಸಿ ವಿಪತ್ತು ನಿರ್ವಹಣಾ(ಎಸ್ಡಿಆರ್ಎ್) ಅಡಿಯಲ್ಲಿ 25 ಶಾಲೆಗಳ 49 ಕೊಠಿಗಳ ದುರಸ್ಥಿಗೆ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ಪ್ರಸ್ತಾವನೆಗೆ ರಾಜ್ಯ ಸರ್ಕಾರ ಅನುಮೋದನೆ ನೀಡುವುದು ವಿಳಂಭವಾಗಬಹುದು ಎನ್ನಲಾಗಿದೆ.
= = = =
ವಿವೇಕ ಕೊಠಡಿ ರ್ಪೂಣ:
ಬಸವರಾಜ ಬೊಮ್ಮಾಯಿ ಸಿಎಂ ಆಗಿದ್ದ ಸಂದರ್ಭದಲ್ಲಿ ಗದಗ ಜಿಲ್ಲೆಗೆ 100 ವಿವೇಕ ಕೊಠಡಿಗಳ ನಿರ್ಮಾಣಕ್ಕೆ ಅನುಮೋದನೆ ನೀಡಿದ್ದರು. ನಿಮಿರ್ತಿ ಕೇಂದ್ರದ ಮೂಲಕ ಈಗಾಗಲೇ 100 ಹೊಸ ವಿವೇಕ ಕೊಠಡಿಗಳು ನಿರ್ಮಾಣಗೊಂಡಿವೆ. ಮುಂಗಡವಾಗಿ ಅನುದಾನ ಬಿಡುಗಡೆ ಮಾಡಿದ್ದರಿಂದ ಈ ಕೊಡಿಗಳ ನಿರ್ಮಾಣಕ್ಕೆ ಅನುದಾನದ ಕೊರತೆ ಉಲ್ಭಣಿಸಿಲ್ಲ. ಹಾಗಾಗಿ ಕೊಠಡಿಗಳು ರ್ಪೂಣಗೊಂಡು ಮಕ್ಕಳಿಗೆ ಪ್ರಸಕ್ತ ಸಾಲಿನಿಂದ ಲಭ್ಯವಾಗಿದೆ.
= = == =
ಕೋಟ್:
ಅತ್ಯುತ್ತಮವಾಗಿ ಶಿಕ್ಷಣ ನೀಡುವುದಾಗಿ ಹೇಳಿಕೊಳ್ಳುವ ಸರ್ಕಾರಗಳು ಸರ್ಕಾರಿ ಶಾಲೆಗಳ ಬಗ್ಗೆ ಮಾತ್ರ ನಿರ್ಲಕ್ಷ$್ಯ ತೋರುತ್ತಲೇ ಇವೆ. ಪ್ರತಿ ವರ್ಷವೂ ಮಳೆಗಾಲ ಬಂದರೆ ಹಲವು ಶಾಲೆಗಳ ಕೊಠಡಿಗಳು ದುರಸ್ಥಿ ಹಂತಕ್ಕೆ ತಲುಪುತ್ತವೆ. ಕಳಪೆ ಕಾಮಗಾರಿಗಳಿಂದ ಕೊಠಡಿಗಳು ಆದಷ್ಟು ಬೇಗ ದುರಾವಸ್ಥೆ ತಲುಪುತ್ತವೆ. ಆದಷ್ಟು ಬೇಗ ಮಕ್ಕಳಿಗೆ ಅನುಕೂಲರ ವಾತಾವರಣ ನಿಮಿರ್ಸಲು ಕೊಠಡಿಗಳ ದುರಸ್ಥಿಗೊಳ್ಳಬೇಕಿದೆ.
-ರವಿಕಾಂತ ಅಂಗಡಿ, ಸಾಮಾಜಿಕ ಹೋರಾಟಗಾರ
ಕೋಟ್:
ಜಿಲ್ಲಾ ಉಸ್ತುವಾರಿ ಸಚಿವರ ನಿರ್ದೇಶನದಂತೆ ಶಾಲಾ ಆರಂಭಕ್ಕೂ ಮುನ್ನ ಶೌಚಾಲಯ ಮತ್ತು ಮೂಲಭೂತ ಸೌಕರ್ಯಗಳನ್ನು ಎಲ್ಲ ಶಾಲೆಗಳಿಗೆ ಒದಗಿಸಲಾಗಿದೆ. ಸಣ್ಣ ಪುಟ್ಟ ದುರಸ್ಥಿಗಳನ್ನು ಶಾಲಾ ಹಂತದಲ್ಲೇ ರಿಪೇರಿ ಮಾಡಲಾಗಿದೆ. ಹೆಚ್ಚು ವೆಚ್ಚ ವ್ಯಯಿಸುವ ಕೊಠಡಿಗಳ ದುರಸ್ಥಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಜತಗೆ ಹಿಂದಿನ ವರ್ಷದ 631 ಕೊಠಡಿ ದುರಸ್ಥಿ ಕಾಮಗಾರಿ ಪ್ರಗತಿಯಲ್ಲಿದ್ದು, ಈ ವರ್ಷ 42 ಕೊಠಡಿಗಳ ದುರಸ್ಥಿ ಕೈಗೆತ್ತಿಕೊಳ್ಳಲಾಗುತ್ತಿದೆ
- ಆರ್. ಎಸ್. ಬುರಡಿ, ಡಿಡಿಪಿಐ, ಗದಗ