

ವಿಜಯವಾಣಿ ಸುದ್ದಿಜಾಲ ಗದಗ
ಬೆಟಗೇರಿ ಖಾಸಗಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 6 ಮಕ್ಕಳ ಕೂದಲು ಕತ್ತರಿಸಿದ ಕಂಪ್ಯೂಟರ್ ಶಿಕ್ಷಕನಿಗೆ ಪಾಲಕರು ಧರ್ಮದೇಟು ನೀಡಿದ ಟನೆ ಮಂಗಳವಾರ ನಡೆದಿದೆ. ಬೆನೋಯ ಎಂಬ ಶಿಕ್ಷಕ ಶಾಲಾ ಮಕ್ಕಳ ಕೂದಲು ಕತ್ತರಿಸುವ ಮೂಲಕ ಉದ್ದಟತನ ತೋರಿದ್ದ. ಕೂದಲು ಕತ್ತರಿಸುವ ವೇಳೆ 7ನೇ ತರಗತಿಯ ವಿದ್ಯಾಥಿರ್ ಆದಿತ್ಯ ಎಂಬವನಿಗೆ ಕತ್ತರಿಯಿಂದ ಗಾಯವಾಗಿದೆ. ಕೂದಲು ಕಟ್ ಮಾಡಬೇಡಿ ಅಂತ ಬಾಲಕ ಗೋಗರೆದರೂ ಕೂದಲು ಕತ್ತರಿಸಿದ್ದಾರೆ ಎಂದು ವಿದ್ಯಾಥಿರ್ಗಳು ಆರೋಪಿಸಿದ್ದಾರೆ.
ವಿಷಯ ತಿಳಿದು ಶಾಲೆಗೆ ಆಗಮಿಸಿದ ಪಾಲಕರು, ಶ್ರೀರಾಮಸೇನಾ ಕಾಯ್ಕರ್ತರು ಶಿಕ್ಷಕನಿಗೆ ಧರ್ಮದೇಟು ನೀಡಿದ್ದಾರೆ. ಈ ವೇಳೆ ಶಾಲಾ ಆವರಣದಲ್ಲಿ ಕೆಲಕಾಲ ಹೈಡ್ರಾಮಾ ನಡೆಯಿತು. ಪಾಲಕರು ಮತ್ತು ಶಿಕ್ಷಕರ ನಡುವೆ ಮಾತಿನ ಚಕಮಿಕಿಯು ಜರುಗಿತು.
ಸ್ಥಳಕ್ಕೆ ಆಗಮಿಸಿದ ಗದಗ ಶಹರ ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಎಸ್, ಬುರಡಿ ವರದಿಯನ್ನು ಪಡೆದರು. ಶಿಕ್ಷಕನಿಗೆ ತಿಳಿಹೇಳಿದ ಅವರು, ಮೊದಲು ಶಿಕ್ಷಕನಾದವರು ಚನ್ನಾಗಿರಬೇಕು. ನೀನು(ಶಿಕ್ಷಕ) ಹೆಬ್ಬುಲಿ ಕಟಿಂಗ್ ಮಾಡಿಸಿದ್ದಿಯಾ. ಮಕ್ಕಳಿಗೆ ಕಟಿಂಗ್ ಮಾಡಿಸಿಕೊಂಡು ಬನ್ನಿ ಎನ್ನುವುದು ಯಾವ ನ್ಯಾಯ ಎಂದರು.
ಬೆನೋಯ ಶಿಕ್ಷಕನ ಮೇಲೆ ಕೇಸ್ ದಾಖಲಾಗಬೇಕು. ವೃತ್ತಿಯಿಂದ ವಜಾಗೊಳಿಸುವಂತೆ ಆಗ್ರಹಿಸಿದರು. ನಂತರ ದುರ್ವರ್ತನೆ ತೋರಿದ ಶಿಕ್ಷಕನ ಬಗ್ಗೆ ಬಿಇಒ ಅವರು ವರದಿ ಪಡೆದುಕೊಂಡರು. ಮೇಲಾಧಿಕಾರಿಗಳಿಗೆ ವರದಿ ನೀಡಿ ಮುಂದಿನ ಕ್ರಮ ಜರುಗಿಸುವುದಾಗಿ ಬರವಸೆ ನೀಡಿದರು. ಶಿಕ್ಷಕ ಬೆನೋಯನನ್ನು ಪೊಲೀಸ್ ವಶಕ್ಕೆ ನೀಡಲಾಯಿತು.