ಶಿಕ್ಷಕಿಯರ ರಕ್ಷಣೆಗೆ ಶಾಲೆಗೊಂದು ಶಿಕ್ಷಕಿಯರ ಸಮಿತಿ ರಚಿಸಲು ಸೂಚನೆ

06GDG01A
Published on

ವಿಜಯವಾಣಿ ವಿಶೇಷ ಗದಗ

ಶಾಲಾ ಶಿಕ್ಷಕಿಯರ ಮೇಲೆ ಲೈಂಗಿಕ ಹಾಗೂ ಇತರೆ ದೌರ್ಜನ್ಯ ಪ್ರಕರಣಗಳು ಬೆಳಕಿಗೆ ಬರುತ್ತಿರುವ ಹಿನ್ನೆಲೆ ಶಿಕ್ಷಕಿಯರಿಗೆ ಆಡಳಿತಾತ್ಮಕ ಕಾನೂನಾತ್ಮಕ, ಸಂವಿಧಾನಾತ್ಮಕ ರಣೆ ಒದಗಿಸಲು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಶಿಕ್ಷಣ ಇಲಾಖೆ ಮುಂದಾಗಿದೆ. 10ಕ್ಕಿಂತ ಹೆಚ್ಚು ಸಿಬ್ಬಂದಿ ಇರುವ ಶಾಲೆಗಳಲ್ಲಿ ಶಿಕ್ಷಕಿಯರ ಸಮಿತಿ ರಚಿಸಲು ಮತ್ತು ಸಮಿತಿ ಮೂಲಕ ಶಿಕ್ಷಕಿಯರ ದೂರು ದುಮ್ಮಾನ ಪರಿಹರಿಸಲು ಶಿಕ್ಷಣ ಇಲಾಖೆ ಜಿಲ್ಲಾ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದೆ.

ಏನಿದು ಪ್ರಕರಣ:

ರಾಜ್ಯದಲ್ಲಿ ಸರ್ಕಾರಿ ಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಮಹಿಳಾ ಶಿಕ್ಷಕರಿಯರು, ಮುಖ್ಯ ಶಿಕರ ಮೇಲೆ ಲೈಂಗಿಕ ದೌರ್ಜನ್ಯ, ಇತರೆ ದೌರ್ಜನ್ಯ ಪ್ರಕರಣಗಳ ಬಗ್ಗೆ ಆಗಾಗ ಪ್ರಕರಣರಗಳು ಬೆಳಕಿಗೆ ಬರುತ್ತಿದ್ದವು. ಹಾಗಾಗಿ ಪ್ರಸಕ್ತ ಸಾಲಿನಲ್ಲಿ ರಾಜ್ಯ ಮಹಿಳಾ ಮುಖ್ಯ ಶಿಕರ ಒಕ್ಕೂಟ ಮತ್ತು ರಾಷ್ಟ್ರೀಯ ಮಹಿಳಾ ದೌರ್ಜನ್ಯ ನಿಯಂತ್ರಣ ದಳದಿಂದ ರಾಜ್ಯಾದ್ಯಂದ ಸಮೀೆ ನಡೆಸಿ, ಎಲ್ಲೆಲ್ಲಿ ಶಿಕ್ಷಕರಿಯರ ಮೇಲೆ ಇಂತಹ ದೌರ್ಜನ್ಯ ಪ್ರಕರಣಗಳು ನಡೆದಿವೆ ಎಂಬುದನ್ನು ವರದಿ ಸಿದ್ಧಪಡಿತ್ತು. ವರದಿಯನ್ನು ರಾಷ್ಟ್ರೀಯ ಶಿಣ ಆಡಳಿತ ಸುಧಾರಣೆ ಇಲಾಖೆ ಮತ್ತು ಪ್ರಾದೇಶಿಕ ತನಿಖಾ ದಳಕ್ಕೆ ಸಲ್ಲಿಸಲಾಗಿತ್ತು. 185ಕ್ಕೂ ಹೆಚ್ಚು ಅಧಿಕ ಪ್ರಕರಣಗಳು ಬೆಳಕಿಗೆ ಬಂದಿದ್ದವು. ವರದಿ ಪರಿಶೀಲಿಸಿದ ಪ್ರಾದೇಶಿಕ ತನಿಖಾ ದಳವು ರಾಜ್ಯ ಸರ್ಕಾರಕ್ಕೆ/ಶಿಕ್ಷಣ ಇಲಾಖೆಗೆ ಪತ್ರ ಬರೆದು, ಪ್ರಕರಣಗಳ ತನಿಖೆ ನಡೆಬೇಕು ಮತ್ತು ಶಿಕ್ಷಕಿಯರ ಗೌರವ ದೃಷ್ಟಿಯಿಂದ ತನಿಖೆಯನ್ನು ಗೌಪ್ಯತೆ ಕಾಪಾಡಿಕೊಳ್ಳಬೇಕು ಎಂದು ಪತ್ರದಲ್ಲಿ ಉಲ್ಲೇಖಿಸಿತ್ತು.

ಆದೇಶದಲ್ಲಿ ಏನಿದೆ:

ದೌರ್ಜನ್ಯಕ್ಕೆ ಒಳಗಾಗುವ ಶಿಕ್ಷಕಿಯರು ದೂರು ನೀಡುವ ಸಂದರ್ಭದಲ್ಲಿ ಸ್ಥಳಿಯ ಮಟ್ಟದಲ್ಲಿ ಜೀವ ಬೆದರಿಕೆ ಸಂಭವ ಇರುತ್ತದೆ. ಈ ಹಿನ್ನೆಲೆ ಸಂ ರಚಿಸುವ ಮೂಲಕ ಶಿಕ್ಷಕಿಯರ ಮಾಹಿತಿ ಗೌಪ್ಯವಾಗಿ ಇಟ್ಟುಕೊಳ್ಳಲು ಸಂ ರಚೆನೆಗೆ ಇಲಾಖೆ ನಿರ್ಧರಿಸಿದೆ. 10 ಕ್ಕಿಂತ ಹೆಚ್ಚು ಸಿಬ್ಬಂದಿ ಇರುವ ಶಾಲೆಗಳಲ್ಲಿ ಮತ್ತು 5 ಕ್ಕಿಂತ ಕಡಿಮೆ ಶಿಕ್ಷಕಿಯರು ಇರುವ ಶಾಲೆಗಳಲ್ಲಿ ಅಡುಗೆ ಸಹಾಯಕಿಯರನ್ನು ಸಮಿತಿಗೆ ಇಳಗೊಳಿಸಲು ಸೂಚಿಸಲಾಗಿದೆ. ಶಿಕ್ಷಕಿಯರ ಮೇಲಿನ ದೌರ್ಜನ್ಯ ಪ್ರಕರಣಗಳ ಮೇಲ್ವಿಚಾರಣೆಯನ್ನು ಜಿಲ್ಲಾ ಮಟ್ಟದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನಿರ್ವಹಿಸುತ್ತದೆ.

ಕೋಟ್​:

ಶಿಕ್ಷಕಿಯರ ಮೇಲೆ ದೌರ್ಜನ್ಯ ಸಹಿಸಲಾಗದು. ಈ ಹಿಂದೆ ಹಲವು ಬಾರಿ ಸರ್ಕಾರದ ಮಟ್ಟದಲ್ಲಿ ಶಿಕ್ಷಕಿಯರ ರಕ್ಷಣೆ ಕುರಿತು ವಿಷಯ ಪ್ರಸ್ತಾಪಿಸಿದ್ದೆ. ಈಗ ಶಾಲೆಗೊಂದು ಸಮಿತಿ ರಚಿಸಿ, ಆ ಮೂಲಕ ಶಿಕ್ಷಕಿಯರ ಮೇಲಿನ ದೌರ್ಜನ್ಯ ತೆಡೆಗೆ ಸರ್ಕಾರ ಕ್ರಮ ವಹಿಸಿದೆ. ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ಆರೋಪಿತರ ಮೇಲೆ ಕ್ರಮ ಕೈಗೊಳ್ಳಬೇಕಾಗಿರುವುದು ಸರ್ಕಾರ ಕರ್ತವ್ಯ.

ಕೋಟ್​:

ಎಲ್ಲ ಜಿಲ್ಲೆಗಳಿಗೆ ಈಗಾಗಲೇ ಸೂಚನೆ ನೀಡಲಾಗಿದೆ. ಶಿಕ್ಷಕಿಯ ಸಮಿತಿಗಳಿಂದ ಬಂದ ದೂರುಗಳನ್ನು ಗೌಪ್ಯವಾಗಿಟ್ಟು ವಿಚಾರಣೆ ನಡೆಸಲಾಗುವುದು. ಶಿಕ್ಷಕಿಯರಿಗೆ ಇಲಾಖೆ ರಕ್ಷಣೆ ನೀಡುತ್ತದೆ.

ಜಯಶ್ರೀ ಶಿಂತ್ರಿ

ಅಪರ ಆಯುಕ್ತರು, ಶಿಕ್ಷಣ ಇಲಾಖೆ, ಧಾರವಾಡ

ಕೋಟ್​:

ಶಿಕ್ಷಣ ಇಲಾಖೆಯ ಅಪರ ಆಯುಕ್ತರಿಂದ ಸೂಚನೆ ಬಂದಿದೆ. ಈಗಾಗಲೇ ಭಾಗಶಃ ಶಾಲೆಗಳಲ್ಲಿ ಸಮಿತಿ ರಚಿಸಲಾಗಿದೆ. ಈ ವಾರಾಂತ್ಯದೊಳಗೆ ಎಲ್ಲ ಶಾಲೆಗಳಲ್ಲಿ ಸಮಿತಿ ರಚನೆ, ಅಧ್ಯಕ್ಷ, ಸಮಿತಿ ಸದಸ್ಯರ ರಚಿಸಿ ವರದಿ ಸಲ್ಲಿಸಲಾಗುವುದು.

ಆರ್​. ಎಸ್​. ಬುರಡಿ, ಡಿಡಿಪಿಐ, ಗದಗ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net