ವೃತ್ತಕ್ಕೆ ಸಂತಸೇನಾ ಮಹಾರಾಜರ ಹೆಸರಿಡಲು ಸವಿತಾ ಸಮಾಜದಿಂದ ಆಗ್ರಹ

05GDG06
ಗದಗ ನಗರದ ವಾರ್ಡ್​ ನಂ. 29ರ ಪ್ರಮುಖ ವೃತ್ತಕ್ಕೆ ಸಂತ ಸೇನಾ ಮಹಾರಾಜರ ಹೆಸರು ನಾಮಕರಣ ಮಾಡಬೇಕು ಎಂದು ಆಗ್ರಹಿಸಿ ಸವಿತಾ ಸಮಾಜ ನಗರಸಭೆ ಅಧ್ಯೆ ಉಷಾ ದಾಸರ ಅವರಿಗೆ ಮನವಿ ಸಲ್ಲಿಸಿತು. ಕೃಷ್ಣ ಹಡಪದ, ಪ್ರಕಾಶ ಮಾನೆ, ಸಂತೋಷ ಮಾನೆ, ಮಾದೇವ ಮಾನೆ, ಕುಮಾರ ಆದೋನಿ, ಸುನೀಲ ರಾಯಚೂರ, ರವಿ ಕೊಲ್ಲಾಪೂರ. ಪ್ರಕಾಶ ಬುದೂರ, ಸಾಗರ ಮಾನೆ, ಅಕ್ಷಯ ಮಾನೆ, ದೀಪಕ ಗಂಗಾಧರ ಹಲವರು ಇದ್ದರು.
Published on

ವಿಜಯವಾಣಿ ಸುದ್ದಿಜಾಲ ಗದಗ
ನಗರದ 29ನೇ ವಾಡಿರ್ನಲ್ಲಿ ಯಾವುದಾದರೂ ಒಂದು ವೃತ್ತಕ್ಕೆ ಸಂತ ಸೇನಾ ಮಹಾರಾಜರ ಹೆಸರು ನಾಮಕರಣ ಮಾಡಬೇಕು ಎಂದು ಜಿಲ್ಲಾ ಸವಿತಾ ಸಮಾಜದಿಂದ ನಗರಸಭೆ ಅಧ್ಯೆ ಉಷಾ ದಾಸರ ಅವರಿಗೆ ಶನಿವಾರ ಮನವಿ ಸಲ್ಲಿಸಿ ಆಗ್ರಹಿಸಲಾಯಿತು.
ಸವಿತಾ ಸಮಾಜದ ಜಿಲ್ಲಾಧ್ಯಕ್ಷ ಕೃಷ್ಣ ಹಡಪದ ಮಾತನಾಡಿ, ರಾಜ್ಯದಲ್ಲಿ ಕ್ಷೌರಿಕ ವೃತ್ತಿಯನ್ನೇ ನೆಚ್ಚಿಕೊಂಡಿರುವ ಸಂತಸೇನಾ ಮಹಾರಾಜ ನಾಭೀಕ (ಸವಿತಾ) ಮರಾಠ ಸಂಘದ ಜನರು ಜಿಲ್ಲೆ ಹಾಗೂ ರಾಜ್ಯದಲ್ಲಿ ಶತಮಾನಗಳಿಂದ ತುಳಿತಕ್ಕೊಳಗಾಗಿದ್ದಾರೆ. ಶೈಕ್ಷಣಿಕ, ಆಥಿರ್ಕ ಹಾಗೂ ರಾಜಕೀಯ ಅವಕಾಶಗಳಿಂದ ವಂಚಿತರಾಗಿದ್ದಾರೆ. ಭವ್ಯ ಹಿನ್ನೆಲೆ ಹೊಂದಿರುವ ಸಂತಸೇನಾ ಮಹಾರಾಜ ನಾಭೀಕ ಮರಾಠ (ಸವಿತಾ) ಸಮಾಜ ಹಾಗೂ ಸಂತ ಸೇನಾ ಮಹಾರಾಜರ ಕೊಡುಗೆಯನ್ನು ಇಂದಿನ ಯುವ ಪೀಳಿಗೆಗೆ ಸಾರುವುದು ಅಗತ್ಯವಿದೆ ಅದರೊಂದಿಗೆ ಸಮಾಜದಲ್ಲಿ ತುಳಿತಕ್ಕೊಳಗಾದ ಮರಾಠ ಕ್ಷೌರಿಕ ಸಮುದಾಯದ ಗೌರವವನ್ನು ಹೆಚ್ಚಿಸಲು ನಗರದ ವಾರ್ಡ ನಂ 29. ರಲ್ಲಿ ಗುರುತಿಸಲಾದ ಎರಡು ವೃತ್ತದಲ್ಲಿ ಯಾವುದಾದರು ಒಂದು ವೃತ್ತಕ್ಕೆ ಸಂತಸೇನಾ ಮಹಾರಾಜರ ನಾಮಕರಣ ಮಾಡಬೇಕು ಎಂದು ಆಗ್ರಹಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ಅಧ್ಯೆ ಉಷಾ ದಾಸರ, ಸಮಾಜದ ಬಹುದಿನಗಳ ಬೆಡಿಕೆಯನ್ನು ಚಚಿರ್ಸಿ ಕೂಡಲೇ ಈಡೇರಿಸಿ ಕೊಡುವುದಾಗಿ ಬರವಸೆಯನ್ನು ನಿಡಿದರು
ಮುತ್ತಣ್ಣ ಮುಸಿಗೇರಿ, ದೆವೇಂದ್ರಪ್ಪ ರಾಂಪೂರ. ಹನಮಂತಪ್ಪ ರಾಂಪೂರ. ಪರಶುರಾಮ ರಾಂಪೂರ. ಬಲರಾಜ ಕೊಟೇಕಲ್​. ಯಲ್ಲಪ್ಪ ರಾಯಚೂರ. ನರಸೀಂಹ ಗುರುಜಾಲಕರ, ರಾಮಣ್ಣ ಮಾನೆ, ರಮೇಶ ರಾಂಪೂರ. ರಾಮ ಶ್ರೀಮಂತಮಾನೆ. ಪಾಂಡು ಕಾಳೆ, ದೀಪಕ ಮಾನೆ ಹಲವರು ಇದ್ದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net