ಕಾಶ್ಮೀರ ಉಗ್ರರ ದುಷತ್ಯಕ್ಕೆ ಸವಿತಾ ಸಮಾಜದ ರಾಜ್ಯ ನಿರ್ದೆಶಕ ಕಡೂರ ರವಿಕುಮಾರ ಖಂಡನೆ

26GDG05
Published on

ವಿಜಯವಾಣಿ ಸುದ್ದಿಜಾಲ ಗದಗ

ಕಾಶ್ಮೀರದ ಪಹಲ್ಗಾಮ ಬಳಿಯ ಬೈಸರ ಕಣಿವೆಯಲ್ಲಿ ಉಗ್ರರು ನಡೆಸಿದ ಕೃತ್ಯವನ್ನು ರಾಜ್ಯ ಸವಿತಾ ಸಮಾಜದ ರಾಜ್ಯ ನಿರ್ದೆಶಕ ಕಡೂರ ರವಿಕುಮಾರ ಅವರು ತೀವ್ರವಾಗಿ ಖಂಡಿಸಿದ್ದಾರೆ.

ಶನಿವಾರ ನಗರಕ್ಕೆ ಆಗಮಿಸಿ ರಾಜ್ಯದ ಪ್ರಥಮ ಸವಿತಾ ಮಹಷಿರ್ ವೃತ್ತಕ್ಕೆ ಬೇಟಿ ನೀಡಿ ಮಾತನಾಡಿದ ಅವರು, ಉಗ್ರರು ಗುಂಡಿನ ಮಳೆಗರೆದು ಕರ್ನಾಟಕದ ಮೂವರೂ ಸೇರಿ 28 ಪ್ರವಾಸಿಗರನ್ನು ಹತ್ಯೆ ಮಾಡಿರುವುದು ಅಕ್ಷಮ್ಯ ಹಾಗೂ ಅಮಾನವೀಯ ಟನೆ. ರಾಜ್ಯ ಸರ್ಕಾರ ಸೂಕ್ತ ಪರಿಹಾರ ನಿಡಬೇಕು ಎಂದು ಆಗ್ರಹಸಿದರು.

ಸಮಾಜದ ರಾಜ್ಯ ವಿಭಾಗೀಯ ಕಾರ್ಯದಶಿರ್ ಹನಮಂತಪ್ಪ ನಾಗಪ್ಪ ರಾಂಪೂರ ಮಾತನಾಡಿ ಕಾಶ್ಮೀರ ತನ್ನ ಗತ ವೈಭವಕ್ಕೆ ಮರಳುತ್ತಿದೆ ಏನ್ನುವಷ್ಟರಲ್ಲಿ ಪಾಕ್​ ಬೆಂಬಲಿತ ಉಗ್ರರು ಮತ್ತೆ ಪೈಶಾಚಿಕ ಕೃತ್ಯ ಮೆರೆದಿದ್ದಾರೆ. ಬೇಸಿಗೆ ರಜೆ ಕಳೆಯಲೆಂದು ಬಂದ ಅಮಾಯಕ ಪ್ರವಾಸಿಗರನ್ನು ಗುರಿಯಾಗಿಸಿಕೊಂಡು ಕುಟುಂಬದ ಸದಸ್ಯರ ಮುಂದೆಯೇ ಪುರುಷರ ಮೇಲೆ ದಾಳಿ ನಡೆಸಿದ್ದಾರೆ ಎಂದು ಟನೆಯನ್ನು ಖಂಡಿಸಿದರು.

ಜಿಲ್ಲಾ ಸವಿತಾ ಸಮಾಜದ ಜಿಲ್ಲಾಧ್ಯಕ್ಷ ಕೃಷ್ಣಾ ಹಡಪದ ಮಾತನಾಡಿ, ಪಾಕ್​ ಪ್ರೇರಿತ ಟಿಆರ್​ಎಫ್​ ಉಗ್ರ ಸಂಟನೆ ಈ ದಾಳಿಯನ್ನು ನಡೆಸಿದ್ದಾಗಿ ಒಪ್ಪಿಕೊಂಡಿದೆ. ಲಷ್ಕರ್​-ಎ -ತೊಯ್ಬಾದ ಅಂಗಸಂಸ್ಥೆ ಎಂದು ಕರೆಯಲ್ಪಡುವ ಟಿಆರ್​ಎಫ್​, ಜಮ್ಮು-ಕಾಶ್ಮೀರದಲ್ಲಿ 370ನೇ ವಿಧಿ ರದ್ದಾದ ಬಳಿಕ ಅಸ್ತಿತ್ವಕ್ಕೆ ಬಂದ ಸಂಟನೆ ಆಗಿದೆ. ಅನ್ಯ ರಾಷ್ಟ್ರಗಳ ಬೆಂಬಲ ಇಲ್ಲದೆ ಕಾಶ್ಮೀರದಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನು ನಿರಂತರವಾಗಿ ನಡೆಸಿಕೊಂಡು ಬರಲು ಸಾಧ್ಯವೇ ಇಲ್ಲ. ಹಾಗಾಗಿ ಈ ದಾಳಿಯ ಹಿಂದಿನ ಶಕ್ತಿ ಪಾಕಿಸ್ತಾನ ಎನ್ನುವುದು ಇಡೀ ವಿಶ್ವಕ್ಕೆ ಗೊತ್ತು. ವಿಶ್ವದ ಬಹುತೇಕ ದೇಶಗಳು ಈ ದಾಳಿಯನ್ನು ಖಂಡಿಸಿ ಭಾರತಕ್ಕೆ ಬೆಂಬಲ ಘೋಷಿಸಿವೆ. ಇದೀಗ ಅಂತಾರಾಷ್ಟ್ರೀಯ ಸಮುದಾಯ ಪಾಕಿಸ್ತಾನವನ್ನು ಭಯೋತ್ಪಾದಕ ರಾಷ್ಟ್ರ ಎಂದು ಘೋಷಿಸಿ ಎಲ್ಲ ನೆರವನ್ನು ತಡೆ ಹಿಡಿಯುವಂತೆ ಭಾರತ ಒತ್ತಡ ಹೇರಬೇಕು. ಕೇಂದ್ರ ಸರ್ಕಾರ ಉಗ್ರರನ್ನು ಮಟ್ಟ ಹಾಕಲೆಬೇಕು. ದಾಳಿಯಲ್ಲಿ ಮೃತಪಟ್ಟ ಕುಟುಂಬಗಳಿಗೆ ರಾಜ್ಯ ಸರ್ಕಾರದಿಂದ ಮತ್ತು ಕೇಂದ್ರ ಸರಕಾರದಿಂದ ತಲಾ 2 ಕೋಟಿ ರೂ. ಪರಿಹಾರ ಕಲ್ಪಿಸಬೇಕು ಎಂದು ಸವಿತಾ ಸಮಾಜದ ಜಿಲ್ಲಾ ಟಕದ ಜಿಲ್ಲಾಧ್ಯಕ್ಷ ಕೃಷ್ಣಾ ಹಡಪದ ಹೇಳಿದರು.

ಸವಿತಾ ಸಮಾಜ ಸುಧಾರಣಾ ಸಂದ ಅಧ್ಯಕ್ಷ ಪರಶುರಾಮ ಕೊಟೇಕಲ್ಲ, ಪಂಪಣ್ಣ ರಾಯಚೂರ, ಅರೂಣ ರಾಂಪೂರ ಸೇರಿದಂತೆ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net