ಹಿರಿಯರು ಹಾಗೂ ನಿವೃತ್ತ ಶೀಕ್ಷಕರಾದ ಎಸ್ ಎನ್ ಬಳ್ಳಾರಿ ಅವರು ಮಾತನಾಡಿ ಸಮಾಜದಲ್ಲಿ ಯಾರಾದರೂ ಬೆಳೆಯುತ್ತಿದ್ದರೆ, ಅವರ ಕಾಲೆಳೆಯುವ ಕೆಲಸ ಆಗಬಾರದು ಯಾಕಂದರೆ ಇರುವುದೇ ಸಣ್ಣ ಸಮಾಜ, ಅದರಲ್ಲೇ ಗುಂಪುಗಾರಿಕೆಯಾದರೆ ಆ ಸಮುದಾಯದ ಅಭಿವೃದ್ಧಿ ಹೇಗೆ ಸಾಧ್ಯ ಎಂದ ಅವರು ಇಂದಿಗೂ ಸಮಾಜದಲ್ಲಿ ಅಸ್ಪೃಶ್ಯತೆ, ಜಾತೀಯತೆ ಹೋಗಿಲ್ಲ. ಅದನ್ನು ಬೇರ ಸಮೇತ ತೆಗದಾಕುವುದಕ್ಕೆ ತಾವೇಲ್ಲರ ಒಗ್ಗಟ್ಟು ಅತೀ ಅವಶ್ಯವಾಗಿದೆ ಮತ್ತು ಸವಿತಾ ಮಹರ್ಷಿಗಳು ಸಾರಿದ ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯುವ ಕೆಲಸ ಮಾಡಬೇಕಿದೆ. ಹಾಗಾಗಿ ತಮ್ಮ ಗುಂಪುಗಾರಿಕೆಯನ್ನು ಈ ಕೂಡಲೆ ಬಿಟ್ಟು ತಾವೇಲ್ಲ ಒಂದಾಗಬೇಕು ಎಂದು ಕಿವಿ ಮಾತು ಹೇಳಿದರು