ಪೆಟ್ರೋಲ್​, ಡಿಸೆಲ್​ ಮೇಲೆ ಸೆಸ್​ ಸಂಗ್ರಹಿಸುವ ಚಿಂತನೆ: ಸಚಿವ ಸಂತೋಷ ಲಾಡ್​

18GDG07
Published on

ವಿಜಯವಾಣಿ ಸುದ್ದಿಜಾಲ ಗದಗ

ಪೆಟ್ರೋಲ್​, ಡಿಸೆಲ್​ ನಿಂದ ಸೆಸ್​ ಸಂಗ್ರಹಿಸಲು ಚಿಂತನೆ ನಡೆದಿದೆ. ಸಿಎಂ ಸಿದ್ದರಾಮಯ್ಯ ಅವರಲ್ಲೂ ಈ ವಿಷಯ ಪ್ರಸ್ತಾಪಿಸಲಾಗಿದೆ. ಸೆಸ್​ ಸಂಗ್ರಹಿಸುವುದರಿಂದ ಸಾವಿರಾರು ಕೋಟಿ ಸಂಗ್ರಹ ಆಗುತ್ತದೆ. ಇದರಿಂದ ಕಾಮಿರ್ಕರ ಅಭಿವೃದ್ಧಿ ಸಾಧ್ಯವಿದೆ. ಈ ಯೋಜನೆ ಜಾರಿಯಾದರೆ ದೇಶದಲ್ಲೇ ಮೊದಲ ಕಾರ್ಯಕ್ರಮ ಆಗಲಿದೆ ಎಂದು ಕಾಮಿರ್ಕ ಸಚಿವ ಸಂತೋಷ ಲಾಡ ಹೇಳಿದರು.

ನಗರದ ಎಪಿಎಂಸಿ ಆವರಣದಲ್ಲಿನ ಸ್ವಾಮಿ ವಿವೇಕಾನಂದ ಸಭಾಭವನದಲ್ಲಿ ಶುಕ್ರವಾರ ಏರ್ಪಡಿಸಿ ಅಸಂಟಿತ ಕಾಮಿರ್ಕರಿಗೆ ಸ್ಮಾರ್ಟ ಕಾರ್ಡ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ದೇಶದಲ್ಲಿ ಶೇ. 90 ರಷ್ಟು ಹಾಗೂ ರಾಜ್ಯದಲ್ಲಿ ಶೇ. 83 ರಷ್ಟು ಅಸಂಟಿತ ಕಾಮಿರ್ಕರು ಇದ್ದಾರೆ. ರಾಜ್ಯದಲ್ಲಿ 1.60 ಕೋಟಿ ಜನರು ಅಸಂಟಿತ ಕಾಮಿರ್ಕರಿದ್ದಾರೆ. ಸಣ್ಣ ಸಣ್ಣ ಸಂಟನೆ ಮೂಲಕ ಕಾಮಿರ್ಕ ಕೆಲಸ ಮಾಡುತ್ತಿರುವ ಜನರಿಗೆ ಇಂದು ಸ್ಮಾರ್ಟ ಕಾರ್ಡ ನೀಡಲಾಗುತ್ತಿದೆ. ಸಾಮೂಹಿಕವಾಗಿ ಸ್ಮಾರ್ಟಕಾರ್ಡ ನೀಡುವ ದೇಶದ ಮೊದಲ ಕಾರ್ಯಕ್ರಮ ಇದಾಗಿದೆ ಎಂದು ಹೇಳಿದರು.

ಅಪಘಾತ ಪ್ರಕರಣದಲ್ಲಿ ಪ್ರತಿ ದಿನ 20 ಸಾವು ಸಂಭವಿಸುತ್ತಿವೆ. ಇದರಲ್ಲಿ ಭಾಗಶಃ ಕಾಮಿರ್ಕರೇ ಅಸುನೀಗುತ್ತಿದ್ದಾರೆ. ಅವರ ಕುಟುಂಬಗಳಿಗೆ ಸಹಕಾರ ನೀಡಲು ರಾಜ್ಯದಲ್ಲಿ ಮೋಟಾರು ಸಾರಿಗೆ ಹಾಗೂ ಸಂಬಂಧಿತ ಕಾಮಿರ್ಕರ ಸಾಮಾಜಿಕ ಭದ್ರತೆ ಮತ್ತು ಕ್ಷೇಮಾಭಿವೃದ್ಧಿ ಮಂಡಳಿ ಸ್ಥಾಪನೆ ಮಾಡಲಾಗಿದೆ. ಸಾರಿಗೆಗೆ ಸಂಬಂಧಿಸಿದಂತೆ ಕಾರ್ಯ ನಿರ್ವಹಿಸುವ ಮೆಕ್ಯಾನಿಕ್​, ಲಾಜೆಸ್ಟಿಕ್​, ನಿಲ್ದಾಣ ಸಿಬ್ಬಂದಿ, ಕ್ಲಿನರ್​, ಚಾಲಕ, ನಿರ್ವಾಹಕ, ಗುಮಾಸ್ತ, ಕಾವಲುಗಾರಿ ಸೇರಿದಂತೆ ಎಲ್ಲ ಕಾಮಿರ್ಕರಿಗೆ ಬೋರ್ಡ ಮೂಲಕ 5 ಲಕ್ಷದ ವರೆಗೆ ವಿವಿಧ ರೀತಿಉಲ್ಲಿ ಸಹಾಕಾರ ನೀಡಲು ನಿರ್ಧರಿಸಲಾಗಿದೆ ಎಂದು ಸಚಿವ ಸಂತೋಷ ಲಾಡ ಹೇಳಿದರು.

ಅಶಾದೀಪ ಕಾರ್ಯಕ್ರಮ ಮೂಲಕ ಎಸ್ಸಿ ಎಸ್ಟಿ ಮಹಿಳೆಯರಿಗೆ 2.50 ಲಕ್ಷ ರೂ ಸಹಾಯಧನ ನೀಡಲಾಗುತ್ತಿದೆ. ಗ್ಯಾರಂಟಿ ಯೋಜನೆಗೆ ವರ್ಷಕ್ಕೆ 60 ಸಾವಿರ ಕೋಟಿ ಹಣ ವ್ಯಯಿಸಲಾಗುತ್ತಿದೆ. ಕೆರೆಯ ನೀರನ್ನು ಕೆರೆಗೆ ಚೆಲ್ಲಬೇಕು ಎಂಬಂತೆ ಬಡವರಿಂದ ವಿವಿಧ ರೂಪದಲ್ಲಿ ಸರ್ಕಾರಕ್ಕೆ ಪಾವತಿಯಾದ ತೆರಿಗೆ ಹಣವನ್ನು ಬಡವರಿಗೆ ನೀಡಲು ಗ್ಯಾರಂಟಿ ಯೋಜನೆ ಜಾರಿಗೆ ತರಲಾಗಿದೆ ಎಂದರು.

ವಿಧವೆ, ವೃದ್ಯಾಪ್ಯ ಸೇರಿದಂತೆ ಇತರೆ ಪಿಂಚಣಿ ಹಾಗೂ ಗೃಹಲಕ್ಷಿ ್ಮ ಯೋಜನೆಯಿಂದ ಪ್ರತಿ ಮನೆಗೆ ಪ್ರತಿ ತಿಂಗಳು 7 ಸಾವಿರ ರೂ. ಸಿಗುತ್ತಿದೆ. ಸ್ವಾತಂತ್ರ್ಯ ಭಾರತದಲ್ಲಿ ಪ್ರತಿ ಮನೆಗೆ ತಲುಪುವ ಯೋಜನೆಗಳನ್ನು ಜಾರಿ ತಂದಿದ್ದು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್​ ಸರ್ಕಾರ ಎಂದರು.

ಕಾರ್ಯಕ್ರಮದಲ್ಲಿ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಸಂತೋಷ ಲಾಡ್​, ಭಾರತ ಸರ್ಕಾರವು 225 ಲಕ್ಷ ಕೋಟಿ ಸಾಲ ಮಾಡಿದೆ. ಚಿನ್ನದ ಬೆಲೆ ಏರುತ್ತಲೇ ಸಾಗಿದೆ. ವಿಶ್ವದ ಹಿಂದುಳಿದ ದೇಶಗಳ ಸಮಾನವಾಗಿಯೂ ದೇಶ ಅಭಿವೃದ್ಧಿ ಹೊಂದುತ್ತಿಲ್ಲ. ಕೇಂದ್ರ ಸರ್ಕಾರ ಸುಳ್ಳು ವಿಷಯಗಳನ್ನು ಬಿತ್ತರಿಸಿ ತನ್ನ ಬೆನ್ನು ತಾನೆ ತಟ್ಟಿಕೊಳ್ಳುತ್ತಿದೆ ಎಂದು ಆರೋಪಿಸಿದರು.

ಶಾಸಕ ಜಿ.ಎಸ್​. ಪಾಟೀಲ ಮಾತನಾಡಿ, ಕಾಮಿರ್ಕ ಮಕ್ಕಳ ವಿದ್ಯಾರ್ಜನೆ ರಾಜ್ಯಾದ್ಯಂತ 30 ಕ್ಕೂ ಅಧಿಕ ವಸತಿ ನಿಲಯಗಳನ್ನು ಕಾಮಿರ್ಕ ಇಲಾಖೆಯಿಂದ ಮಂಜೂರು ಮಾಡಲಾಗಿದೆ. ಗದಗ ಜಿಲ್ಲೆಗೂ ಒಂದು ವಸತಿ ನಿಲಯ ಅನುಮೋದನೆ ಸಿಕ್ಕಿದೆ. ಗ್ಯಾರಂಟಿ ಯೋಜನೆಗಳಿಂದ ಸರ್ಕಾರದಲ್ಲಿ ಹಣ ಇಲ್ಲ ಎಂದು ಬಿಜೆಪಿ ಆರೋಪಿಸುತ್ತಲೆ ಇದೆ. ಆದರೆ, ನೂರಾರು ಕೋಟಿ ಹಣ ವೆಚ್ಚ ಭರಿಸಿ ಕಾಮಿರ್ಕ ಇಲಾಖೆ ಉತ್ತಮ ಯೋಜನೆ ಜಾರಿಗೆ ತರುತ್ತಿದೆ. ಬಿಜೆಪಿ ಆರೋಪಗಳಿಗೆ ಇಂತಹ ಕೆಲಸಗಳೇ ಪ್ರತ್ಯುತ್ತರ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಅಪಘಾತದಿಂದ ಮರಣ ಹೊಂದಿದ ಕಾಮಿರ್ಕರ ಕುಟುಂಬಕ್ಕೆ ತಲಾ 5 ಲಕ್ಷ ರೂ., ಶೈಕ್ಷಣಿಕ ಸಹಾಯಧನ 10 ಸಾವಿರ, ಆಶಾ ದೀಪ ಯೋಜನೆ ಅಡಿ. 1.50 ಲಕ್ಷ ರೂ. ಗಳನ್ನು ಅರ್ಹ ಫಲಾನುಬವಿಗಳಿಗೆ ವಿತರಿಸಲಾಯಿತು. 2000ಕ್ಕೂ ಅಧಿಕ ಕಾಮಿರ್ಕರಿಗೆ ಕಾರ್ಡ ವಿತರಣೆ ಮಾಡಲಾಯಿತು.

ಜಿಲ್ಲಾಧಿಕಾರಿ ಸಿ. ಎನ್​. ಶ್ರೀಧರ, ಸಿಇಒ ಭರತ್​ ಎಸ್​, ಎಸ್​.ಪಿ ರೋಹನ ಜಗದೀಶ, ಕೃಷ್ಣಗೌಡ ಪಾಟೀಲ, ಅಶೋಕ ಮಂದಾಲಿ, ಬಿ. ಬಿ. ಅಸೂಟಿ ಸೇರಿದಂತೆ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net