ಮಾಧ್ಯಮ ಪ್ರಕಟಣೆ ಮೂಲಕ ತಿಳಿಸಿದ ಅವರು, ವಾರದಲ್ಲಿ ದಸರಾ ಪ್ರಾರಂಭವಾಗುತ್ತದೆ, ಹಳ್ಳಿಗಳಲ್ಲಿ ಅತಿವೃಷ್ಟಿಯಿಂದ ಹಾಳಾದ ಬೆಳೆಗಳ ಕೊಯ್ಲು, ಹಿಂಗಾರಿಗೆ ಭೂಮಿ ಹದ ಗೊಳಿಸುವ ಕಾರ್ಯದಲ್ಲಿ ರೈತರು ಕೃಷಿ ಚಟುವಟಿಕೆಯಲ್ಲಿರುವಾಗ ಸರ್ಕಾರ ಕೆಲವೆ ದಿನಗಳಲ್ಲಿ ಸಮೀಕ್ಷೆ ಮೂಗಿಸುತ್ತೆವೆ ಎನ್ನುವದು ಸರಿಯಲ್ಲ; ಯಾವುದೋ ಒತ್ತಡಕ್ಕೆ ಒಳಗಾಗಿ ಸಮೀಕ್ಷೆ ಮಾಡುವುದು ಯಾವ ಪುರುಷಾರ್ಥಕ್ಕೆ. ರಾಜ್ಯದ ಸುಮಾರು 2 ಕೋಟಿ ಮನೆಗಳ ಸಮೀಕ್ಷೆ ಸುಲಭ ಸಾಧ್ಯವಲ್ಲ; ಬೇಸಿಗೆ ಕಾಲದಲ್ಲಿ ಸಮೀಕ್ಷೆ ಮಾಡುವದು ಉತ್ತಮ.
ಸರ್ಕಾರ ಹೊರಡಿಸಿರುವ ಹೊಸ ಜಾತಿಗಳ ಸೃಷ್ಟಿಮಾಡಿರುವದು ದುರದೃಷ್ಟಕರ. 1,400 ಜಾತಿಗಳ ಪಟ್ಟಿ ಪತ್ರಿಕೆಗಳಲ್ಲಿ ಪ್ರಕಟಿಸಿ ಅದರ ಸಂಬಂಧ ಆಕ್ಷೇಪಣೆಗಳನ್ನು ಕೇಳಿದ್ದರು. ನಂತರ ಅದರಲ್ಲಿರುವ ಕೆಲ ಅನವಾಶ್ಯಕವಾಗಿ ಸೃಷ್ಟಿಸಿದ್ದ ಜಾತಿಗಳು ಕೈಬಿಡಬೇಕಾಗಿತ್ತು ಮೊತ್ತೊಂದಷ್ಟು ಬಿಟ್ಟು ಹೋಗಿರುವ ಮತ್ತು ಅನಾವಶ್ಯಕ ಜಾತಿಗಳನ್ನು ಸೇರಿಸಿ ಜನರಿಗೆ ದಾರಿ ತಪ್ಪಿಸುವ ಕೆಲಸ ಮಾಡಿತ್ತಿರುವ ಸರ್ಕಾರದ ನೀತಿ ಸರಿಯಲ್ಲ. ಸರಕಾರದ ಯಾವುದೇ ಜಾತಿ ಪಟ್ಟಿಯಲ್ಲಿ ಇಲ್ಲದ, ಯಾವ ಆಯೋಗದ ಜಾತಿ ಪಟ್ಟಿಯಲ್ಲಿ ಇಲ್ಲದ ಹೊಸ ಜಾತಿಗಳನ್ನು ಸೃಷ್ಟಿಸಿದ್ದಾರೆ. ಕುರುಬ ಕ್ರಿಶ್ಚಿಯನ್, ಮಡಿವಾಳ ಕ್ರಿಶ್ಚಿಯನ್, ಒಕ್ಕಲಿಗ ಕ್ರಿಶ್ಚಿಯನ್- ಈ ರೀತಿ 107 ಕಡೆಗಳಲ್ಲಿ ಹೊಸ ಜಾತಿಗಳನ್ನು ಪ್ರಕಟಿಸಿದ್ದಾರೆ. ಅವುಗಳಿಗೆ ಕೋಡ್ ನಂಬರ್ ನೀಡಿದ್ದು, ಇದನ್ನು ಯಾವುದೇ ಕಾರಣಕ್ಕೂ ಒಪ್ಪಲಾಗದು ಎಂದು ಆಕ್ಷೇಪಿಸಿದರು.